ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಸುವರ್ಣ ಸಂಭ್ರಮೋತ್ಸವದಲ್ಲಿ ಶಾಸಕ ಕಟಕದೊಂಡ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಲೋಣಿ ಬಿಕೆ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಸುವರ್ಣ ಸಂಭ್ರಮೋತ್ಸವ ಕಾರ್ಯಕ್ರಮವು ದಿ.ರಾಜಶೇಖರ ಕಲ್ಯಾಣಶೆಟ್ಟಿ ವೇದಿಕೆಯಲ್ಲಿ ಶನಿವಾರ ಜರುಗಿತು.
ಕಾರ್ಯಕ್ರಮವನ್ನು ವಿಜಯಪುರ ಸಂಸದ ರಮೇಶ ಜಿಗಜಣಗಿ ಉದ್ಘಾಟಿಸಿದರು.
ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಮ್. ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ಬಡಮಕ್ಕಳಿಗೆ ಶಿಕ್ಷಣ ಕಲ್ಪಿಸಲು ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಋಣಿಯಾಗಿರುತ್ತೆನೆ ಎಂದರು.
ಸಂಸದ ರಮೇಶ ಜಿಗಜಿಣಗಿ ಸುವರ್ಣ ಸಂಭ್ರಮೋತ್ಸವವನ್ನು ಉದ್ಘಾಟಿಸಿ ಹಾಗೂ ಸಂಸ್ಥೆಯ 50ನೇ ವರ್ಷದ ಶಿಕ್ಷಣ ಸಂಸ್ಥೆಯ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಿಕ್ಷಣ ನೀಡುವದು ಪುಣ್ಯದ ಕೆಲಸ, ತಾಯಿ ಮೊದಲ ಗುರು, ನಂತರ ಶಿಕ್ಷಕರು. ಅದಕ್ಕಾಗಿ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಇಂದಿನ ಶಿಕ್ಷಣದ ತಳಹದಿಯ ಮೇಲೆ ನಿಂತಿದೆ ಎಂದ ಅವರು, ಗಡಿಭಾಗದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ಬಿ.ಎಮ್. ಕೋರೆ ಅವರಿಂದ ಲೋಣಿ ಗ್ರಾಮ ವಿದ್ಯಾಕಾಶಿಯಾಗಿದ್ದು ಈ ಸಾಧನೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಮಹೋತ್ಸವದ ಕಾರ್ಯಾಧ್ಯಕ್ಷ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅವರು ಮಾತನಾಡಿ, ಬಿ.ಎಮ್. ಕೋರೆ ಅವರು ತಮ್ಮ 27ನೇ ವಯಸ್ಸಿನಲ್ಲಿ ಗಡಿ ಭಾಗವಾದ ಲೋಣಿ ಬಿ.ಕೆ. ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಸಂಸ್ಥೆಯ ಬೆಳವಣಿಗೆಗಾಗಿ ಹಗಲಿರುಳು ತಮ್ಮ ಜೀವನದ ಹಂಗನ್ನು ತೊರೆದು ಸಂಸ್ಥೆಗಾಗಿ ಶ್ರಮಿಸಿದ್ದಾರೆ. ಆ ಸಂಸ್ಥೆ ಇಂದು ಹೆಮ್ಮರವಾಗಿ ಲೋಣಿ ಗ್ರಾಮ ಸೇರಿದಂತೆ ತಾಲೂಕಿನ ಬೇರೆ ಕಡೆಗಳಲ್ಲಿ 11 ಅಂಗ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಇದು ರಾಜ್ಯದ ಗಡಿಭಾಗದ ಬಡಜನರಿಗೆ ಶಿಕ್ಷಣದ ಆಶ್ರಯವನ್ನು ನೀಡಿ, ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ರಾಜ್ಯವಲ್ಲದೇ ದೇಶದ ಬೇರ ಬೇರೆ ಭಾಗದಲ್ಲಿ ಐ.ಪಿ.ಎಸ್. ಡಾಕ್ಟರ್, ಶಿಕ್ಷಕ, ಉದ್ಯಮಿಗಳಾಗಿ ಮತ್ತು ಸಂಘ-ಸಂಸ್ಥೆಗಳ ಮಾಲೀಕರಾಗಿ ಹೊರಹೊಮ್ಮಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಗಡಿಭಾಗದಲ್ಲಿ ಸುಮಾರು 50 ವರ್ಷಗಳಿಂದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಹಿಪ್ಪರಗಿ ಅವರು ಪ್ರಾಸ್ಥಾವಿಕವಾಗಿ ಮಾತನಾಡಿದರು.
ಸಾನಿದ್ಯ ಮಹಿಸಿದ್ದ ವಿಜಯಪೂರ-ಹುಬ್ಬಳ್ಳಿ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಸ್ವಾಮೀಜಿ ಆಶಿರ್ವಚನ ನೀಡಿದರು.
ಮಹಾಂತೇಶ ಹಿರೇಮಠ ನಿರೂಪಿಸಿದರು.
ವೇದಿಕೆಯ ಮೇಲೆ ಮಾಜಿ ಶಾಸಕ ಮನೋಹರ ಐನಾಪೂರ, ಚಡಚಣ ಪ.ಪಂ, ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಮುಖಂಡ ಮಹಾದೇವ ಸಾಹುಕಾರ ಬೈರಗೊಂಡ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣಾ ಕೌಲಗಿ, ಮುಖಂಡರಾದ ಇಲಿಯಾಸ ಬೋರಾಮಣಿ, ಜಟ್ಟೆಪ್ಪ ರವಳಿ, ರಾಘವೇಂದ್ರ ಕಾಪಸೆ, ಸಣ್ಣಪ್ಪ ತಳವಾರ, ಎಚ್ ಆರ್ ಉಟಗಿ, ಭೀಮರಾಯ ಲೋಣಿ, ಶ್ರೀನಿವಾಸ ಕುಲಕರ್ಣಿ, ಶಾಹಾಜಿ ಮಿಸಾಳೆ, ಸೋಮಶೇಖರ ಮಾಳಾಬಾಗಿ, ಶಶಿಧರ ಕಲ್ಯಾಣಶೆಟ್ಟಿ, ದ್ಯಾಮಗೊಳ ಕಾಂಬಳೆ, ನಾರಾಯಣ ಜಹಾಗೀರದಾರ, ಸಿದ್ದಾರಾಮ ನಿಚ್ಚಳ, ಧಾನಮ್ಮಗೌಡತಿ ಪಾಟೀಲ, ಆರ್.ಡಿ.ಹಕ್ಕೆ, ರವಿ ಖಾನಾಪುರ ಸೇರಿದಂತೆ ಮತ್ತಿತರರು ಇದ್ದರು.

