ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೃಷಿ ಇಲಾಖೆಯ ವತಿಯಿಂದ ಜನವರಿ ೦೩ರಂದು ಬೆಳಿಗ್ಗೆ ೭ರಿಂದ ೮:೩೦ರವರೆಗೆ ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಿರಿ ಧಾನ್ಯ ನಡಿಗೆ ಕಾರ್ಯಕ್ರಮವು ಜ್ಞಾನಯೋಗಾಶ್ರಮದಿಂದ ಆರಂಭಗೊಂಡು, ಶ್ರೀ ಸಿದ್ದೇಶ್ವರ ದೇವಸ್ಥಾನ, ಗಾಂಧಿ ವೃತ್ತ,ಬಸವೇಶ್ವರ ವೃತ್ತದ ಮೂಲಕ ಗಗನಮಹಲವರೆಗೆ ನಡೆಯಲಿದೆ.
ಸಿರಿ ಧಾನ್ಯ ನಡಿಗೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು,ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
