ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗ್ರಾಮ ಒನ್ ಯೋಜನೆಯನ್ನು ವಿಸ್ತರಿಸಲು ಸದರಿ ಯೋಜನೆಯನ್ನು ಫ್ರಾಂಚೈಸಿಗಳ ಮೂಲಕ ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ವಿಜಯಪುರ ತಾಲೂಕಿನ ಕನ್ನೂರ ೦೧, ಇಂಡಿ ತಾಲೂಕಿನ ಝಳಕಿ ೦೧ ಸಿಂದಗಿ ತಾಲೂಕಿನ ರಾಂಪೂರ ಪಿ.ಎ ೦೧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಫ್ರಾಂಚೈಸಿ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ದಿನಾಂಕ : ೧೫-೦೧-೨೦೨೬ರ ರಾತ್ರಿ ೧೧:೫೯ರವರೆಗೆhttps://www.karnatakaone.gov.in/Public/FranchiseeTerms ಲಿಂಕ್ ಮೂಲಕ ಗ್ರಾಮ ಒನ್ ಫ್ರಾಂಚೈಸಿ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
