ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು
ಉದಯರಶ್ಮಿ ದಿನಪತ್ರಿಕೆ
ಹಣವಿರುವ ಶ್ರೀಮಂತರಿಗೆ ಚಿನ್ನ ಅಥವಾ ಬೆಳ್ಳಿ ಖರೀದಿಸುವುದು ದೊಡ್ಡ ವಿಷಯವೇ ಅಲ್ಲ. ಹೂಡಿಕೆ ಮಾಡಬೇಕು ಅಥವಾ ತಾವು ಧರಿಸಬೇಕು ಎಂದಾಗಲೆಲ್ಲ ವಡವೆ ಕೊಂಡುಕೊಳ್ಳುತ್ತಾರೆ.
ಬಡವರಿಗೆ ಅದೇ ಒಂದು ದೊಡ್ಡ ವಿಷಯ. ಯಾವುದೋ ಕಾಲಕ್ಕೆ ಅಬ್ಬಬ್ಬಾ ಎಂದರೆ 3-4 ಗ್ರಾಂ ತೆಗೆದುಕೊಂಡು ಅದಕ್ಕೆ ಉಬ್ಬಿಹೋಗುತ್ತಾರೆ.
ಆದರೆ ಮಧ್ಯಮ ವರ್ಗದ ತೋಳಲಾಟ ಇದೆಯಲ್ಲ, ಅದು ಹೇಳತೀರದು. ಸಮಾಜದ ಮುಂದೆ ತಮ್ಮ ಬಡತನವನ್ನು ತೋರಿಸಿಕೊಳ್ಳಲು ತಮ್ಮ ಅಹಂ ಬಿಡುವುದಿಲ್ಲ. ಬೇರೆಯವರು ಹಾಕಿರುವುದನ್ನು ನೋಡಿ ತಮಗೂ ಆ ರೀತಿಯ ಒಡವೆ ಬೇಕೆಂದು ಮನಸು ಕೇಳದೆ ಇರುವುದಿಲ್ಲ. ಆದರೆ ಕೊಂಡುಕೊಳ್ಳಲು ಹಣವಿರುವುದಿಲ್ಲ. ಈ ಎಲ್ಲಾ ಇಲ್ಲಗಳ ನಡುವೆ ಅಲ್ಪ ಸ್ವಲ್ಪ ಹಣ ಉಳಿಸುತ್ತಾ 100 ಗ್ರಾಂ 200 ಗ್ರಾಂಗಳಷ್ಟೇ ಮಾಡಿಸಿಕೊಂಡುಬಿಟ್ಟಿರುತ್ತಾರೆ. ಹತ್ತಿರದವರ ವಿಶೇಷ ದಿನಗಳಲ್ಲಿ ಉಡುಗೊರೆಕೊಡಬೇಕೆಂದಾಗಲೆಲ್ಲಾ, ಹಾಗೋ ಹೀಗೋ ಮಾಡಿ 5-10 ಗ್ರಾಂ ಒಡವೆ ಕೊಟ್ಟುಬಿಡುತ್ತಿದ್ದರು. ಆದರೆ ಈವಾಗ ಹಣ ಕೊಟ್ಟು ಸುಮ್ಮನಾಗಿಬಿಡೋಣ ಎಂಬ ಮನಸ್ಥಿತಿ ಉಂಟಾಗಿದೆ.
