Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ
ವಿಶೇಷ ಲೇಖನ

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಶಿಲ್ಪಾ ಮೃತ್ಯುಂಜಯ ಮಿಣಜಿಗಿ
ಶಿಕ್ಷಕರು ಕೆ. ಇ. ಬೋರ್ಡ್. ಸೆಂಟ್ರಲ್ ಸ್ಕೂಲ್
ಧಾರವಾಡ

ಉದಯರಶ್ಮಿ ದಿನಪತ್ರಿಕೆ

ವರ್ಷದ ಮೊದಲ ಹಬ್ಬ
ಮಕರ ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು, ಇದು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸಂಕ್ರಮಿಸುವ ದಿನವಾಗಿದೆ. ಈ ಹಬ್ಬವು ಉತ್ತರಾಯಣ ಪುಣ್ಯಕಾಲದ ಆರಂಭವನ್ನು ಸೂಚಿಸುತ್ತದೆ. ಮತ್ತು ಈ ಹಬ್ಬವನ್ನು ಭಾರತದಾದ್ಯಂತ ವಿಭಿನ್ನ ನಾಮಗಳಲ್ಲಿ ಆಚರಿಸಲಾಗುತ್ತದೆ.
ಹಬ್ಬದ ಮಹತ್ವ


ಮಕರ ಸಂಕ್ರಾಂತಿ ಸೌರಮಾನದ ಪರ್ವವಾಗಿದ್ದು, ಸೂರ್ಯ ದೇವರ ಆರಾಧನೆಗೆ ಮೀಸಲಾಗಿದೆ. ಈ ದಿನ ಪವಿತ್ರ ಸ್ನಾನ, ದಾನ ಮತ್ತು ಪೂಜೆಗಳು ಮಹತ್ವದ್ದು; ಎಳ್ಳು-ಬೆಲ್ಲವನ್ನು ಹಂಚುವ ಸಂಪ್ರದಾಯವಿದೆ. ಗಂಗಾ ಸಂಗಮದಲ್ಲಿ ಸ್ನಾನ ಮಾಡುವುದು ಪಾಪ ನಿವೃತ್ತಿಗೆ ಫಲದಾಯಕ ಎಂದು ಪರಸ್ಪರ ಎಲ್ಲ ಕುಟುಂಬದವರು ಸೇರಿ ಬಂಧು ಮಿತ್ರರೊಂದಿಗೆ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಥವಾ ಪವಿತ್ರ ಸ್ಥಳದಲ್ಲಿ ಊಟ ಮಾಡಿ ಬರುವುದು ಐತಿಹ್ಯವಿದೆ ಎಂದು ನಂಬಲಾಗಿದೆ. ಇದೇ ಸಮಯದಲ್ಲಿ ದೇಶಾದ್ಯಂತ ಅನೇಕ ದೇವರ ಜಾತ್ರೆಗಳು ಜರುಗುತ್ತವೆ. ಈ ಆಚರಣೆ ಕರ್ನಾಟಕದಲ್ಲಿ ಎಳ್ಳಿನ ಹಬ್ಬ ಎಂದೇ ಪ್ರಸಿದ್ಧವಾದ ಈ ಹಬ್ಬದಂದು ಸೂರ್ಯನ ಪೂಜೆ,
ಎಳ್ಳು ಬೆಲ್ಲದ ಚಿಕ್ಕಿ ಮಾಡುತ್ತಾರೆ. ದಾನಕಾರ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಇನ್ನು ಉತ್ತರ ಕರ್ನಾಟಕದಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಮಾಡಿ ಒಬ್ಬರಿಗೊಬ್ಬರು ಹಂಚಿ ಊಟ ಮಾಡುವ ಪದ್ಧತಿಯನ್ನು ಇಂದಿಗೂ ಸಹ ನಾವು ಆಚರಿಸಿಕೊಂಡು ಬಂದಿದ್ದೇವೆ. ಪರಸ್ಪರ ಚಿಕ್ಕವರು ದೊಡ್ಡವರಿಗೆ ಎಳ್ಳು ಬೆಲ್ಲವನ್ನು ಹಂಚಿ ಎಳ್ಳು ಬೆಲ್ಲ ತಿಂದು ಒಳ್ಳೆಯವರಾಗಿರೋಣ ಎಂದು ಹೇಳುತ್ತೇವೆ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸೋಣ ಎನ್ನುವ ದೃಷ್ಟಿಯಿಂದ ಎಳ್ಳು ಬೆಲ್ಲವನ್ನು ಹಂಚುತ್ತೇವೆ
ಪುರಾಣದ ಪ್ರಕಾರ ಮಕರ ಸಂಕ್ರಾಂತಿಯ ವಿಶೇಷತೆಯನ್ನು ನೋಡಬೇಕಾದರೆ ಭಗೀರಥನ ತಾತಂದಿರು ಕಪಿಲ ಮುನಿಯ ಕೋಪಕ್ಕೆ ಸಿಕ್ಕು ಅವರಿಗೆ ಸ್ವರ್ಗ ಲಭಿಸದೆ ಹೋದಾಗ ಭಗೀರಥನು ಗಂಗೆಯನ್ನು ಕುರಿತು ತಪಸ್ಸಿಗೆ ಕೊಡುತ್ತಾನೆ ಭಗೀರಥನ ತಪಸ್ಸಿಗೆ ಮೆಚ್ಚಿದ ಗಂಗಾದೇವಿಯು ತನ್ನ ತಾತಂದಿರ ಬೂದಿಯ ಮೇಲೆ ಹರಿದು ಅವರಿಗೆ ಸ್ವರ್ಗ ಲಭಿಸಿದ ದಿನ ಎಂದು ಹೇಳಲಾಗುತ್ತದೆ.
ಮಹಾಭಾರತದಲ್ಲಿ ಭೀಷ್ಮ ಪಿತಾಮಹರು ತಮ್ಮ ಇಚ್ಛಾಮೃತ್ಯು ಆಯ್ಕೆಯನ್ನು ಮಕರ ಸಂಕ್ರಾಂತಿಯಂದು ಉಪಯೋಗಿಸಿ ದೇಹವನ್ನು ತ್ಯಜಿಸಿದರು. ಉತ್ತರಾಯಣ ಪುಣ್ಯಕಾಲದಲ್ಲಿ ಇದು ಸಂಭವಿಸಿದ್ದು ಹಬ್ಬಕ್ಕೆ ಆಧ್ಯಾತ್ಮಿಕ ಮಹತ್ವವನ್ನು ಸೇರಿಸುತ್ತದೆ


