ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ಆಲಮೇಲದ ಬೆರಗು ಪ್ರಕಾಶನದ ಪ್ರಕಾಶಕಿ ವಿಜಯಲಕ್ಷ್ಮೀ ರಮೇಶ ಕತ್ತಿ ರವರ ಮನೆಗೊಂದು ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಉದ್ಘಾಟನೆ ಮಾಡಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ರವರು, ಇಂದು ಡಿಜಿಟಲ್ ಪರಿಣಾಮವಾಗಿ ಪುಸ್ತಕಗಳನ್ನು ಕೊಳ್ಳುವವರಿಲ್ಲ, ಓದುವವರಿಲ್ಲ ಎಂಬ ಕೊರಗು ನಮ್ಮ ಸಾಹಿತಿಗಳಲ್ಲಿ , ಪ್ರಕಾಶಕರಲ್ಲಿ ಆತಂಕ ಮನೆ ಮಾಡಿದೆ. ಇದನ್ನು ಮನಗಂಡು ನಮ್ಮ ಪ್ರಾಧಿಕಾರ ಮಹತ್ವಾಕಾಂಕ್ಷೆ ಯೋಜನೆ ಮನೆಗೊಂದು ಗ್ರಂಥಾಲಯ ಅಡಿಯಲ್ಲಿ ರಾಜ್ಯದಲ್ಲಿ ಕನಿಷ್ಠ ಒಂದು ಲಕ್ಷ ಮನೆಗಳಲ್ಲಿ ಅಸ್ತಿತ್ವಕ್ಕೆ ತರುವ ಸಲುವಾಗಿ ಪ್ರತಿ ಜಿಲ್ಲಾವಾರು ಹತ್ತು ಜನ ಸದಸ್ಯರು ತಂಡದೊಂದಿಗೆ ಪ್ರತಿ ನಿತ್ಯ ೫-೬ ಮನೆಗೊಂದು ಗ್ರಂಥಾಲಯ ಸ್ಥಾಪನೆ ಮಾಡುವ ಕಾರ್ಯ ಮಾಡುತ್ತಿದೆ. ಅದರಂತೆಯೇ ಇಂದು ವಿಜಯಪುರ ಜಿಲ್ಲೆಯಲ್ಲಿ ಆಲಮೇಲ ತಾಲ್ಲೂಕಿನ ಉಪನ್ಯಾಸಕರು ಪ್ರೊಫೆಸರ್ ಡಾ.ರಮೇಶ ಕತ್ತಿ ರವರ ಮನೆಯಲ್ಲಿ ಉದ್ಘಾಟನೆ ಮಾಡುವ ಸೌಭಾಗ್ಯ ದೊರೆಯಿತು. ಉದ್ಘಾಟನೆ ಮಾಡಿ ಮನೆಯಲ್ಲಿನ ಅಚ್ಚುಕಟ್ಟಾದ ಗ್ರಂಥಾಲಯ ವೀಕ್ಷಣೆ ಮಾಡಿದಾಗ ರಾಜ್ಯದ ಹೆಸರಾಂತ ಸಾಹಿತಿಗಳ ಸಾವಿರಾರು ಪುಸ್ತಕಗಳನ್ನು ನೋಡಿ ತುಂಬಾ ಖುಷಿ ಆಯಿತು. ಅವರ ಕಾರ್ಯಕ್ಕೆ ಪ್ರಾಧಿಕಾರ ವತಿಯಿಂದ ಪ್ರಶಂಸನೀಯ ಪತ್ರ ನೀಡಿ ಗೌರವಿಸಲು ಹೆಮ್ಮೆ ಅನಿಸುತ್ತದೆ ಎಂದರು ಕತ್ತಿ ದಂಪತಿಗಳ ಕಾರ್ಯವನ್ನು ಎಲ್ಲರೂ ಪ್ರೇರಣೆಯಾಗಿ ತೆಗೆದುಕೊಂಡು ಬರುವ ದಿನಮಾನಗಳಲ್ಲಿ ಆಲಮೇಲ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರತಿ ಮನೆಯಲ್ಲಿ ಜಗುಲಿಯ ಪಕ್ಕದಲ್ಲಿ ಒಂದು ಗ್ರಂಥಾಲಯ ಸ್ಥಾಪಿಸುವಂತಾಗಲಿ ಎಂದರು.
ಈ ವೇಳೆ ಪ್ರಾಧಿಕಾರದ ಜಿಲ್ಲಾ ಸಂಚಾಲಕರು ಶಂಕರ ಬೈಚಬಾಳ, ಪ್ರೊಫೆಸರ್ ಎ.ಎಚ್.ಕೋಲಮಲಿ, ಬೆರಗು ಪ್ರಕಾಶನದ ಪ್ರಕಾಶಕಿ ವಿಜಯಲಕ್ಷ್ಮೀ ಕತ್ತಿ ಹಾಗೂ ಡಾ.ರಮೇಶ ಕತ್ತಿ, ಹಿರಿಯ ಸಾಹಿತಿ ಸಿಧ್ಧಾರಾಮ ಉಪ್ಪಿನ, ಪತ್ರಕರ್ತರ ಸಂಘದ ಖಜಾಂಚಿ ಉಮೇಶ ಕಟಬರ, ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಲಕ್ಷ್ಮೀಪುತ್ರ ಕಿರನಳ್ಳಿ, ಸಹ ಕಾರ್ಯದರ್ಶಿ ಅನಂತ ಪಾಟೀಲ, ಸಾಹಿತಿ ಶುಭಮಂಗಳಾ ಜೋಗೂರ, ಮಲ್ಲಿಕಾರ್ಜುನ ಕಲಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು

