ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಸಿಂದಗಿ ಮತ್ತು ಆಲಮೇಲ ತಾಲೂಕು ಕಾನೂನು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಜಕ್ಕಣ್ಣ ಸೀತಿಮನಿ ಹಾಗೂ ರೇಬ್ಬಣ್ಣ ಸೀತಿಮನಿ ಅವರಿಗೆ ಆದೇಶವನ್ನು ಪತ್ರ ನೀಡಲಾಯಿತು.
ಬ್ಲೂ ಇಂಡಿಯಾ ಪಾರ್ಟಿಯ ನೂತನ ಕಾನೂನು ಘಟಕದ ರಾಜ್ಯಾಧ್ಯಕ್ಷರನ್ನಾಗಿ ಕಲ್ಲಪ್ಪ ಮರೆಪ್ಪ ಬಳುಂಡಗಿ, ಸಿಂದಗಿ ತಾಲೂಕಾಧ್ಯಕ್ಷರನ್ನಾಗಿ ಜಕ್ಕಣ್ಣ ಭೀಮರಾಯ ಸೀತಿಮನಿ ಹಾಗೂ ಆಲಮೇಲ ತಾಲೂಕಾಧ್ಯಕ್ಷರನ್ನಾಗಿ ರೇಬ್ಬಣ್ಣ ಬೀರಪ್ಪ ಸೀತಿಮನಿ ಅವರನ್ನು ಆಯ್ಕೆಮಾಡಲಾಗಿದೆ ಎಂದು ಬ್ಲೂ ಇಂಡಿಯಾ ಪಾರ್ಟಿ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ ದೊಡ್ಡಣ್ಣ ಮೌರ್ಯ ಅವರು ಆದೇಶಿಸಿದ್ದಾರೆ.

