ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಶಸ್ತ್ರ ಪಡೆಗ ಯೋಧರ ದಿನಾಚರಣೆ ಅಂಗವಾಗಿ ದಿನಾಂಕ : ೧೪-೦೧-೨೦೨೫ರಂದು ಮಾಜಿ ಸೈನಿಕರು ಹಾಗೂ ಅವಲಂಬಿತರುಗಳಿಗೆ ದೂರವಾಣಿ ಮೂಲಕ ಕುಂದು ಕೊರತೆಗಳ ಆಲಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಪ್ರಭಾರ ನಿರ್ದೇಶಕರೂ ಆದ ಜಂಟಿ ನಿರ್ದೇಶಕರು ಬೆಂಗಳೂರು ಇವರು ಎಲ್ಲ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಂದು-ಕೊರತೆಗಳನ್ನು ದೂರವಾಣಿ ಮೂಲಕ ಸ್ವೀಕರಿಸಿ, ಅಹವಾಲುಗಳನ್ನು ಆಲಿಸಲಿದ್ದು, ಸ್ಥಿರ ದೂರವಾಣಿ ೦೮೦-೨೫೫೮೯೪೫೯, ಮೊಬೈಲ್ : ೮೧೦೫೨೩೩೮೬೩, ೯೮೭೧೧೦೩೮೧೪ ಹಾಗೂ ೭೮೯೨೨೮೯೬೩೫ ಸಂಖ್ಯೆಗೆ ಕರೆ ಮಾಡಿ ತಮ್ಮ ಕುಂದು ಕೊರತೆಗಳನ್ನು ಸಲ್ಲಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
