ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಿಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯದ ಪರೀಕ್ಷೆಯಾದ ಈ ಸ್ಪರ್ಧೆಯಲ್ಲಿ ನೀವು ಯಶಸ್ವಿಯಾಗಲು ಶಕ್ತಿ, ಏಕಾಗ್ರತೆ ಮತ್ತು ಅಸಾಧಾರಣ ಛಲ ಪ್ರದರ್ಶಿಸಬೇಕು, ದೇಶದ ಕೀರ್ತಿ ಪತಾಕೆ ಹಾರಿಸಿ, ಉತ್ತಮ ಕ್ರೀಡಾ ಮನೋಭಾವ ಪ್ರದರ್ಶಿಸಿ ಮತ್ತು ಸುರಕ್ಷಿತವಾಗಿ ಸ್ಪರ್ಧಿಸಿ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎ.ಬಿರಾದಾರ ಹೇಳಿದರು.
ಜಾರ್ಖಂಡದ ರಾಂಚಿಯಲ್ಲಿ ಜ.೧೩ ರಿಂದ ೧೯ ರವರೆಗೆ ನಡೆಯುವ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳುತ್ತಿರುವ ಕರೀಷ್ಮಾ ತಟಗಾರ, ಸಂಗವ್ವ ಬನಸೋಡೆ ಹಾಗೂ ಆಕಾಶ ತೇರದಾಳ ವಿದ್ಯಾರ್ಥಿಗಳಿಗೆ ಶುಭ ಹಾರೈಯಿಸಿ ಬೀಳ್ಕೋಡುವ ವೇಳೆಯಲ್ಲಿ ಮಾತನಾಡಿದ ಅವರು. ಸೈಕ್ಲಿಂಗ್ ಮನಸ್ಸು, ದೇಹ ಮತ್ತು ನಿಮ್ಮ ಆತ್ಮಕ್ಕೆ ಅದ್ಭುತ ಉಲ್ಲಾಸವನ್ನು ನೀಡುವಂತದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಇ.ಡಿ.ಲಮಾಣಿ, ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎಲ್.ದೊಡಮನಿ, ಎ.ಎಂ.ನಾಗೊಂಡ, ಎಸ್.ಕೆ.ಶಿಂಧೆ, ಎಸ್.ಬಿ.ಒಡೆಯರ, ಆರ್.ವ್ಹಿ.ಭುಜಂಗನವರ, ಜೆ.ಕೆ.ರಾಠೋಡ, ಎಸ್.ಡಿ.ಚವ್ಹಾಣ್, ಅಶ್ವಿನಿ ದೊಡ್ಡಿ, ಜೆ.ವ್ಹಿ.ಬಿರಾದಾರ, ಬಿ.ಎಸ್.ದ್ಯಾಬೇರಿ, ಆರ್.ಎನ್.ಬಡಿಗೇರ, ಎಚ್.ಎಂ.ಬೋರಾವತ, ದೇಸು ದೊಡಮನಿಯವರು ಸೇರಿದಂತೆ, ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕಾರ್ಯಾಧ್ಯಕ್ಷರುಗಳು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

