ಹೆಚ್ ಡಿ ಕೋಟೆ ಹಿಂದೂ ಸಮಾಜೋತ್ಸವ | ಹಿಂದೂ ಜಾಗರಣಾ ವೇದಿಕೆಯ ಉಲ್ಲಾಸ್ ಜೀ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಪ್ರಯುಕ್ತ ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ನಡೆಯಿತು.
ಚಾಮುಂಡೇಶ್ವರಿ ದೇವಾಲಯದಿಂದ ಹೊರಟ ಭಾರತಮಾತಾ ರಥಯಾತ್ರೆ ವಿವಿಧ ಕಲಾತಂಡಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಒಂದನೇ ಮುಖ್ಯರಸ್ತೆ ಬಾಪೂಜಿ ಸರ್ಕಲ್ ಹತ್ತಿರ ಇರುವ ಹಳೆ ಆಸ್ಪತ್ರೆ ಮೈದಾನದಲ್ಲಿ ಸಮಾಪ್ತಿಗೊಂಡಿತ್ತು. ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಬಿಡುಗಲು ಪಡುವಲು ವಿರಕ್ತ ಮಠದ ಮಹಾದೇವಸ್ವಾಮಿಗಳು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಹಿಂದೂ ಜಾಗರಣಾ ವೇದಿಕೆಯ ಉಲ್ಲಾಸ್ ಜೀ ಮಾತನಾಡಿ, ಎಲ್ಲಿಯವರೆಗೆ ಧರ್ಮ ಸುರಕ್ಷಿವಾಗಿರುತ್ತೋ ಅಲ್ಲಿಯವರೆಗೆ ರಾಷ್ಟ್ರ ಸುರಕ್ಷಿತವಾಗಿತ್ತೆ. ಭಾರತದ ಶಕ್ತಿಯನ್ನು ಕುಗ್ಗಿಸಲು ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ದಂಗೆ ಎಬ್ಬಿಸಲಾಗುತ್ತಿದೆ. ಬೆಂಗಳೂರಿನ ಕೆಜೆ, ಡಿಜೆ ಹಳ್ಳಿ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಗಳ ಹಿಂದೆ ವಿದೇಶ ಶಕ್ತಿಗಳ ಕೈವಾಡ ಇದೆ. ಮತೀಯ ಸಂಘಟನೆಗಳು ಇದರಲ್ಲಿ ಪಾಲ್ಗೊಂಡಿವೆ. ಇದನ್ನು ತಡೆಯಬೇಕಾದರೆ ಹಿಂದೂಗಳು ಎದ್ದು ನಿಲ್ಲಬೇಕು. ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಬಿಡುಗಲು ಪಡುವಲು ವಿರಕ್ತ ಮಠದ ಮಹಾದೇವಸ್ವಾಮಿಗಳು ಮಾತನಾಡಿ, ಇವತ್ತು ಭಾರತ 21 ನೇ ಶತಮಾನದಲ್ಲೂ ವಿಶ್ವ ಗುರುವಾಗಿ ಕಾಣಿಸಿಕೊಳ್ಳಲು ಶ್ರೇಷ್ಠ ಸಂಸ್ಕೃತಿಯೇ ಕಾರಣವಾಗಿದೆ ಎಂದರು.
ತಾಲೂಕು ಕೃಷಿಕ ಸಮಾಜ ಹಾಗೂ ಬಸವೇಶ್ವರ ಸಹಕಾರ ಸಂಘದ ನಿರ್ದೇಶಕ ಜೆ.ಬಿ.ಶಿವಸ್ವಾಮಿ ಮಾತನಾಡಿ, ಹಿಂದೂಗಳ ನಡುವೆ ಹೊಂದಾಣಿಕೆ ಇಲ್ಲದ ಹಿನ್ನೆಲೆ ಪಶ್ಚಿಮ ಬಂಗಾಳ, ಕಾಶ್ಮೀರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಹಿಂದೂಗಳ ಮೇಲೆ, ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. ಇದೆಲ್ಲವನ್ನು ತಡೆಯಲು ಹಿಂದುಗಳಾದ ನಾವೆಲ್ಲ ಒಟ್ಟಾಗಬೇಕು ಎಂದರು.
ಈ ವೇಳೆ ಜೆ.ಬಿ.ಶಿವಸ್ವಾಮಿ, ಸಿ.ಎನ್.ನಾಗಣ್ಣ, ಶಂಭೇಗೌಡ, ಸಿ.ಕೆ ಗಿರೀಶ್, ನಂದೀಶ್, ನಟರಾಜ್, ಸತೀಶ್ ಬಹದ್ದೂರು, ಸಂಘಟನಾ ಕಾರ್ಯದರ್ಶಿ ರಾಜು ಬಿಡಗಲು ಸಹ ಸಂಯೋಜಕರಾದ ಪೂರ್ಣೇಶ್, ಚಂದ್ರಮೌಳೇಶ್ವರ, , ಸಂತೋಷ್, ಜಯಂತ್ ಕುಮಾರ್, ರೂಪೇಶ್, ಮಹೇಶ್, ನಂದೀಶ್, ಸಂತೋಷ್, ನಾಗೇಶ್, ಪ್ರಶಾಂತ್, ಪೃಥ್ವಿಕುಮಾರ್, ಸತೀಶ್, ಗುರುಸ್ವಾಮಿ, ಸಿದ್ದೇಶ್, ಶ್ರೀಕಾಂತ್, ಸೋಮಾಚಾರ್, ಸುಧಾಕರ್, ರಾಜೇಶ್, ಬಸವರಾಜು, ವಿವೇಕಾನಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

