ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಹಿಂದಿನ ಕಾಲದ ಸಮಾಜದಲ್ಲಿ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾದ ಸ್ತ್ರೀಯರು ಇಂದು ಹೊರಗಡೆ ಬಂದು ಶಿಕ್ಷಣ ಪಡೆಯುವಂತೆ ಮಾಡಿದವರು ಸ್ತ್ರೀಯರಿಗೆ ಮೊದಲ ಗುರುವಾದ ಸಾವಿತ್ರಿಬಾಯಿ ಫುಲೆಯವರು ಎಂದು ಜಮಖಂಡಿಯ ಆಂಗ್ಲ ಮಾಧ್ಯಮ ಸ.ಪ.ಪೂ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಬಿ. ಎಸ್. ಬಾಗೋಜಿ ಹೇಳಿದರು.
ಸಮೀಪದ ಕಡಪಟ್ಟಿ ಗ್ರಾಮದ ಮಾಳಿ ಸಮಾಜ ಹಾಗೂ ಶ್ರೀ ಜ್ಯೋತಿಭಾ ಪುಲೆ ಯುವಕ ಮಂಡಳ ಇವರ ಸಹಯೋಗದಲ್ಲಿ ನಡೆದ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಅಕ್ಷರದ ಸಾವಿತ್ರಿಬಾಯಿ ಫುಲೆ ಅವರ 195 ನೆ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿರುವ ಕನಿಷ್ಠ ಪದ್ಧತಿಯಾದ ಬಾಲ್ಯ ವಿವಾಹ, ಅಸ್ಪೃಶ್ಯತೆ, ಸತಿ ಸಹಗಮನ ಪದ್ಧತಿ ವಿರುದ್ಧ ಹೋರಾಟ ಮಾಡಿದವರು, ಇಂದಿನ ವೈಜ್ಞಾನಿಕ ಯುಗದಲ್ಲಿ ಎಲ್ಲ ರಂಗದಲ್ಲಿಯೂ ಸ್ತ್ರೀಯು ಮುಂದೆ ಬಂದಿದ್ದಾಳೆ,ಅವಳು ಮುಂದೆ ಬರುವುದಕ್ಕೆ ಪುರುಷರು ಬೆನ್ನೆಲುಬಾಗಿ ನಿಲ್ಲಬೇಕು, ಶಿಕ್ಷಣದಿಂದ ಜೀವನ ಬೆಳಕು ಆಗುತ್ತದೆ, ಇದರಿಂದ ಸ್ತ್ರೀಯರು ಸ್ವಾವಲಂಬಿಗಳಾಗುತ್ತಾರೆ. ಜ್ಞಾನವೇ ನಮ್ಮ ಶಕ್ತಿ ಅದು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ, ಅವಮಾನ ಅಪಮಾನಗಳು ಆದರೆ ಅವುಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದರು.
ಶಿಕ್ಷಕರಾದ ಬಸವರಾಜ ಲಕ್ಷ್ಮೇಶ್ವರ ಪ್ರಸ್ತಾವಿಕವಾಗಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ಶಿಕ್ಷಣ ನೀಡಿ ಇಂದು ಪ್ರತಿಯೊಬ್ಬ ಹೆಣ್ಣು ಮಗಳು ಸಾಧನೆ ಮಾಡುತ್ತಿದ್ದಾಳೆ ಎಂದರೆ ಅದು ಸಾವಿತ್ರಿಬಾಯಿಯವರು ಹಾಕಿದ ಶಿಕ್ಷಣದ ಅಡಿಪಾಯವೇ ಕಾರಣ ಎಂದು ಹೇಳಿದರು.
