ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಸ್ ಹಾಗೂ ಕರ್ನಾಟಕ ನಾಡ ರಕ್ಷಣಾ ವೇದಿಕೆ ವಿಜಯಪುರ ವತಿಯಿಂದ ವಿಶೇಷ ಸಾಧಕರಿಗೆ ಕೊಡಮಾಡುವ ರಾಷ್ಟ್ರೀಯ ಜ್ಞಾನಸಿರಿ ಪ್ರಶಸ್ತಿಯನ್ನು ನಗರದ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಡಿ.ಎನ್.ಧರಿ ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು.
ಜ.28 ರ ಇಳಿಹೊತ್ತು ನಗರದಲ್ಲಿ ನಡೆದ ‘ಜ್ಞಾನಸಿರಿ ಉತ್ಸವ-2026’ ಸಮಾರಂಭದಲ್ಲಿ ಮನುಗೂಳಿಯ ಸಂಗನಬಸವ ಶಿವಾಚಾರ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮತ್ತು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಸೇರಿದಂತೆ ಅನೇಕ ಗಣ್ಯರು ಡಾ. ಡಿ.ಎನ್.ಧರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

