ಸಿಂದಗಿಯಲ್ಲಿ ಅಶೋಕ ಲಾಂಛನ ಸ್ತಂಭ ವೃತ್ತ ನಿರ್ಮಾಣ, ಗಾಂಧಿ ಪುತ್ಥಳಿ ಅನಾವರಣ, ನೂತನ ಹೈಟೆಕ್ ಅಂಬುಲೆನ್ಸ್ ಮತ್ತು ಡಯಾಲಿಸಿಸ್ ಕೇಂದ್ರ, ಪಿಡಿಯಾಟ್ರಿಕ್ ಐಸಿಯು ಘಟಕಗಳ ಉದ್ಘಾಟನೆ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಉನ್ನತಿಕರಣಕ್ಕೆ ಇನ್ನು ಹೆಚ್ಚಿನ ರೀತಿಯ ಸೌಲಭ್ಯಗಳನ್ನು ಒದಗಿಸುವ ದಿಸೆಯಲ್ಲಿ ಶಾಸಕ ಅಶೋಕ ಮನಗೂಳಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಹಕಾರ ನೀಡುತ್ತೇನೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಸಿಂದಗಿ ನಗರದ ನೂತನ ಗಾಂಧಿ ಪುತ್ಥಳಿ ಅನಾವರಣ, ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭ, ನಗರಸಭೆ ಕಾರ್ಯಾಲಯ ಉದ್ಘಾಟನೆ, ನೂತನ ಹೈಟೆಕ್ ಅಂಬುಲೆನ್ಸ್ ಮತ್ತು ಡಯಾಲಿಸಿಸ್ ಕೇಂದ್ರ, ಪಿಡಿಯಾಟ್ರಿಕ್ ಐಸಿಯು ಘಟಕಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವ ಮತ್ತು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ಪ್ರಯತ್ನದಿಂದ ನಗರದ ೫೦ಸಾವಿರಕ್ಕೂ ಹೆಚ್ಚು ಜನತೆಯ ಕನಸಿನಂತೆ ಸಿಂದಗಿ ನಗರಸಭೆಯಾಗಿ ಪರಿವರ್ತನೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೇ ಪ್ರಪ್ರಥಮ ಅಶೋಕ ಲಾಂಛನ ಇದಾಗಿದ್ದು ಹೆಮ್ಮೆಯ ಸಂಗತಿ. ಸರಕಾರ ಸಚಿವರಿಗೆ ಮತ್ತು ಇಲಾಖೆಗಳಿಗೆ ಭೇಟಿ ನೀಡಿ ಅನುದಾನ ತಂದು ಮತಕೇತ್ರವನ್ನು ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ. ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ಮತಕ್ಷೇತ್ರ ಮಾದರಿ ಮತಕ್ಷೇತ್ರ ಮಾಡುವಲ್ಲಿ ಶಾಸಕ ಅಶೋಕ ಮನಗೂಳಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗೆ ನಾನು ಸದಾ ಸಿದ್ಧನಾಗಿದ್ದೇನೆ. ಸಿಂದಗಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ನಗರಸಭೆಯ ಕನಸನ್ನು ನನಸಾಗಿದ್ದು ಸಂತಸ ತಂದಿದೆ. ಹಂತ ಹಂತವಾಗಿ ಇನ್ನು ನನ್ನ ಅಧಿಕಾರದ ಅವಧಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಜನರ ಸೇವೆ ಮಾಡುತ್ತೇನೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಸೊನ್ನ ದಾಸೋಹ ವಿರಕ್ತಮಠದ ಡಾ.ಶಿವಾನಂದ ಮಹಾಸ್ವಾಮಿಗಳು, ಸಿಂದಗಿ ಬುದ್ಧ ವಿಹಾರದ ಶ್ರೀ ಸಂಘಪಾಲ ಬಂತೆಜೀ, ಹುಲಿಜಯಂತಿಯ ಶ್ರೀ ಮಾಳಿಂಗರಾಯ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಅಶೋಕ ವಾರದ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಕಾಂಬಳೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀಶೈಲ ಕೌಲಗಿ, ಸಾದಿಕ್ ಸುಂಬಡ, ಡಾ.ಅರವಿಂದ ಮನಗೂಳಿ, ಪುರಸಭೆ ಮಾಜಿ ಉಪಾಧ್ಯಕ್ಷ ಸಂದೀಪ ಚೌರ, ಹಾಸಿಂಪೀರ ಆಳಂದ, ಚನ್ನಪ್ಪ ಗೋಣಿ, ಹಣಮಂತ ಸುಣಗಾರ, ಪೌರಾಯುಕ್ತ ಎಸ್.ರಾಜಶೇಖರ, ಸುನಂದಾ ಯಂಪುರೆ, ವರ್ಷಾ ಪಾಟೀಲ, ಅಂಬಿಕಾ ಪಾಟೀಲ, ಜಯಶ್ರೀ ಹದನೂರ, ಪ್ರತಿಭಾ ಚೆಳ್ಳಗಿ, ರಾಜಶೇಖ ಕೂಚಬಾಳ, ಸತೀಶ ಕಕ್ಕಸಗೇರಿ, ಶಾಂತೂ ರಾಣಾಗೋಳ ಸೇರಿದಂತೆ ಅನೇಕರು ಇದ್ದರು.

“ಪಂಚ ಗ್ಯಾರಂಟಿಗಳ ನಡುವೆಯೂ ನಮ್ಮ ರಾಜ್ಯ ಕಾಂಗ್ರೆಸ್ ಸರಕಾರ ಪ್ರತಿಯೊಂದು ಮತಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನು ನೀಡುವ ಮೂಲಕ ನುಡಿದಂತೆ ನಡೆಯುತ್ತಿದೆ ಎನ್ನುವುದಕ್ಕೆ ಪ್ರಗತಿಯತ್ತ ಸಾಗುತ್ತಿರುವುದಕ್ಕೆ ಸಿಂದಗಿ ಮತಕ್ಷೇತ್ರವೇ ಸತ್ಯ ಸಾಕ್ಷಿ.”
– ಎಂ.ಬಿ.ಪಾಟೀಲ
ಜಿಲ್ಲಾ ಉಸ್ತುವಾರಿಸಚಿವರು

“ಸಿಂದಗಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ನಗರಸಭೆಯ ಕನಸು ನನಸಾಗಿದ್ದು ಸಂತಸ ತಂದಿದೆ. ಹಂತ ಹಂತವಾಗಿ ನನ್ನ ಅಧಿಕಾರದ ಅವಧಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡುವೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