ಹಾಗಾಗುತ್ತಿರುವುದು ಏಕೆ? ಈ ಚಿನ್ನ ಬೆಳ್ಳಿಯ ಬೆಲೆ ಹೆಚ್ಚುತ್ತಿರುವುದಾದರು ಏಕೆ? ನೋಡೋಣ
ಅತ್ತ ಸಿಗದ ತೈಲಕ್ಕಾಗಿ ಭೂಮಿ ಅಗೆದು ಸಡಿಲ ಮಾಡಿ ಅವನಿಯನ್ನು ಹಾಳುಮಾಡುವುದು, ಇತ್ತ ವಾಹನಗಳು ಉಗುಳುವ ಕಾರ್ಬನ್ ಡೈ ಆಕ್ಸೈಡ್ ನಿಂದ ಪರಿಸರ ಹಾಳಾಗುವುದು, ಜೊತೆಗೆ ಬೇರೆ ತೈಲ ಶ್ರೀಮಂತ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಿಕ್ಕೆ ಹೆಚ್ಚು ಹಣ ವ್ಯಯವಾಗುವುದು ಇವಾವು ಬೇಡವೆಂದು, ಅವುಗಳನ್ನು ತಪ್ಪಿಸಲಿಕ್ಕೆ, ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನಗಳ ಆವಿಷ್ಕಾರವನ್ನು (EV)ಆರಂಭಿಸಲಾಯಿತು.

ಇವುಗಳನ್ನು ಹೆಚ್ಚೆಚ್ಚು ಜನರು ಕೊಂಡುಕೊಳ್ಳಲೆಂದು ಪ್ರಚಾರವನ್ನೂ ಸಹ ಮಾಡಲಾಗುತ್ತಿದೆ. ಪೆಟ್ರೋಲ್- ಡೀಜಲ್ ಹಣ ಉಳಿಸುವ ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರು ಸಹ ಹೆಚ್ಚೆಚ್ಚು ವಿದ್ಯುತ್ ಚಾಲಿತ ವಾಹನಗಳ ಕಡೆ ಮುಖಮಾಡುತ್ತಿದ್ದಾರೆ. ಹೆಚ್ಚು ವಿದ್ಯುತ್ ಚಾಲಿತ (Electric vehicle) ವಾಹನಗಳು ಮಾರುಕಟ್ಟೆಗೆ ಬರುತ್ತಿವೇ ಎಂದಮೇಲೆ, ಅವುಗಳ ತಯಾರಿಕೆಯಲ್ಲಿ ಉಪಯೋಗಿಸುವ ಬೆಳ್ಳಿ (silver) ಬೆಲೆಯೂ ಸಹ ಹೆಚ್ಚಲೇಬೇಕಲ್ಲ. ಹಾಗಾಗಿ ಸ್ವಭಾವಿಕವಾಗಿಯೇ ಬೆಳ್ಳಿಯ ದರ ಹೆಚ್ಚುತ್ತಲೇ ಇದೆ.
ಬೆಳ್ಳಿ ಬೆಲೆ ಏರಿಕೆಯ ಕಾರಣ ತಿಳಿಯಿತು ಚಿನ್ನದ ದರವೇಕೆ ಹೆಚ್ಚುತ್ತಿದೆ?. ನೋಡೋಣ
ದೇಶ ದೇಶಗಳ ನಡುವೆ ಯುದ್ಧ ನಡೆದು ಜಾಗತಿಕ ಶಾಂತಿ, ನಂಬಿಕೆ ಕಡಿಮೆಯಾಗುತ್ತಿದೆ. ಮಾರ್ಚ್ 2022ರಲ್ಲಿ ಶುರುವಾದ ಉಕ್ರೇನ್- ರಷ್ಯಾ ಯುದ್ಧ ಇಲ್ಲಿಯವರೆಗೂ ನಿಂತಿಲ್ಲ. ಇವಾಗ ವೆನುಜುವೆಲಾ- ಅಮೇರಿಕಾ.
ವೆನುಜುವೆಲಾ ಮೇಲೆ “ನಿಮ್ಮಿಂದ ನಮ್ಮ ರಾಷ್ಟ್ರಕ್ಕೆ ಕದ್ದು ವಲಸೆ ಬರುತ್ತಿರುವ ಕಳ್ಳರು ನಮ್ಮ ದೇಶದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಹಾಗಾಗಿ ಅವರು ಇಲ್ಲಿಗೆ ಬರದಂತೆ ನೋಡಿಕೊಳ್ಳಿ’ ಎಂದು ಟ್ರಂಪ್ ಖ್ಯಾತೆ ತೆಗೆದ. ಆದರೆ ಆದರ ಹಿಂದಿರುವ ಉದ್ದೇಶ ಬೇರೆಯೇ ಇತ್ತು.
