ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಂಜಾರ ಭಾಷೆಯನ್ನು ಭಾರತ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸುವ ಸಲುವಾಗಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ಜ.28 ರಂದು ಬಂಜಾರ ಸಮುದಾಯದ ತಜ್ಞರ ಸಭೆಯನ್ನು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಲ್ಲಿ ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಬಂಜಾರ ಸಮುದಾಯದ ಹಿರಿಯ ತಜ್ಞರುಗಳಾದ ಡಾ ಡಿ.ಬಿ. ನಾಯಕ್, ಡಾ.ಹರಿಲಾಲ ಪವಾರ, ಪ್ರೊ.ಸಣ್ಣರಾಮ ನಾಯ್ಕ್, ಬಿ.ಹೀರಾ ನಾಯ್ಕ್, ಭೋಜ್ಯಾ ನಾಯಕ್, ಬಾಲರಾಜ್ ನಾಯಕ್ ಇವರುಗಳು ಬಂಜಾರಾ ಸಮುದಾಯದ ಐತಿಹಾಸ, ಭಾಷೆ, ಸಂಸ್ಕೃತಿಯ ಹಿನ್ನೆಲೆಯನ್ನು ಚರ್ಚೆಸಿ, ವರದಿಯನ್ನು ಸಿದ್ದಪಡಿಸಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ.ಮೋತಿಲಾಲ್ ಚವ್ಹಾಣ್ ಹಾಗೂ ರಿಜಿಸ್ಟ್ರಾರ್ ಡಿ.ಎಂ.ರವಿಕುಮಾರ್ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಕಾಡೆಮಿ ಸದಸ್ಯರಾದ ಡಾ.ಎಂ.ರವಿ ನಾಯ್ಕ ಅವರು ಉಪಸ್ಥಿತರಿದ್ದರು.

