ಮಾರ್ಸನಳ್ಳಿ ಗ್ರಾಮದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಶಯ
ಉದಯರಶ್ಮಿ ದಿನಪತ್ರಿಕೆ
ಇಂಡಿ: ರೈತರು ಸಂಘ ಸಂಸ್ಥೆಗಳನ್ನು ಕಟ್ಟಿ ಇಲ್ಲವೆ ಸರಕಾರದವರು ಕಾರ್ಖಾನೆ ಪ್ರಾರಂಭ ಮಾಡಿದರೆ ರೈತರ ಬೆಳೆಗಳಿಗೆ ಶೀಘ್ರ ಮಾರುಕಟ್ಟಿ ದೊರೆಯುತ್ತದೆ. ಜೊತೆಗೆ ರೈತರಿಗೆ ಅರ್ಥಿಕವಾಗಿ ಅನೂಕೂಲವಾಗಲಿದೆ ಎಂದು ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಮಾರ್ಸನಳ್ಳಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾದ ಕರ್ನಾಟಕ ಕಾಟಸೀಡ್ಸ ಹತ್ತಿಯ ಕಾರ್ಖಾನೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಫಜಲಪೂರ ಶಾಸಕ ಎಂ.ವೈ ಪಾಟೀಲರು ಮಾತನಾಡಿ, ಇಂದು ಭೀಮಾ ತೀರ ಎಲ್ಲ ರೀತಿಯಲ್ಲೂ ಪ್ರಗತಿ ಹೊಂದುತ್ತಿದೆ. ಭೀಮೆಯ ದಡದಲ್ಲಿ ಸಕ್ಕರೆ ಹತ್ತಿ ಮತ್ತು ರೈತರಿಗೆ ಉಪಯೋಗವಾಗುವ ಕಾರ್ಖಾನೆ ಪ್ರಾರಂಭೀಸಿದರೆ ಅನುಕೂಲವಾಗುತ್ತದೆ. ಈ ದಿಶೇಯಲ್ಲಿ ಶಾಸಕ ಯಶವಂತಗೌಡ ಪಾಟೀಲರಾಗಲೀ ರೈತ ಸಂಘಗಳು ಪ್ರಾರಂಬಿಸಿದರೆ ಸಂಪೂರ್ಣ ಪ್ರೋತ್ಸಾಹ ನೀಡುವದಾಗಿ ತಿಳಿಸಿದರು.
ಮಾಜಿ ಸಚಿವ ಮಾಲಿಕಯ್ಯಾ ಗುತ್ತೇದಾರ, ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಅಭಿನವ ಪುಂಡಲಿಂಗ ಶಿವಯೋಗಿಗಳು, ಡಾ. ಸಂದೀಪ ಪಾಟೀಲ, ಶ್ರೀಶೈಲಯ್ಯ ಶ್ರೀಗಳು, ಆನಂದಲಿಂಗ ಶ್ರೀಗಳು, ಬಸವಲಿಂಗ ಶರಣರು, ನೀತಿನ ಗುತ್ತೇದಾರ, ಹಮೀದ ಮುಶ್ರೀಫ್, ಶಿವಕುಮಾರ ಗುಂದಗಿ ಮತ್ತಿತರಿದ್ದರು.

