Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶನಿವಾರ ವಿದ್ಯುತ್ ವ್ಯತ್ಯಯ

ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಖ್ಯಾತ ಜನಪದ ಸಂಶೋಧಕ ಡಾ.ಮಲ್ಲಿಕಾರ್ಜುನ ಲಠ್ಠೆ
ವಿಶೇಷ ಲೇಖನ

ಖ್ಯಾತ ಜನಪದ ಸಂಶೋಧಕ ಡಾ.ಮಲ್ಲಿಕಾರ್ಜುನ ಲಠ್ಠೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ ಶಶಿಕಾಂತ ಪಟ್ಟಣ
ರಾಮದುರ್ಗ – ಪುಣೆ

ಉದಯರಶ್ಮಿ ದಿನಪತ್ರಿಕೆ

ನಾಡಿನ ಬಹುದೊಡ್ಡ ಜನಪದ ಸಾಹಿತ್ಯ ಸಂಶೋಧಕ ಸ್ವರ ವಚನಗಳ ಸಂಪಾದಕಟ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ ಕರ್ನಾಟಕದ ಜಾನಪದ ಹಾಡುಗಳ ಸಂಗ್ರಹಕಾರ ಡಾ ಎಂ ಎಸ್ ಲಠ್ಠೆ. ಇವರ ಪೂರ್ಣ ಹೆಸರು ಮಲ್ಲಿಕಾರ್ಜುನ ಶಿವಪ್ಪ ಲಠ್ಠೆ.
ಜನನ
ಮಲ್ಲಿಕಾರ್ಜುನ ಲಠ್ಠೆಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಮುತನಾಳದಲ್ಲಿ.
ತಂದೆ ಶಿವಪ್ಪ,
ತಾಯಿ ಬಸವಮ್ಮ.
ಶಿಕ್ಷಣ
ಪ್ರಾಥಮಿಕ ವಿದ್ಯಾಭ್ಯಾಸ
ಹಿರೇಬಾಗೇವಾಡಿಯಲ್ಲಿ. ಮುತನಾಳ ಗ್ರಾಮದಿಂದ
ಬರಿಗಾಲಿನಲ್ಲಿ ಹೀರೆ ಬಾಗೇವಾಡಿ ಗ್ರಾಮಕ್ಕೆ ನಡೆದು ಬಂದು ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಮುಂದೆ ಹೈಸ್ಕೂಲ್ ಶಿಕ್ಷಣವನ್ನು ಕೆ ಎಲ್ ಇ ಸಂಸ್ಥೆ ಜಿ ಎ ಹೈಸ್ಕೂಲ್ ನಲ್ಲಿ ಶ್ರೀ ಕರಡಿ ಮಾಸ್ತರ ಮತ್ತು ಶ್ರೀ ಬಿ ಆರ್ ಪಾಟೀಲ ಇವರ ಶಿಷ್ಯನಾಗಿ ಶಿಕ್ಷಣ ಮುಗಿಸಿದರು.
ಮುಂದೆ ಧಾರವಾಡ
ಕಾಲೇಜಿಗೆ ಸೇರಿದ್ದು ಧಾರವಾಡದ ಕರ್ನಾಟಕ ಕಾಲೇಜು, ಬಿ.ಎ. ಆನರ್ಸ್‌ ಪದವಿ ಮುಗಿಸಿದರು. ಅತ್ಯಂತ ಬಡತನದಲ್ಲಿ ಶಾಲೆ ಕಲಿತ ಈ ಹುಡುಗ ತಮ್ಮ ಕೆಲಸ ಮಾಡುತ್ತಲೆ ಸಾಂಗ್ಲಿಯ ಕಾಲೇಜಿನಿಂದ
ಪೂನ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮುಗಿಸಿಕೊಂಡರು. ಮುಂದೆ
ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಮಹಾದೇವಿಯಕ್ಕ ಮತ್ತು ಕಾರಿಕಾಲಮ್ಮೆ ಒಂದು ತೌಲನಿಕ ಅಧ್ಯಯನ’ಕ್ಕೆ ಪಿಎಚ್.ಡಿ. ಪದವಿಯನ್ನು ಪಡೆದರು.
ಪದವಿ ಗಳಿಸಿದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಮತ್ತದೇ ಸಂಸ್ಥೆಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಎಂಟು ವರ್ಷ ಮತ್ತು ನಿಪ್ಪಾಣಿ ಜಿ ಏ ಬಾಗೇವಾಡಿ ಕಾಲೇಜಿನಲ್ಲಿ ಏಳು ವರ್ಷ ಸೇವೆ. ನಂತರ ಕರ್ನಾಟಕ ವಿಶ್ವವಿದ್ಯಾಲದಲ್ಲಿ ಪಿ.ಜಿ. ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪಿ.ಜಿ. ರೀಡರ್, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ವಿವಿಧ ಹುದ್ದೆ. ಸಂಶೋಧಕರಾಗಿ ಪಿಎಚ್.ಡಿ ಪಡೆದುದಲ್ಲದೆ ಆರು ಜನ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮತ್ತು ಹತ್ತು ಜನ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳು ಯಶಸ್ವಿಯಿಂದ ಪದವಿ ಗಳಿಸಿದ ಹೆಗ್ಗಳಿಕೆ.ವಿದ್ಯಾರ್ಥಿ ಪ್ರಿಯರೇನಿಸಿದ ಡಾ ಎಂ ಎಸ್ ಲಠ್ಠೆಯವರು ಅವರಿಂದ ಸಾಕಷ್ಟು ಕ್ಷೇತ್ರ ಕಾರ್ಯ ಮಾಡಿಸಿದ್ದಾರೆ.
ಬರೆದ & ಸಂಪಾದಿಸಿದ ಗ್ರಂಥಗಳು
ಅಕ್ಕಮಹಾದೇವಿ, ಬಿಜ್ಜ ಮಹಾದೇವಿ, ಹರಿಹರ ಕವಿಯ ರಗಳೆ, ಶರಣ ನುಲಿಯ ಚಂದಯ್ಯ, ಭೂಮರೆಡ್ಡಿ ಬಸಪ್ಪನವರು, ಶರಣ ಮಾದಾರ ಚನ್ನಯ್ಯ, ಶಿವಯೋಗಿ ಸಿದ್ಧರಾಮ, ಶರಣರ ಜೀವನ ದರ್ಶನ, ಕನ್ನಡ ಯಾತ್ರೆ, ಕರ್ಮಯೋಗಿ ಎಸ್.ಬಿ. ಪಾಟೀಲ, ಶರಣ ಮೇದಾರ ಕೇತಯ್ಯ ಮುಂತಾದ ಕೃತಿ ರಚನೆ ಮಾಡಿದ್ದಾರೆ.
ಜಾನಪದ ಕೃತಿಗಳು-
ಜಾನಪದ ದೀಪ್ತಿ (ಭಾಗ 1ಮತ್ತು 2).