*ವೈಜ್ಞಾನಿಕ ಮಹತ್ವ
ಭೂಮಿಯ ಕಕ್ಷಾ ಪಥದಲ್ಲಿ 23.5 ಡಿಗ್ರಿ ಧರಣೆಯಿಂದಾಗಿ ಸೂರ್ಯನು ದಕ್ಷಿಣ ಗೋಳದಿಂದ ಉತ್ತರ ಗೋಳಕ್ಕೆ ಸಾಗುವ ಮಕರ ಸಂಕ್ರಾಂತಿಯ ದಿನ ವಿಂಟರ್ ಸಾಲಿಸ್ಟಿಸ್ ಸಂಭವಿಸುತ್ತದೆ, ಇದರಿಂದ ಉತ್ತರ ಭಾಗದಲ್ಲಿ ಹಗಲಿನ ಅವಧಿ ಕ್ರಮೇಣ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಪಥ ‘8’ ಆಕಾರದ ರೇಖೆಯನ್ನು ಗಳಿಸುತ್ತದೆ, ಇದು ಚಳಿಗಾಲದ ಕೊನೆಯನ್ನು ಗುರುತಿಸುತ್ತದೆ. ಮತ್ತು ಆರೋಗ್ಯ ಸಂಬಂಧಿತ ಕಾರಣಗಳಿಗಾಗಿ ಚಳಿಗಾಲದಲ್ಲಿ ಎಳ್ಳು-ಬೆಲ್ಲ ಸೇವನೆಯು ದೇಹದ ಉಷ್ಣತೆಯನ್ನು ಹೆಚ್ಚಿಸಿ ರಕ್ತ ಸಂಚಾರವನ್ನು ಸುಧಾರಿಸುತ್ತದೆ, ಮತ್ತು ಅತ್ಯಂತ ಪೋಷಕಾಂಶಗಳು ಖನಿಜಾಂಶಗಳನ್ನು ಹೊಂದಿದೆ. ಎಳ್ಳು ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಈ ಸಂಪ್ರದಾಯಗಳು ಹವಾಮಾನದೊಂದಿಗೆ ಸಮನ್ವಯಗೊಂಡು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದು ಎಳ್ಳೆಣ್ಣೆಯ ತೈಲ ಅಭ್ಯಂಜನದಿಂದ ಮಾತ್ರ ಸಾಧ್ಯ
*ಪಟ ಹಾರಿಸುವುದರ ಮಹತ್ವ
ಚಳಿಗಾಲದ ಕೊನೆಯನ್ನು ಗುರುತಿಸಿ, ಬೆಳಕಿನ ದಿನಗಳ ಆರಂಭವನ್ನು ಆಚರಿಸುವ ಸಂದರ್ಭವಾಗಿದ್ದು, ಆಕಾಶವನ್ನು ಬಣ್ಣಗಳಿಂದ ಕಂಗೊಳಿಸುತ್ತದೆ. ದು ಸಾಮೂಹಿಕ ಸಂತೋಷವನ್ನು ಹಂಚಿಕೊಳ್ಳುವ ಮಾರ್ಗವಾಗಿ, ದುಷ್ಟ ಶಕ್ತಿಗಳನ್ನು ದೂರ ಮಾಡುವ ನಂಬಿಕೆಯನ್ನು ಹೊಂದಿದೆ. ಅಲ್ಲದೆ ಮನುಷ್ಯನ ಜೀವನದಲ್ಲಿ ಏರುಳಿತಗಳು ಬಂದೇ ಬರುತ್ತವೆ ಎಂಬುದನ್ನು ತಿಳಿಸುವ ಒಂದು ಸತ್ಯವಾದಂತಹ ಘಟನೆಯಾಗಿದೆ. ಈ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯು ತಮಗೂ ತಮ್ಮ ಕುಟುಂಬಕ್ಕೂ ಒಳಿತನ್ನು ಮಾಡಲಿ ಮಾಡಲಿ ಮತ್ತು ಶುಭವನ್ನು ತರಲಿ ಎಂದು ಹಾರೈಸುತ್ತಾ
ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ
    In (ರಾಜ್ಯ ) ಜಿಲ್ಲೆ
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.