ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೃಷಿಯಲ್ಲಿ ನವೋದ್ಯಮವನ್ನು ಎಂಬ ಘೋಷವಾಕ್ಯದೊಂದಿಗೆ ರೈತರನ್ನು ಪ್ರೋತ್ಸಾಹಿಸಲು ಈ ಭಾಗದ ಹೆಚ್ಚಿನ ರೈತ ಫಲಾನುಭವಿಗಳು ತಮ್ಮ ಚಿಂತನೆಗಳನ್ನು ಆವಿಷ್ಕಾರವಾಗಿ ಪರಿವರ್ತಿನೆ ಕಂಡುಕೊಳ್ಳಲು ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ ರೈತರಿಗೆ ಈ ಕೃಷಿ ಮೇಳದಲ್ಲಿ ಪರಿಚಯಿಸಲಾಗುತ್ತಿದೆ ರೈತರು ಈ ಕೃಷಿ ಮೇಳದ ಸದುಪಯೋಗ ಪಡೆದುಕೊಂಡು ತಮ್ಮ ಕೃಷಿಯೊಂದಿಗೆ ಸಾವಯವ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ಎಂದು ನಾಗಠಾಣ ಶಾಸಕರಾದ ವಿಠ್ಠಲ ದೋಂಡಿಬಾ ಕಟಕದೋಂಡ ಹೇಳೀದರು.
ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ, ಜಿಲ್ಲಾ ಪಂಚಾಯತ್, ಆತ್ಮಾಯೋಜನೆ ಇವುಗಳ ಸಂಯುಕ್ತ ಆಶ್ರಯದಲ್ಲಿ, ನಗರದ(ಹಿಟ್ನಳ್ಳಿ ಫಾರ್ಮ)ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ದಿನಾಂಕ ೪ರಿಂದ ೬ ರವರೆಗೆ ೩ ದಿನಗಳ ಕಾಲ ನಡೆಯುವ ಕೃಷಿ ಮೇಳ೨೦೨೫-೨೬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ರೈತರು ವಿವಿಧ ಬೆಳೆಗಳು ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳುಳ್ಳ ಪ್ರಾಯೋಗಿಕ ತಾಕುಗಳ ವೀಕ್ಷಣೆ, ವಿಚಾರ ಗೋಷ್ಠಿ, ಪೌಷ್ಟಿಕತೆ ಮತ್ತು ಆರ್ಥಿಕ ಭದ್ರತೆಗಾಗಿ ಸಾವಯವ ಮತ್ತು ನೈಸರ್ಗಿಕ ಕೃಷಿ, ಕೃಷಿ ಉದ್ದಿಮೆ ಅಭಿವೃದ್ಧಿ ಮತ್ತು ಮಾರುಕಟ್ಟೆ ಹಾಗೂ ಸುಸ್ಥಿರ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳು ಎಂಬ ವಿಷಯಗಳ ಮೇಲೆ ಈ ಕೃಷಿ ಮೇಳದಲ್ಲಿ ಚರ್ಚಾ ಗೋಷ್ಠಿ ರೈತರೊಂದಿಗೆ ವಿಚಾರ ವಿನಿಮಯ ಜರುಗಲಿವೆ ಅದರೊಂದಿಗೆ ಒಣ ಬೇಸಾಯ ತಂತ್ರಜ್ಞಾನ, ಹಿಂಗಾರಿ ಜೋಳದ ತಳಿ ಅಭಿವೃದ್ಧಿ, ಮಳೆ ನೀರು ಕೊಯ್ಲು, ಜೈವಿಕ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆ, ಕಡಲೆ ಮತ್ತು ತೋಗರಿಯ ತಳಿಗಳು. ಎರೆಹುಳು ತಂತ್ರಜ್ಞಾನ, ಸಾವಯವ ಕೃಷಿ, ಕೃಷಿ ಸ್ಪಾರ್ಟಆಪ್, ನೈಸರ್ಗಿಕ ಕೃಷಿ, ಪಶು ಸಂಗೋಪನೆ, ಕೃಷಿ ಹವಾಮಾನ ಮಾಹಿತಿ, ಕೃಷಿ ಯಾಂತ್ರಿಕತೆ, ಬೀಜೋತ್ಪಾದನೆ, ಬೀಜ ಸಂಸ್ಕರಣೆ, ಕೃಷಿ ಮಾರುಕಟ್ಟೆ/ ಗೃಹ ವಿಜ್ಞಾನ ಮಾಹಿತಿ, ಬೃಹತ್ ಜಲಾನಯನ ಅಭಿವೃದ್ಧಿ ಪ್ರಾತ್ಯಕ್ಷಿಕೆ. ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳ ಕುರಿತು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ರೈತ ಭಾಂದವರು ಸಮಗ್ರ ಮಾಹಿತಿಯನ್ನು ಪಡೆದುಕೊಂಡು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಅವರು ಕರೆ ನೀಡಿದರು.
ದೇವಹಿಪ್ಪರಗಿ ಮತಕ್ಷೆತ್ರದ ಶಾಸಕರಾದ ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ್ ಕೃಷಿ ಮೇಳದಲ್ಲಿ ಸ್ಥಾಪಿಸಲಾಗಿರುವ ಮಳಿಗೆಗಳನ್ನು ವೀಕ್ಷಿಸಿ ಮಾತನಾಡಿ, ರೈತರಿಗೆ ಉಪಯುಕ್ತವಾದ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು ಕೃಷಿಯಲ್ಲಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ರೈತರು ಅಭಿವೃದ್ಧಿ ಹೊಂದುವಂತೆ ಅವರು ಕರೆ ನೀಡಿದರು.
ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಅಪ್ಪಾಸಿ ಬಬಲೇಶ್ವರ ಮಾತನಾಡಿ, ಕೃಷಿ ಇಲಾಖೆಯಿಂದ ಪ್ರಕಟಗೊಂಡ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ೩ ದಿನಗಳ ಕಾಲ ನಡೆಯುವ ಈ ಕೃಷಿ ಮೇಳದಲ್ಲಿ ರೈತರಿಗಾಗಿ ಅಭಿವೃದ್ಧಿ ಪಡಿಸಿದ ಅತ್ಯಾಧುನಿಕ ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಮಾರಾಟ ಮಳಿಗಗಳು ಇದ್ದು ರೈತರು ಈ ಕೃಷಿ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಪಿ.ಎಲ್ ಪಾಟೀಲ್ ಕಾರ್ಯಕ್ರಮದ ಪ್ರಾಸ್ಥಾವಿಕವಾಗಿ ಮಾತನಾಡಿ ಈ ವರ್ಷದ ಕೃಷಿ ಮೇಳದ ಅಗ್ರಿಬ್ಯುಸಿನೆಸ್ ಇನ್ಕೂಬಟರ್ ೨೦೧೯ರಲ್ಲಿ ಪ್ರಾರಂಬಿಸಲಾಗಿದ್ದು ಕೃಷಿ ನವೋದ್ಯಮಕ್ಕೆ ಪ್ರೋತ್ಸಾಹಿಸಲು ಅನುಕೂಲವಾಗಿದೆ. ಈಗಾಗಲೇ ೩ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ದ್ರಾಕ್ಷಿಯಲ್ಲಿ ರೋಬೋಟ್ ಚಾಲಿತ ಸಿಂಪರಣೆ, ಸೌರ ವಿದ್ಯುತ್ ಚಾಲಿತ ಕುಡಿ ಚೂಟುವ, ಸಿಂಪರಣೆ ಹಾಗೂ ಕಳೆ ತೆಗೆಯುವ ಯಂತ್ರಗಳ ತಯಾರಿಕೆ, ಬೆಂಚ್ ಗ್ರಾಪ್ಟಿಂಗ್ ತಂತ್ರಜ್ಞಾನ ಅಳವಡಿಕೆ ಮಾಹಿತಿ ನೀಡಲಾಗುತ್ತಿದೆ. ಕೃಷಿ ಮೇಳದಲ್ಲಿ ಒಟ್ಟು ೨೦೦ ಮಳಿಗೆಗೆಳನ್ನು ಹಾಕಲಾಗಿದ್ದು ಅದರಲ್ಲಿ ೧೦ ಯಂತ್ರೋಪಕರಣ,೧೦ ಊಟದ ಮಳಿಗೆ, ರೈತರ ಕಬ್ಬಿನ ವಿವಿಧ ಉತ್ಪನ್ನಗಳ ಕುರಿತ ಕಬ್ಬಿನ ಅಂಕಣ, ಶಿರಿಧಾನ್ಯ ಮಳಿಗೆ, ಕೃಷಿ ಕೌಶಲ್ಯ ಆಧಾರಿತ ಮಳಿಗೆ ಹಾಗೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ರೈತರು ಈ ಮೇಳದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಿವನಗೌಡ ಎಸ್. ಪಾಟೀಲ ಮಾತನಾಡಿ, ರೈತರು ಇಂದು ಕೃಷಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸಮಗ್ರ ಬದಲಾವಣೆಯತ್ತ ಸಾಗಿ ಕೃಷಿಯಲ್ಲಿ ಹೊಸತನ ತರುವ ಚಿಂತನೆ ಹೊಂದಬೇಕು ಹಾಗೂ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಪ್ರಗತಿ ಹೊಂದಬೇಕು ಎಂದು ಅವರು ಹೆಳಿದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಶಿವಾನಗೌಡ ಎಸ್. ಬಿರಾದಾರ ಮಾತನಾಡಿದರು.
ರೈತ ಪಂಡಿತ ಗೌರವ ಪಡೆದ ಬತಗುಣಕಿ ರೈತರಾದ ಮುದ್ದುಗೌಡ ಪಾಟೀಲ್, ಹೆಗಡಿಹಾಳ ಗ್ರಾಮದ ರೈತರಾದ ಕಾಶಿರಾಯ ಬಿರಾದಾರ, ಅಥರ್ಗಾದ ಬಶೀರಅಹಮ್ಮದ ಬಳಿಗಾರ, ರೈತ ಮಹಿಳೆ ಅನಿತಾ ಪಾಟೀಲ ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕರಾದ ಡಾ. ಮಂಜುನಾಥ ಎಮ್.ವಿ, ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಕೃಷ್ಣರಾಜ ಪಿ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಪಾರ್ವತಿ ಕುರ್ಲೆ, ಸುರೇಶ ಘೋಣಸಗಿ, ಶಿವಾನಂದ ಮಂಗಾನವರ, ಬಸವರಾಜ ಕುಂದಗೋಳಮಠ, ವೀರನಗೌಡ ಪೊಲೀಸಗೌಡರ, ಕೃಷಿ ಮಹಾವಿದ್ಯಾಲಯ ಹಾಗೂ ವಿದ್ಯಾಧಿಕಾರಿಗಳಾದ ಡಾ. ಎಸ್.ಬಿ. ಜಗ್ಗೀನವರ, ಸಹ ವಿಸ್ತರಣಾ ನಿರ್ದೇಶಕರಾದ ಎಮ್.ಎಮ್ ಜಮಾದಾರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಎಮ್ ವಸ್ತçದ ಪ್ರಗತಿ ರೈತರು ಹಾಗೂ ಇತರರು ಉಪಸ್ಥಿತರಿದ್ದರು.