ಸೌದಿ ರಾಷ್ಟ್ರಗಳನ್ನೂ ಮೀರಿ ಅತೀ ಹೆಚ್ಚು ತೈಲ ಉತ್ಪಾದಿಸುವ ರಾಷ್ಟ್ರವಾದ ವೆನುಜುವೆಲಾವನ್ನು ತನ್ನ ಸುಪರ್ದಿಗೆ ತೆಗೆದುಕೊಂಡುಬಿಟ್ಟರೆ ಅಲ್ಲಿರುವ ತೈಲವೆಲ್ಲ ತನ್ನದಾಗುತ್ತದೆ ಎಂಬುದು ಅಮೇರಿಕಾ ಅಧ್ಯಕ್ಷ ಟ್ರಂಪ್ ದುರಾಸೆ. ಅದಕ್ಕೆ ಹೆದರದ ವೆನುಜುವೆಲಾ ಅಧ್ಯಕ್ಷ ನಿಕೋಲಸ್ ಮಾಡುರೊ ಟ್ರಂಪ್ ಗೆ ಸವಾಲೆಸೆದಾಗ ಟ್ರಂಪ್ ಮಾಡುರೊನನ್ನು ಬಂಧಿಸಿದ.

ಟ್ರಂಪ್ ನ ಈ ಉದ್ಧಟತನವು ಯಾರೂ ಮೆಚ್ಚುವಂತದಲ್ಲವಾದ್ದರಿಂದ ತನ್ನ ಸೆನೇಟ್ನಲ್ಲಿಯೇ ಇವನಿಗೆ 99 ಓಟುಗಳಲ್ಲಿ 47 ಮಾತ್ರ ಬಿದ್ದವು. ಉಳಿದ 52 ಓಟುಗಳು ಟ್ರಂಪ್ ವಿರುದ್ಧವಾಗಿಯೇ ಬಂದವು. ಆದರೂ ಟ್ರಂಪ್ ಜಗ್ಗಲಿಲ್ಲ. ತಾನೇ ಆಯಿಲ್ ಟ್ರೇಡಿಂಗ್ ಮಾಡಬೇಕೆಂದುಕೊಂಡು ತಾನೇ ವೆನುಜುವೆಲಾ ಅಧ್ಯಕ್ಷ ಎಂದು ಸಾರಿಕೊಂಡ. ಇದನ್ನೆಲ್ಲ ನೋಡುತ್ತಿರುವ ಇತರ ದೇಶಗಳು ಅಮೇರಿಕ ಡಾಲರ್ ಮೂಲಕ ವ್ಯವಹಾರ ಮಾಡುವುದನ್ನು ಕಡಿಮೆ ಮಾಡಿ, ತಮ್ಮದೇ ಕರೆನ್ಸಿಗಳ ಮೂಲಕ ವ್ಯವಹರಿಸಬೇಕೆಂದು ಪ್ರಯತ್ನಿಸುತ್ತಿವೆ. ಆದ್ದರಿಂದ ಆರ್ಥಿಕ ಭದ್ರತೆ ಕಾಪಾಡಿಕೊಳ್ಳಲು ಹೆಚ್ಚು ಹೆಚ್ಚು ಚಿನ್ನ ಖರೀದಿ ಮಾಡುತ್ತಿವೆ. ಎಂದರೆ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿವೆ. ಆದ್ದರಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದೆ.
ಇದು ಚಿನ್ನ ಬೆಳ್ಳಿಯ ಕಥೆ. ಕೊಂಡುಕೊಳ್ಳಬೇಕೆನ್ನುವವರ ವ್ಯಥೆ.
ಅಂದಹಾಗೆ ಹೆಚ್ಚು ಚಿನ್ನ ಬೆಳ್ಳಿ ಇರುವವರೇ ಇವಾಗ ಶ್ರೀಮಂತರು.


