ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಾಮಾಜಿಕ, ಸಹಕಾರ ರಂಗದಲ್ಲಿ ಅವಿರತವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ದಿ.ಬಿ.ಎಸ್.ಪಾಟೀಲ ಮೇರುವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ವಕೀಲ ಎಸ್.ಬಿ.ಪಾಟೀಲ ಹೇಳಿದರು.
ತಾಲ್ಲೂಕಿನ ನಿವಾಳಖೇಡ ಗ್ರಾಮದಲ್ಲಿ ಬುಧವಾರ ಜರುಗಿದ ಸಹಕಾರಿ ಕ್ಷೇತ್ರದ ಧುರೀಣ ದಿ:ಬಿ.ಎಸ್.ಪಾಟೀಲ ಇವರ ನಾಲ್ಕನೆಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದೇವರಹಿಪ್ಪರಗಿ ಶ್ರೀಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಸತತ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ತಮ್ಮದೇಯಾದ ವಿಶಿಷ್ಠ ಸೇವೆಯ ಮೂಲಕ ಮನೆಮಾತಾಗಿದ್ದ ಪಾಟೀಲರು ಯಾವುದೇ ವಿವಾದಗಳಿಗೆ ಅವಕಾಶ ನೀಡದೇ ಸದಾ ಹಸನ್ಮುಖಿಯಾಗಿ, ಗ್ರಾಹಕರ ಮನೋಭಾವನೆಗಳಿಗೆ ಸ್ಪಂದಿಸುವುದರ ಮೂಲಕ ಬ್ಯಾಂಕ್‌ನ್ನು ಪ್ರಗತಿಪಥದಲ್ಲಿ ಮುನ್ನಡೆಸಿ ಸಮಾಜಕ್ಕೆ ಕೊಡುಗೆ ನೀಡಿದವರು. ಇಂತಹ ಮಹನೀಯರ ಆದರ್ಶಗಳನ್ನು ಇಂದಿನ ಸಹಕಾರ ರಂಗದ ಇತರರು ಮೈಗೂಡಿಸಿಕೊಳ್ಳಬೇಕು ಎಂದರು.
ಬಸವನ ಬಾಗೇವಾಡಿ ಮುತ್ತಯ್ಯ ಸ್ವಾಮೀಜಿ ಹಾಗೂ ಜಂಬಲದಿನ್ನಿ ಸಿದ್ಧರಾಮ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಲೋಕೋಪಯೋಗಿ ಇಲಾಖೆಯ ನಿವೃತ್ತ ಇಇ ಬಿ.ಬಿ.ಪಾಟೀಲ, ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ವೈ.ಬಿ.ಪಾಟೀಲ, ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ಕುದರಿ, ಜಿಲ್ಲಾ ಪಂಚಾಯಿತಿ ಮಾಜಿಸದಸ್ಯ ನಿಂಗನಗೌಡ ಪಾಟೀಲ(ಯರನಾಳ), ಶ್ರೀಶೈಲ ಬೆನಕನಹಳ್ಳಿ, ಶಫಿಕ್ ಮೇಸ್ತಿç, ಈಶ್ವರ ಚವ್ಹಾಣ, ಕಲ್ಲನಗೌಡ ಪಾಟೀಲ, ರವಿ ಮಾಕಾ, ಚಂದ್ರಶೇಖರ ಹೊಸಮನಿ, ಶ್ರೀಶೈಲ ದಾನಗೊಂಡ ಪ್ರಗತಿ ಪಟ್ಟಣ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಸುನೀಲ ಪಾಟೀಲ, ಅಭಿಜಿತ ತಡಪಟ್ಟಿ ಹಾಗೂ ಸಿಬ್ಬಂದಿ ಇದ್ದರು.

