ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಧುನಿಕತೆ ಬೆಳದಂತೆ ಮೋಬೈಲ್, ದೂರದರ್ಶನ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ ಗ್ರಾಮೀಣ ಜಾನಪದ ಸಂಸ್ಕೃತಿ, ನೃತ್ಯ, ಯಕ್ಷಗಾನ, ಮಹಾಭಾರತ-ರಾಮಾಯಣದಂತಹ ಕಥಾರೂಪಕಗಳು ಮಾಯವಾಗುತ್ತಿರುವದು ತೀರ ಆತಂಕಕಾರಿ ಸಂಗತಿ. ಮಕ್ಕಳಲ್ಲಿರುವ ಅಭಿರುಚಿ, ಆಸಕ್ತಿ ಮತ್ತು ಪ್ರತಿಭೆ ಗುರುತಿಸಿ, ಸುಪ್ತವಾದ ಕಲೆ-ಕೌಶಲ್ಯ ಅನಾವರಣಗೊಳ್ಳಲು ಸಾಂಸ್ಕೃತಿಕ ವೇದಿಕೆಗಳು ಇಂದಿನ ಅಗತ್ಯತೆಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲೆ ಶಾಂತಾ ಹೆರಕಲ್ ಅವರು ಅಭಿಪ್ರಾಯಪಟ್ಟರು.
ಅವರು ಮಾತನಾಡುತ್ತಾ, ಪ್ರತಿಯೊಂದು ಮಗುವಿನಲ್ಲಿ ಒಂದೊಂದು ವಿಶಿಷ್ಟವಾದ ಪ್ರತಿಭೆ ಮತ್ತು ನೈಪುಣ್ಯತೆ ಇದ್ದೇ ಇರುತ್ತದೆ. ಆ ಪ್ರತಿಬೆಯು ಸಮಾಜದ ಮುಖ್ಯವಾಹಿನಿಗೆ ಬರಲು ಜಾತ್ರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವದರ ಮೂಲಕ ವೇದಿಕೆ ಕಲ್ಪಿಸಿಕೊಡಬೇಕು. ಅಳಿವಿನ ಅಂಚಿನಲ್ಲಿರುವ ನಮ್ಮ ದೇಶೀಯ ಸಂಗೀತ, ಸಾಹಿತ್ಯ, ಕಲೆ-ಸಂಸ್ಕೃತಿ, ಗರತಿಯ ಹಾಡುಗಳು, ಕೋಲಾಟ, ನೃತ್ಯ, ಯಕ್ಷಗಾನ, ಶಿವತಾಂಡವ ಇವೆಲ್ಲವನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಟರಾಜ ಡ್ಯಾನ್ಸ್ ಅಕ್ಯಾಡೆಮಿಯ ಸುಮಾರು ೬೦ ಕ್ಕೂ ಹೆಚ್ಚು ಮಕ್ಕಳಿಂದ ಹೇ ಶಾರದೆ, ವೀಣಾ ಪುಸ್ತಕ, ಗರುಡ ಗಮನ, ಭರತ ವೇದಮುಖ, ರಾಧಾಕೃಷ್ಣ ಗೀತೆಗಳಿಗೆ ನಾಟ್ಯ ಮತ್ತು ಸಿದ್ದೇಶ್ವರ ಸ್ವಾಮೀಜಿ ಕುರಿತು ಕಿರು ನಾಟಕ ಹಾಗೂ ತಾಂಡವ ನೃತ್ಯ ಅಕ್ಯಾಡೆಮಿ ಅವರಿಂದ ಹೀಗೆ ಒಟ್ಟು ೨೦ ಕ್ಕೂ ಅಧಿಕ ಕಾರ್ಯಕ್ರಮಗಳು ಜರುಗಿದವು.
ಇದೇ ಸಂದರ್ಭದಲ್ಲಿ ಥೈಲ್ಯಾಂಡನಲ್ಲಿ ನಡೆದ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಎರಡನೇಯ ಸ್ಥಾನ ಪಡೆದ ಪ್ರತೀಕ್ಷಾ, ಸಾಧನಾ ಹಾಗೂ ಮೂರನೇಯ ಸ್ಥಾನ ಪಡೆದ ಮನಸ್ವಿ ಅವರಿಗೆ ಹಾಗೂ ಪೂಣೆಯಲ್ಲಿ ಜರುಗಿದ ಯುನೆಸ್ಕೋ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸಾನ್ವೀ, ವೇದಿಕಾ ಇವರನ್ನು ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭೀಮರಾಯ ಬಿರಾದಾರ, ಎಸ್.ಜಿ.ನಿಂಗನಗೌಡ್ರ, ಶಿವಪ್ಪ ಸಾವಳಗಿ ಹಾಗೂ ಶ್ರೀಮತಿ ಆಶಾ ಬಾಸೂತಕರ ವೇದಿಕೆಯ ಮೇಲಿದ್ದರು.
ಈ ಕಾರ್ಯಕ್ರಮದಲ್ಲಿ ಶಿವಾನಂದ ಬಿಜ್ಜರಗಿ, ಬಾಬು ಕೋಲಕಾರ, ಆರ್.ಎಸ್.ಹಡಪದ, ಅಪ್ಪು ಬಿರಾದಾರ, ಅನೀಲ ಪಾಟೀಲ, ವೆಂಕಟೇಶ ವೈದ್ಯ, ಸವಿತಾ ಕುಮಟಗಿ, ಸವಿತಾ ಗೂಜನೂರ, ಮಾಯಕ್ಕ ಸಂಖ, ಸತ್ಯಕ್ಕ ತಿಪ್ಪಣ್ಣವರ, ಗೌರಕ್ಕ ಪಾಟೀಲ,ಸಂಗೀತಾ ಬಿರಾದಾರ, ಸುಮಂಗಲಾ ಪತ್ತಾರ, ಮಾಧುರಿ ದೇಶಪಾಂಡೆ, ಭಾರತಿ ಬಣಗಾರ, ಭಾರತಿ ಬಾರಿಗಿಡದ, ಜಯಶ್ರೀ ಕೆಂಗಲಗುತ್ತಿ ಇನ್ನಿತರರು ಸಹ ಉಪಸ್ಥಿತರಿದ್ದರು.

