ಲೇಖನ
– ಎಚ್ಚಾರ್ ಬಾಗವಾನ
ಸಾಮಾಜಿಕ ಚಿಂತಕರು, ಪತ್ರಕರ್ತರು
ಆಸಾರ ಗಲ್ಲಿ
ಮುದ್ದೇಬಿಹಾಳ – ೫೮೬೨೧೨
ಮೊ: 9448406079
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನೊಂದಣಿ ಇಲಾಖೆಯಲ್ಲಿ ಗುಣಾತ್ಮಕ ರೀತಿಯ ಸುಧಾರಣೆ ತರಲು ಹಿಂದೆ ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿ ಆರ್ ಅಶೋಕ ರವರು ನೊಂದಣಿ ಇಲಾಖೆಯ ಸುಧಾರಣಾ ಕಾಯ್ದೆ ಜಾರಿಗೊಳಿಸಿ ಕಾವೇರಿ ೦೨ ತತ್ರಾಂಶ ಜಾರಿಗೊಳಿಸಿದ್ಗರು. ಆದರೆ ಈಗ ಸರ್ಕಾರ ಕಾವೇರಿ ೦೩ ಜಾರಿಗೊಳಿಸಲು ಮುಂದಾಗಿರುವುದು ಪಾರದರ್ಶಕತೆಯ ರೂಪದಲ್ಲಿ ಸ್ಥಿರಾಸ್ತಿ ಖರೀದಿಸುವರಿಗೆ ಅಭದ್ರತೆ ಕಾಡುವಂತೆ ಮಾಡಿದೆ.
ಆಧಾರ ಕಾರ್ಡ ಲಿಂಕ್ ಪಡೆದು ಆಸ್ತಿ ಮಾಲಿಕನ ಓಟಿಪಿ ಬಳಸಿ ಧೃಢಿಕರಿಸಿದ ನಂತರವಷ್ಠೆ ಆಸ್ತಿ ನೊಂದಣಿ ಆಗುತ್ತಲಿದೆ. ಇದನ್ನು ಬಿಟ್ಟು ಫೇಸಲೆಸ್ಸ್ ಪೇಪರಲೆಸ್ಸ್ ಕಾಯ್ದೆಗೆ ಮುಂದಾಗಿರುವದು ಭವಿಷ್ಯದ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಂತೂ ಖಂಡಿತ ಅಲ್ಲ. ರಾಜ್ಯದಲ್ಲಿ ಇಷ್ಠೆಲ್ಲ ವ್ಯವಸ್ಥೆ ಇರುವಾಗಲು ಅದೆಷ್ಟೋ ಆಸ್ತಿಗಳು ಅಕ್ರಮ ನೊಂದಣಿ ಮಾಡಿರುವ ತಪ್ಪಿಗೆ ಸಬ್ ರಜಿಸ್ಟಾರಗಳು ಅಮಾನತ್ತು ಆಗಿದ್ದಾರೆ. ಅದೆಷ್ಟೋ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆಯ ಹಂದಲ್ಲಿವೆ. ತಂತ್ರಜ್ಞಾನದಿಂದ ಅಕ್ರಮಗಳು ಫೇಕ್ ಖಾತೆಗಳ ಮೂಲಕ ನಡೆಯುತ್ತಲಿರುವದು ಕೂಡಾ ಎಲ್ಲರಿಗೂ ತಿಳಿದ ವಿಚಾರ. ಆದರೆ ಶತಮಾನಗಳಿಂದ ಆಸ್ತಿ ಕೊಳ್ಳುವರಿಗೆ ಖರೀದಿಸಿರುವ ಆಸ್ತಿಗಳ ನೊಂದಣಿ ಪತ್ರಗಳು ತಮ್ಮ ಖರೀದಿಗೆ ಆಧಾರ ಎಂಬ ಮಾನಸಿಕ ಸಮಾಧಾನದ ಮತ್ತು ಭದ್ರತೆಯ ಸಂಕೇತಗಳಾಗಿವೆ. ಆಸ್ತಿ ಖರೀದಿ ನೊಂದಣಿಯಲ್ಲಿ ಅಕ್ರಮ ನಡೆದರೆ ಪತ್ರ ತಯಾರಿಸಿರುವ ಸರ್ಕಾರದಿಂದ ಅಧಿಕೃತ ಲೈಸನ್ಸ ಪಡೆದ ಬಿಂಕ್ಲದಾರ(ದಸ್ತು ಬರಹಗಾರ) ಮತ್ತು ಆಸ್ತಿ ನೊಂದಣಿಯನ್ನು ಮಂಜೂರು ಮಾಡಿದ ಸಬ್ ರಜಿಸ್ಟಾರ್ ರನ್ನು ಹೊಣೆಗಾರರನ್ನಾಗಿಸಿ ಅವರ ಮೇಲೆ ಕ್ರಮ ಜರುಗಿಸಲು ನೊಂದಣಿ ಅಧಿಕಾರಿಗಳಿಗೆ ಸಾಧ್ಯವಾಗುತ್ತದೆ. ಆದರೆ ನೊಂದಣಿ ಇಲಾಖೆ ತಮ್ಮ ಇಲಾಖೆಯ ಆಧೀನ ದಲ್ಲಿರುವ ತತ್ರಾಂಶವನ್ನು ಸಾರ್ವಜನಿಕ ಗೊಳಿಸಿ ಸಿಟಿಜನ್ ಲಾಗಿನ್ ಆರಂಭಿಸಿರುವದು ಆಸ್ತಿ ಕೊಳ್ಳುವ ಸಾರ್ವಜನಿಕರು ಮತ್ರು ರೈತಾಪಿ ವರ್ಗಕ್ಕೆ ಅಭದ್ರತೆಯ ಪ್ರಪಾತಕ್ಕೆ ತಳ್ಳಿದೆ. ಸಿಟಿಜನ ಲಾಗಿನ್ ಮೂಲಕ ಇಲಾಖೆಗೆ ಸಂಬಂಧಪಡದ ಆನಲೈನ್ ಸೆಂಟರ್ ನಡೆಸುವ ವ್ಯಕ್ತಿ ಖರೀದಿ ಸೇರಿದಂತೆ ಆಸ್ತಿ ಪರಭಾರೆಗೆ ಸಂಬಂಧಪಟ್ಟ ನೊಂದಣಿ ಕಾಗದ ತಯಾರಿಸಿ ನೊಂದಣಿ ಮಾಡಿಬಿಡುತ್ತಾನೆ. ಕಾಗದ ನೊಂದಣಿಯಾಗಿ ಇದರಲ್ಲೇನಾದರೂ ಅಕ್ರಮ ನಡೆದರೆ ಇದಕ್ಕೆ ಹೊಣೆಗಾರರನ್ನಾಗಿ ಯಾರ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂಬ ಆತಂಕ ಆಸ್ತಿ ಖರೀದಿದಾರರಿಗೆ ಎದುರಾಗಿದೆ. ಆನಲೈನ್ ಸೆಂಟರಗಳು ತಮ್ಮ ಅಥವಾ ಇನ್ನ್ಯಾರೋ ವ್ಯೆಕ್ತಿಗಳ ಹೆಸರಿನಲ್ಲಿ ತಯಾರಿಸಿ ಸಬ್ ರಜಿಸ್ಟಾರ ಕಛೇರಿಗಳಿಗೆ ಸೆಂಡ್ ಮಾಡುವ ನೊಂದಣಿ ಪ್ರಪೋಸಲ್ ಗಳನ್ನು ಅಪ್ರೋವಲ ಮಾಡುವಾಗ ಕೂಡಾ ನೊಂದಣಿ ಅಧಿಕಾರಿಗಳಿಗೆ ಒಂದು ತರಹದ ಆತಂಕ ಕಾಡುತ್ತಿರುವದು ಸುಳ್ಳಲ್ಲ. ಇಲಾಖೆಯ ಮುಖ್ಯಸ್ಥರ ಆದೇಶ ಪಾಲನೆ ಮಾಡುವ ಉದ್ದೇಶದಿಂದ ಅನಿವಾರ್ಯವಾಗಿ ಬಂದ ನೊಂದಣಿ ಕಾಗದಗಳನ್ನು ಅಪ್ರೂವಲ್ ಮಾಡುತ್ತಿರುವುದು ಕೂಡಾ ಅನಿವಾರ್ಯತೆ ಇದೆ. ಸರ್ಕಾರದಿಂದ ಪರವಾನಗಿ ಪಡೆದಂತಹ ದಸ್ತು ಬರಹಗಾರರು(ಬಿಂಕ್ಲದಾರರು)ನೊಂದಣಿಗೆ ಬರುವ ದಾಖಲೆಗಳನ್ನು ಸಂಬಂಧ ಪಟ್ಟ ಸಬ್ ರಜಿಸ್ಟಾರ ಕಚೇರಿಗೆ ಹೋಗಿ ಅಧಿಕಾರಿಗಳ ಬಳಿ ಇರುವ ನ್ಯಾಯಾಲಯದ ತಡೆಯಾಜ್ಞೆ ಇರುವ ರಜಿಸ್ಟರ ಪರಶೀಲಿಸಿ .ಜಮೀನು ನೀರಾವರಿ ಆಗಿದ್ದರೆ ಅದರ ದರ ಖುಷ್ಕಿ ಆಗಿದ್ದರೆ ಅದರ ದರ ನಿಗಧಿಪಡಿಸಲು ಭೂ ಸ್ವಾಧೀನ ಪಡೆದ ಆಸ್ತಿಯ ರಾಜ್ಯಪತ್ರ ನೀರಾವರಿ ಇಲಾಖೆಯ ವ್ಯಾಪ್ತೀಯು ಸರ್ವೆ ಮಾಡಿ ಗುರುತಿಸಲಾದ ನೀರಾವರಿ ಜಮೀನು ಪರಿಶಿಲಿಸಿ ಇದರ ಆಧಾರದ ಮೇಲೆ ದರ ನಿಗಧಿ ಪಡಿಸಿದ ಪರಿಣಾಗ ಅತಿ ಹೆಚ್ಚು ರಾಜಸ್ವ ಸಂಗ್ರಹಣೆಗೆ ಸರ್ಕಾರಕ್ಕೆ ಅನುಕೂಲ ಆಗುತ್ತೆ. ಈ ಪರಿಜ್ಞಾನ ಕಂದಾಯ ಇಲಾಖೆಗೆ ಇದ್ದಂತೆ ಕಾಣುವದಿಲ್ಲ. ಕಾವೇ ರಿ ೦೨ ತತ್ರಾಂಶ ಜಾರಿಗೆ ತಂದ ಮೇಲೆ ಎನಿವೇರ್ ವ್ಯವಸ್ಥೆ ಜಾರಿಗೆ ಬಂದು ಯಾವುದೆ ಜಿಲ್ಲೆಗೆ ಸಂಬಂಧಿಸಿದ ಆಸ್ತಿ ಇನ್ನ್ಯಾವುದೆ ಜಿಲ್ಲೆಯಲ್ಲಿ ನೊಂದಣಿ ಮಾಡಿಕೊಳ್ಳಬಹುದಾಗಿದ್ದು ಇಲ್ಲಿಯೂ ಲೋಪದೋಷಗಳಾಗುತ್ತವೆ. ಬೇರೆ ಜಿಲ್ಲೆಯಲ್ಲಿ ಯಾವುದಾದರೂ
