ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಗೊಳಸಾರ ಗ್ರಾಮದ ಶ್ರೀ ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ ಪಂಚಲೋಹದಿಂದ ತಯಾರಿಸಿದ ಮೂರ್ತಿ ಸೋಮವಾರ ಹುಬ್ಬಳ್ಳಿಯಿಂದ ಇಂಡಿ ನಗರ ಪ್ರವೇಶಿಸಿತು. ನಗರದ ಶಿವಾಜಿ ವೃತ್ತದಿಂದ ಮೂರ್ತಿ ಮೆರವಣಿಗೆ ನಗರದಲ್ಲಿ ವಾದ್ಯ, ವೈಭವದೊಂದಿಗೆ, ಬೈಕ್ರ‍್ಯಾಲಿಯೊಂದಿಗೆ ನೆರವೇರಿತು.
ಹುಬ್ಬಳ್ಳಿಯಿಂದ ಮೂರ್ತಿ ಮೆರವಣಿಗೆ ಸುಮಾರು ಐದಾರು ದಿನಗಳಿಂದ ಪಾದಯಾತ್ರೆ ಮೂಲಕ ನಡೆದು ಸೋಮವಾರ ಇಂಡಿ ನಗರ ತಲುಪಿ ಗೋಳಸಾರ ಗ್ರಾಮದೆಡೆಗೆ ಸಾಗಿತು.
ಹುಬ್ಬಳ್ಳಿ ಮೂಲದ ಭಕ್ತರೊಬ್ಬರು ಗಂಡು ಮಗುವಿಗಾಗಿ ಶ್ರೀ ತ್ರೀಧರೇಶ್ವರ ಶ್ರೀಗಳಲ್ಲಿ ಬೇಡಿಕೊಂಡಾಗ, ೬೦ ವರ್ಷ ವಯಸ್ಸಿನಲ್ಲಿ ಗಂಡು ಮಗು ಜನನವಾಗಿದ್ದು, ಮಗುವಿಗೆ ಸಂಗಮೇಶ ಎಂದು ನಾಮಕರಣ ಮಾಡಿದ್ದಾರೆ. ತಂದೆಯ ಹರಕೆ ಭಕ್ತಿ ಸಮರ್ಪಣೆಗಾಗಿ ಮಠದ ಭಕ್ತ ಸಂಗು ರೋಡಗಿ ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳ ಪಂಚಲೋಹದಿಂದ ತಯಾರಿಸಿದ ಮೂರ್ತಿಯನ್ನು ರಥಯೊಂದನ್ನು ತಯಾರಿಸಿ ಅದರಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಹುಬ್ಬಳ್ಳಿಯಿಂದ ಮೆರವಣಿಗೆ ಮೂಲಕ ಇಂಡಿ ನಗರದ ಮೂಲಕ ಗೊಳಸಾರ ಮಠಕ್ಕೆ ನಡೆದಿದ್ದಾರೆ.
ನಗರದ ಶಿವಾಜಿ ವೃತ್ತದಲ್ಲಿ ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳ ಮೂರ್ತಿ ಮೆರವಣಿಗೆಯನ್ನು ನಗರದ ಗಣ್ಯರು, ಭಕ್ತರು ಬರಮಾಡಿಕೊಂಡು ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು.
ನಂತರ ಬಸವೇಶ್ವರ ವೃತ್ತದಲ್ಲಿ ಶ್ರೀ ತ್ರೀಧರೇಶ್ವರ ಮೂರ್ತಿಗೆ ಭಕ್ತರು ಆರತಿ ಮಾಡಿ ಪೂಜೆ ಸಲ್ಲಿಸಿ ಭಕ್ತಿ ನಮನ ಸಲ್ಲಿಸಿದರು.
ಗೊಳಸಾರ ಮಠದ ಶ್ರೀ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ರೋಡಗಿ ಮಠದ ಅಭಿನವ ಶಿವಲಿಂಗೇಶ್ವರ ಶ್ರೀಗಳ ಸಾನಿಧ್ಯದಲ್ಲಿ ಮೆರವಣಿಗೆ ನಡೆಯಿತು.
ಆಲಿಂಗರಾಯ ಮಹಾರಾಜಮಠ, ದತ್ತಾತ್ರೇಯ ಮಠಪತಿ, ನಗರದ ಗಣ್ಯರಾದ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಎಂ.ಆರ್.ಪಾಟೀಲ, ಸಿದ್ದಪ್ಪ ಗುನ್ನಾಪುರ, ಎಸ್.ಆರ್.ಮೇತ್ರಿ, ಹಣಮಂತ ಮಾಲಗಾರ, ಜಟ್ಟೆಪ್ಪ ಡೊಂಬಳಿ, ಎ.ಪಿ.ಕಾಗವಾಡಕರ, ಚಂದಣ್ಣ ಆಲಮೇಲ, ದೇವೆಂದ್ರ ಕುಂಬಾರ,ವಿ.ಜಿ.ಕಲ್ಮನಿ, ಸಿದ್ದರಾಮ ತೆಗ್ಗೆಳ್ಳಿ, ಪುಂಡುಸಾಹುಕಾರ ನಿಂಬರಗಿ, ಕಾಂತು ನಾಯ್ಕೋಡಿ, ಬಾಳು ಗಣೊರೆ, ಅನೀಲಗೌಡ ಬಿರಾದಾರ, ಸುನೀಲಗೌಡ ಬಿರಾದಾರ, ಸಂತೋಷಗೌಡ ಪಾಟೀಲ, ಚಂದ್ರಕಾಂತ ವಾರದ, ಎಸ್.ಜಿ.ಧೂಮಗೊಂಡ, ಬಾಳು ಮುಳಜಿ, ರಾಮಸಿಂಗ ಕನ್ನೊಳ್ಳಿ, ರವಿ ಆಳೂರ, ಶಿವಯೋಗೆಪ್ಪ ತೆಗ್ಗೆಳ್ಳಿ, ಶ್ರೀಶೈಲಗೌಡ ಪಾಟೀಲ,ಸಿದ್ದು ಡಂಗಾ, ಯಮುನಾಜಿ ಸಾಳುಂಕೆ ಮೊದಲಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