ಸಂದ ಪ್ರಶಸ್ತಿಗಳು:
ಹಲವಾರು ಸಾಹಿತ್ಯ ಸಮ್ಮೇಳನ, ಜಾನಪದ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ.
ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಇಳಕಲ್ ಮಠ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
ಅವರಿಗೆ ಸಂದ ಮಹತ್ವದ ಗೌರವವೆಂದರೆ ಅಖಿಲ ಭಾರತ 9ನೇ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿದ್ದಾರೆ. 1982ರಲ್ಲಿ ಅರ್ಪಿಸಿದ ಗೌರವಗ್ರಂಥ ‘ಸಾಹಿತ್ಯ ಸಂತುಷ್ಟಿ.’
ಹವ್ಯಾಸಗಳು
ಬಾಲ್ಯದಿಂದಲೂ ನಾಟಕ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಅಜಾನುಬಾಹು ಮಲ್ಲಿಕಾರ್ಜುನ ಲಠ್ಠೆಯವರು
ಶ್ರೀ ಕರಡಿ ಗುರುಗಳ ಅಚ್ಚುಮೆಚ್ಚಿನ ಶಿಷ್ಯನಾಗಿ ಬಸವೇಶ್ವರ ನಾಟಕದಲ್ಲಿ ಶ್ರೀ ಬಸವಣ್ಣನವರ ಪಾತ್ರ ಮಾಡಿ ಅದಕ್ಕೆ ಮೆರಗು ತಂದರು. ಮುಂದೆ ಲಾವಣಿ ಪದ ದಪ್ಪಿನ ಪದ ಬಯಲಾಟ ಸ್ವರ ವಚನಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಜನಪದ ಸೊಗಡನ್ನು ಜೀವಂತ ಇಟ್ಟವರಲ್ಲಿ ಡಾ ಮಲ್ಲಿಕಾರ್ಜುನ ಎಸ್ ಲಠ್ಠೆಯವರು ಪ್ರಮುಖರು.
ನಿಧನ
ಡಾ ಎಂ ಎಸ್ ಲಠ್ಠೆಯವರು ಒಂದು ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡಾಗಲೇ ಹೃದಯ ಸ್ತಂಭನದಿಂದ 19-11-2007 ರಂದು ತಮ್ಮ ಎಪ್ಪತ್ತೈದನೆಯ ವಯಸ್ಸಿನಲ್ಲಿ ಬಯಲಲ್ಲಿ ಬಯಲಾದರು. ತಂದೆಯವರ ಉನ್ನತ ಪರಂಪರೆಯನ್ನು ಇವರ ಮಗ ಡಾ ರವೀಂದ್ರ ಲಠ್ಠೆ ಇವರು ಡಾ ವೀರಣ್ಣ ದಂಡೆ ಇವರ ಮಾರ್ಗದರ್ಶನದಲ್ಲಿ ಡಾ ಎಂ ಎಸ್ ಲಠ್ಠೇಯವರ ಕೃತಿಗಳ ಮರು ಮುದ್ರಣ ಮತ್ತು ಸಾಹಿತ್ಯ ಪ್ರಸಾರ ಮಾಡುತ್ತಿದ್ದಾರೆ. ಬಸವ ಸಮಿತಿ ಕಲಬುರ್ಗಿಯಲ್ಲಿ ಶ್ರೀ ರವೀಂದ್ರ ಲಠ್ಠೆ ಅವರು ಏರ್ಪಡಿಸಿದ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ನಾನು ಪ್ರಮುಖ ಉಪನ್ಯಾಸಕನಾಗಿ ಭಾಗವಹಿಸಿದ್ದೇನೆ. ಅಲ್ಲದೆ ಡಾ ಎಂ ಎಸ್ ಲಠ್ಠೆ ಅವರು ಬೆಳಗಾವಿಯ ಲಿಂಗಾಯತ ಕೇಂದ್ರ ಸಂಶೋಧನಾ ಗ್ರಂಥಾಲಯಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದರು. ಡಾ ಎಸ್ ಆರ್ ಗುಂಜಾಳ ಇವರು ಮತ್ತು ನಾನು ದಿನವಿಡಿ ಸಾಹಿತ್ಯ ಮತ್ತು ಇತರ ವಿಷಯಗಳ ಚರ್ಚೆ ಮಾಡುತ್ತಿದ್ದೆವು. ಇಂತಹ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಜೀವಿ ಡಾ ಎಂ ಎಸ್ ಲಠ್ಠೆ ಅವರಿಗೆ ನೂರಾರು ಶರಣು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶನಿವಾರ ವಿದ್ಯುತ್ ವ್ಯತ್ಯಯ

ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ

ಶಿಕ್ಷಕ ಪ್ರಶಸ್ತಿಗೆ ತುಕಾರಾಮ ಕೋಳಿ ಆಯ್ಕೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
  • ಶಿಕ್ಷಕ ಪ್ರಶಸ್ತಿಗೆ ತುಕಾರಾಮ ಕೋಳಿ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಜ್ಯೋತಿಬಾ ಫುಲೆ ರಾಜ್ಯ ಮಟ್ಟದ ಪ್ರಶಸ್ತಿ: ಶಿಕ್ಷಕ ಬಸವಂತ ವಾಘಮೋರೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಮಹಿಳಾ ಸಂಪಾದಕತ್ವದ ದಿನಪತ್ರಿಕೆಗಳಿಗೆ ಜಾಹೀರಾತಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಶ್ರೀ ಯಲಗೂರೇಶನ ಅದ್ದೂರಿ ಕಾರ್ತಿಕೋತ್ಸವ ಫೆ.7 ರಿಂದ ಪ್ರಾರಂಭ.
    In (ರಾಜ್ಯ ) ಜಿಲ್ಲೆ
  • ಕಾಲುವೆಯಲ್ಲಿ ಬಿದ್ದು ವ್ಯಕ್ತಿ ಸಾವು
    In (ರಾಜ್ಯ ) ಜಿಲ್ಲೆ
  • ಗಬಸಾವಳಗಿಯಲ್ಲಿ ವಿಶ್ವ ಕ್ಯಾನ್ಸರ್ ದಿನ ಆಚರಣೆ
    In (ರಾಜ್ಯ ) ಜಿಲ್ಲೆ
  • ಕೃತಿ ಬಿಡುಗಡೆ ಸಮಾರಂಭನಾಟಕ ಕಲೆಯಲ್ಲಿ ಪಳಗಿದ ಹುನ್ನೂರು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.