ತಾಲೂಕಿನಲ್ಲಿ ವ್ಯಾಜ್ಯೆಇರುವ ಮತ್ತು ನ್ಯಾಯಾಲಯದ ತಡೆಯಾಜ್ಞೆ ಇರುವ ಆಸ್ತಿ ಬೇರೆ ಜಿಲ್ಲೆಯಲ್ಲಿ ಸರಳವಾಗಿ ನೊಂದಣಿಯಾಗಿ ಬಿಡುತ್ತೆ. ನ್ಯಾಯಾಲಯದಲ್ಲಿ ತನ್ನ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ವ್ಯೆಕ್ತಿಗೆ ಇದರಿಂದ ಅನ್ಯಾಯ ಆಗುತ್ತೆ. ತಡೆಯಾಜ್ಞೆ ಇರುವ ಆಸ್ತಿ ನೊಂದಣಿ ಮಾಡಿರುವ ಆರೋಪದಡಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಕೇಸ ಉಪ ನೊಂದಣಿ ಅಧಿಕಾರಿಗಳು ಎದುರಿಸಬೇಕಾಗುತ್ತದೆ. ಇದಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ನೀಡುವ ಪರಿಹಾರವೇನು? ಮೊದಲು ನೊಂದಣಿ ಇಲಾಖೆ ನ್ಯಾಯಾಲಯದ ವ್ಯಾಜ್ಯ ಇರುವ ಆಸ್ತಿಗಳನ್ನು ತಮ್ಮ ಇಲಾಖೆಯ ತತ್ರಾಂಶ ದಲ್ಲಿ ಬರುವಂತೆ ನೋಡಿಕೊಳ್ಳಬೇಕು. ಅದೆ ತರಹ ನೀರಾವರಿಗೆ ಒಳಪಟ್ಟಂತಹ ರಾಜ್ಯದ ಜಮೀನುಗಳು ಸಾರ್ವತ್ರಿಕವಾಗಿ ತತ್ರಾಂಶದಲ್ಲಿ ಎಂಟ್ರಿ ಆಗುವ ಹಾಗೆ ನೋಡಿ ಕೊಳ್ಳಬೇಕು, ಅಂದಾಗ ಮಾತ್ರ ಎನಿವೇರ್ ನೊಂದಣಿಯಿಂದ ಆಗುವ ಕಂದಾಯ ನಷ್ಠ ತಪ್ಪಿಸಬಹುದು. ಸರ್ಕಾರ ಜಾರಿತಂದಿರುವ ಸಿಟಿಜನ್ ಲಾಗಿನ್ ಬದಲಿಸಿ ಇಲಾಖೆಯಿಂದ ಪರವಾನಗಿ ಪಡೆದು ಕಾರ್ಯ ನಿರ್ವಹಿಸುತ್ತಿರುವ ದಸ್ತು ಬರಹಗಾರರ ಪ್ರತ್ಯೇಕ ಲಾಗಿನ ತೆರೆಯಬೇಕು. ಈಗಾಗಲೆ ಭೂ ಮಾಪನ ಇಲಾಖೆಗೆ ಅಳತೆ ವಿಭಾಗ ಹಾಗೂ ಕ್ರಯ ವಿಕ್ರಯ ಪೋಡಿ ಪ್ರಕರಣಗಳು ಆಯಾ ತಾಲೂಕಿನ ಪರವಾನಗಿ ಪಡೆದ ಸರ್ವೆಯರ ಲಾಗಿನ ಗಳಿಗೆ ರವಾನಿಸುವ ವ್ಯೆವಸ್ಥೆಯ ಮಾದರಿಯಲ್ಲಿ ನೊಂದಣಿಗೆ ಬರುವ ಆಸ್ತಿಗಳನ್ನು ಸಬ್ ರಜಿಸ್ಟಾರ ರವರು ಸರದಿಯ ಪ್ರಕಾರ ದಸ್ತು ಬರಹಗಾರರ ಲಾಗಿನ ಗೆ ರವಾನಿಸಬೇಕು. ಅಂದಾಗ ಮಾತ್ರ ಸರ್ಕಾರ ಜಾರಿಗೆ ತಂದಿರುವ ಪಾರದರ್ಶಕ ನೊಂದಣಿ ವ್ಯೆವಸ್ಥೆ ಸಾರ್ಥಕತೆ ಪಡೆದುಕೊಳ್ಳುತ್ತದೆ.


