ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಜ.10 ಶನಿವಾರ ಬೆಳಗ್ಗೆ 11.38 ಗಂಟೆಗೆ ಅದ್ಧೂರಿಯಾಗಿ ಆಯೋಜಿಸಲು ತಿರ್ಮಾನಿಸಲಾಗಿದೆ ಎಂದು ಚಡಚಣ ಶಿಕ್ಷಕರ ಸೊಸಾಯಿಟಿ ಅಧ್ಯಕ್ಷ ಎಸ್. ಎಸ್. ಪಾಟೀಲ, ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಅಮೃತಾನಂದ ಮಹಾಸ್ವಾಮಿಗಳು (ಗುರುದೇವ ಆಶ್ರಮ, ಕಾತ್ರಾಳ), ಷಡಕ್ಷರಿ ಮಹಾಸ್ವಾಮಿಗಳು (ವಿರಕ್ತಮಠ, ಚಡಚಣ) ಹಾಗೂ ರಾಜಯೋಗಿನಿ ಬ್ರಹ್ಮಾಕುಮಾರಿ ಶ್ರೀದೇವಿ ಅಕ್ಕನವರು ವಹಿಸಲಿದ್ದಾರೆ.
ನೂತನ ಕಟ್ಟಡದ ಉದ್ಘಾಟನೆಯನ್ನು ವಿಠ್ಠಲ ಧೋ. ಕಟಕಧೋಂಡ (ಶಾಸಕರು, ನಾಗಠಾಣ ಮತಕ್ಷೇತ್ರ) ನೆರವೇರಿಸಲಿದ್ದು, ಜ್ಯೋತಿ ಬೆಳಗಿಸುವ ಕಾರ್ಯಕ್ರಮವನ್ನು ಯಶವಂತರಾಯಗೌಡ ವಿ. ಪಾಟೀಲ (ಶಾಸಕರು, ಇಂಡಿ ಮತಕ್ಷೇತ್ರ) ನೆರವೇರಿಸಲಿದ್ದಾರೆ.
ಸುವರ್ಣ ಮಹೋತ್ಸವದ ಅಂಗವಾಗಿ ಫೋಟೋ ಪೂಜೆ ಹಾಗೂ ಸ್ಮರಣಾರ್ಥ ಬ್ಯಾಗಗಳ ವಿತರಣೆಯನ್ನು ರಮೇಶ್ ಚ. ಜಗಜಿಣಗಿ (ಸಂಸದರು, ವಿಜಯಪುರ) ನೆರವೇರಿಸಲಿದ್ದು, ಕ್ಯಾಲೆಂಡರ್ ವಿತರಣೆಯನ್ನು ಶ್ರೀಮತಿ ಎಸ್. ಕೆ. ಭಾಗ್ಯಶ್ರೀ (ಉಪ ನಿಬಂಧಕರು, ಸಹಕಾರ ಸಂಘಗಳು, ವಿಜಯಪುರ) ನಡೆಸಿಕೊಡಲಿದ್ದಾರೆ.
ಈ ಸಂದರ್ಭದಲ್ಲಿ ರಾಹುಲ್ ತಿಪ್ಪಣ್ಣ ಸಿದ್ದಾ (ಇಂಜಿನಿಯರ್, ಚಡಚಣ) ಅವರಿಗೆ ವಿಶೇಷ ಸನ್ಮಾನ ಸಲ್ಲಿಸಲಾಗುವುದು ಎಂದರು.
ಸುವರ್ಣ ಮಹೋತ್ಸವದ ಸ್ಮರಣಾರ್ಥವಾಗಿ ಸಂಘದ ಎಲ್ಲಾ ಸದಸ್ಯರಿಗೆ, ಮಹಿಳಾ ಶಿಕ್ಷಕರಿಗೆ ವ್ಯಾನಿಟಿ ಬ್ಯಾಗ್ ಹಾಗೂ ಪುರುಷ ಶಿಕ್ಷಕರಿಗೆ ಹ್ಯಾಂಡ್ ಬ್ಯಾಗ್ ನೀಡಲಾಗುತ್ತದೆ. ಜೊತೆಗೆ ನೂತನ ವರ್ಷದ ಕ್ಯಾಲೆಂಡರ್ ಹಾಗೂ ಮಿನಿ ಡೈರಿ ವಿತರಿಸಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಗಳು ಈಗಾಗಲೇ ವಿತರಿಸಲ್ಪಟ್ಟಿದ್ದು, ಅನಿವಾರ್ಯ ಕಾರಣಗಳಿಂದ ಕೆಲ ಸದಸ್ಯರಿಗೆ ಆಹ್ವಾನ ಪತ್ರಿಕೆಗಳು ತಲುಪದಿದ್ದಲ್ಲಿ ಈ ಪತ್ರಿಕಾ ಪ್ರಕಟಣೆಯನ್ನೇ ಆಹ್ವಾನವೆಂದು ಪರಿಗಣಿಸಿ ಎಲ್ಲ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಉಪಾಧ್ಯಕ್ಷರು ಶ್ರೀ ಎಸ್. ಜೆ. ಪಾಟೀಲ, ವ್ಯವಸ್ಥಾಪಕರು ಶ್ರೀ ಅನೀಲಕುಮಾರ ದೇ. ಪಾಟೀಲ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

