ಕೊಲ್ಹಾರದ ಜ್ಞಾನಜ್ಯೋತಿ ಶಾಲಾ ಆವರಣದಲ್ಲಿ ನಡೆದ ಸಂತೆ | ಇಲ್ಲಿ ಮಕ್ಕಳೇ ವ್ಯಾಪಾರಿಗಳು, ಪಾಲಕರೇ ಗ್ರಾಹಕರು
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ನಡೆದ ಮಕ್ಕಳ ಸಂತೆ ( ಮಾರ್ಕೆಟಿಂಗ್ ಡೇ) ಯಲ್ಲಿ ವ್ಯಾಪಾರ ಜೋರಾಗಿಯೇ ನಡೆಯಿತು.
ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿ, ಹಣ್ಣು ಹಂಪಲ, ಹೂವು ,ಬೇಲಪುರಿ, ವಡಾ ಪಾವ, ಬಜಿ , ಟೀ ಸ್ಟಾಲ್, ಬುಕ್ ಸ್ಟಾಲ್, ದಿನಸಿ ಅಂಗಡಿ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಲಾಯಿತು. ಮಕ್ಕಳು ಸಾರ್ವಜನಿಕರಿಗೆ ಮಾರುತಿದ್ದ ವಸ್ತುಗಳ ವ್ಯಾಪಾರವು ನೈಜ ವ್ಯಾಪಾರಸ್ತರನ್ನು ನಾಚಿಸುವಂತಿತ್ತು.
ಪರಸ್ಪರ ಸ್ಪರ್ಧಾಮನೋಭಾವದಿಂದ ಮಕ್ಕಳು ನಾವೇ ಹೆಚ್ಚು ವ್ಯಪಾರ ಮಾಡಬೇಕೆಂಬ ಛಲದಿಂದ ಪೋಷಕರನ್ನು ಕರೆದು ತಮ್ಮ ಅಂಗಡಿಯ ಸಾಮಗ್ರಿ ಖರೀದಿಸಲು ಒತ್ತಾಯಿಸುತ್ತಿದ್ದರು.
ಕರ್ನಾಟಕ
ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಅರುಣ ಔರಸಂಗ ಹಾಗೂ ಪತ್ರಕರ್ತ ಮಲ್ಲಿಕಾರ್ಜುನ ಕುಬಕಡ್ಡಿ ಜಂಟಿಯಾಗಿ ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯಲು ಮಕ್ಕಳ ಸಂತೆ ಬಹಳಷ್ಟು ಉಪಯುಕ್ತವಾಗಿದೆ. ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಮುಂದೆ ಮಕ್ಕಳು ಜೀವನ ನಡೆಸಲು ವ್ಯವಹಾರ ಜ್ಞಾನದ ಅರಿವನ್ನು ಮೂಡಿಸಬೇಕು ಎಂದರು.
ಈ ವೇಳೆ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿವೇಕಾನಂದ ಹರನಟ್ಟಿ, ಉಪಾಧ್ಯಕ್ಷರಾದ ಪಾರ್ವತಿ ಹರನಟ್ಟಿ, ಕಾರ್ಯದರ್ಶಿಗಳಾದ ಶಾಂತಾ ಹರನಟ್ಟಿ,ಮುಖ್ಯ ಶಿಕ್ಷಕಿ ದ್ರಾಕ್ಷಿಯಣಿ ನಾಗರಾಳ, ಸಹ ಶಿಕ್ಷಕಿಯರಾದ ಕವಿತಾ ಮುದಕವಿ, ರೇಣುಕಾ ಪತಂಗಿ, ಲಕ್ಷ್ಮಿ ಬಾಯಿ ಮೇಲಗಿರಿ, ಸರಿತಾ ಬಡಿಗೇರ, ಶಿಲ್ಪಾ ಮಠಪತಿ ಸೇರಿದಂತೆ ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