ಸಾಧನೆ ಮಾಡಿದ ಸ್ತ್ರೀಯರಿಗೆ ಸನ್ಮಾನ : ಅತಿ ಕಷ್ಟದಿಂದ ಉನ್ನತ ಮಟ್ಟಕ್ಕೇ ಎರಿದ ಮಹಿಳೆಯರ ಮಹಿಳೆಯಾದ ಶ್ವೇತಾ ಗುರುಪಾದ ಮಾಳಿ ಇವರಿಗೆ ವೇದಿಕೆ ಮೇಲೆ ಕರೆಸಿ ಸನ್ಮಾನ ಮಾಡಲಾಯಿತು. ಪ್ರತಿ ವರ್ಷ ಕಷ್ಟದಿಂದ ಉನ್ನತ ಸಾಧನೆ ಮಾಡಿದ ಸಾಧಕೀಯರಿಗೆ ಪ್ರತಿ ವರ್ಷ ಸನ್ಮಾನ ಮಾಡಲಾಗುವುದು ಎಂದು ಊರಿನ ಹಿರಿಯರಾದ ಮಹಾನಿಂಗ ರಾಮದುರ್ಗ ಹೇಳಿದರು.ಇದೇ ಸಂದರ್ಭದಲ್ಲಿ ಗ್ರಾಮದ ಕೇದಾರಿ ರಾವಳೋಜಿ ಅವರು ಕರ್ನಾಟಕ ಪ್ರೆಸ್ ಕ್ಲಬ್ ಬೆಂಗಳೂರು, ಜಮಖಂಡಿ ಘಟಕದ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಗ್ರಾಮದ ಯುವಕರಾದ ಜಗದೀಶ್ ಮಾಳಿ, ಮಹೇಶ್ ಬೆಳಗಲಿ, ಶ್ರೀಕಾಂತ್ ಜಾಲಿಬೆರಿ, ಮಹಾಂತೇಶ್ ಬೆಳಗಲಿ, ಚಂದು ರಾವಳೋಜಿ, ಈಶ್ವರ್ ಕಲ್ಯಾಣಿ ಸೇರಿದಂತೆ ಸನ್ಮಾನಿಸಿ, ಗೌರವಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮಹಾನಿಂಗ ರಾಮದುರ್ಗ, ಗುರುಪಾದ ರಾವಳೋಜಿ, ಬಸಪ್ಪ ಕೋಣಪ್ಪನವರ್, ಈರಪ್ಪ ಬೆಳಗಲಿ, ಬಸವರಾಜ್ ಮಾಳಿ, ಮಲ್ಲಪ್ಪ ಅಪ್ಪನಗೊಳ, ಶಂಬು ಕಡಕೋಳ, ಜಕ್ಕಪ್ಪ ಮೆಂಡಿಗೇರಿ, ಸಲಬಯ್ಯ ಮಠಪತಿ, ರೂಪಾ ಜಂಬಗಿ, ಮಾನವ್ವ ರಾವಳೋಜಿ , ರಾಮಣ್ಣ ಕಲ್ಯಾಣಿ ವೇದಿಕೆ ಮೇಲಿದ್ದರು.ಮಂಜು ಮಾಳಿ, ಗಿರೀಶ್ ಜಾಲಿಬೆರಿ, ಬಸವರಾಜ್ ಜಾಲಿಬೆರಿ, ಬಸು ಜಂಬಗಿ, ರವಿ ಮುಗಳಖೊಡ, ಮುತ್ತಪ್ಪ ಮಾಳಿ, ಸುಭಾಷ್ ಭಗರನಾಳ, ಸಿದ್ದರಾಮ ಬಗರನಾಳ, ಕಿರಣ್ ಮಾಳಿ, ಚನ್ನಪ್ಪ ಶಿರೋಳ, ಜಗದೀಶ್ ಬೆಳಗಲಿ, ಶ್ರೀಕಾಂತ್ ತೆಗ್ಗಿ, ಮಹೇಶ್ ಗೊಂದಳಿ, ಅಪ್ಪಣ್ಣ ಜಂಬಗಿ ಸೇರಿದಂತೆ ಊರಿನ ಹಿರಿಯರು, ಮಹಿಳೆಯರು ಪಾಲ್ಗೊಂಡಿದ್ದರು. ಶಿಕ್ಷಕರಾದ ಶಿವಾನಂದ್ ಕಲ್ಯಾಣಿ ನಿರೂಪಿಸಿದರು, ಕೆ.ಎಲ್. ಮಾಳಿ ವಂದಿಸಿದರು.

