ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ರೈತರಿಗೆ ನೂರಾರು ರೀತಿಯಲ್ಲಿ ಶೋಷಣೆ, ಮೋಸ ವಂಚನೆ ಮಾಡಲಾಗುತ್ತಿದೆ, ಅಂತವರಿಗೆ ನ್ಯಾಯಯೂತವಾಗಿ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರೊಂದಿಗೆ ಜಿಲ್ಲಾಧಿಕಾರಿಗಳಾದ ಡಾ ಆನಂದ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ ಜಿಲ್ಲೆಯಲ್ಲಿ ರೈತರಿಗೆ ಹಲವಾರು ರೀತಿಯಲ್ಲಿ ಮೋಸ ಆಗುತ್ತಿದೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅದರಲ್ಲಿ ಮುಖ್ಯವಾಗಿ ಕಬ್ಬಿನ ತೂಕದಲ್ಲಿ ಮನ್ನಾಪುರ ಸಂಗಮನಾಥ ಸಕ್ಕರೆ ಕಾರ್ಖಾನೆಯಿಂದ ೫೬೦ ಕೆ.ಜಿ ಮೋಸವನ್ನು ಬಯಲೆಗೆಳೆಯಲಾಗಿದೆ, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಈ ಹಿಂದೆ ಕಬ್ಬು ಕೊಟ್ಟು ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಮತ್ತು ಸಕ್ಕರೆ ಸಚಿವರ ಹೇಳಿಕೆಯಂತೆ ೫ ಲಕ್ಷ ಬಹುಮಾನ ಕೋಡಬೇಕು ಎಂದರು.
ಅದೇರೀತಿ ದ್ರಾಕ್ಷಿ ವಿಮೆ ತುಂಬಿದ ೧೮೮೫ ಕ್ಕು ಅಧಿಕ ರೈತರಿಗೆ ವಿಮೆ ಬರಬೇಕು, ಮೆಕ್ಕಜೋಳ ಖರೀದಿ ಕೇಂದ್ರ ಆರಂಭಿಸಬೇಕು, ಫಸಲ ಭೀಮಾ ಯೋಜನೆಯಡಿ ಮಧ್ಯವರ್ತಿಗಳು ಸಾಕಷ್ಟು ದೊಡ್ಡ ಆಟ ಆಡುತ್ತಿದ್ದು, ಇದರಿಂದ ನಿಜವಾಗಿ ನಷ್ಟಗೊಂಡ ರೈತರಿಗೆ ಅನ್ಯಾಯವಾಗುತ್ತಿದೆ, ಇದು ನಿಲ್ಲಬೇಕು, ಕನ್ನಡದಲ್ಲಿ ವಿಮೆ ಕುರಿತು ಪುಸ್ತಕ ಮುದ್ರಿಸಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ರೈತರಿಗೆ ಜಾಗೃತಿ ಕಾರ್ಯಕ್ರಮ ಆಗಬೇಕು ಎಂದರು.
ಭೀಮಾಶAಕರ ಕಾರ್ಖಾನೆಯ ಹೊಲಸ ನೀರನ್ನು ಅಕ್ಕಪಕ್ಕದ ಜಮೀನುಗಳಲ್ಲಿ ಬಿಟ್ಟು ಜಮೀನನ್ನು ಹಾಳು ಮಾಡುತ್ತಿದ್ದು, ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಂದ ತಪಾಸಣೆ ಮಾಡಿ ಸೂಕ್ತ ನ್ಯಾಯ ಒದಗಿಸಬೇಕು,
ಇತ್ತಿಚಿಗೆ ಸುರಿದ ವಿಫರಿತ ಮಳೆ ಹಾಗೂ ಪ್ರವಾಃದಿಂದ ರಾಜ್ಯದಲ್ಲಿ ೨೨೪೯ ಕೋಟಿ ಬಂದಿದೆ ಅದರಲ್ಲಿ ಜಿಲ್ಲೆಗೆ ೫೮೦ ಕೋಟಿ ಬಂದಿರುವುದಾಗಿ ಕೇಳಿದ್ದೇವೆ, ಆದರೆ ಇನ್ನು ಹಲವಾರು ಗ್ರಾಮ ಪಂಚಾಯತಿಗಳಲ್ಲಿ ನಷ್ಟಗೊಂಡ ಸಾಕಷ್ಟು ರಯತರಿಗೆ ಪರಿಹಾರ ಬಂದಿಲ್ಲ, ಸಮೀಕ್ಷೆ ಮಾಡಿದರು ಪರಿಹಾರ ಬರದಿರುವ ರೈತರು ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ತಿಡಗುAದಿಯಲ್ಲಿ ರೈತರ ಫಲವತ್ತಾದ ೧೨೦೩ ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಮಾಡಲು ಹೊರಟಿದೆ, ಇದು ಕೂಡಾ ಗೋರ ಅನ್ಯಾಯವಾಗಿದೆ, ಇದು ಬೇರೆಡೆಗೆ ಸ್ಥಳಾಂತರಿಸಬೇಕು ಎಂಧರು.
ಈ ವೇಳೆ ಸಿಂದಗಿ ತಾಲುಕಾ ಅಧ್ಯಕ್ಷರಾದ ಧರೆಪ್ಪಗೌಡ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಸಂಚಾಲಕರಾದ ಮಹಾದೇವ ಬನಸೋಡೆ, ಚಡಚಣ ತಾಲೂಕಾ ಉಪಾಧ್ಯಕ್ಷರಾದ ಗೆನಪ್ಪಾ ಬಿರಾದಾರ, ಶಿವಾನಂದ ಬಿರಾದಾರ, ಶಂಕರ ಪೂಜಾರಿ, ಕನಮಡಿ ಅಧ್ಯಕ್ಷರಾದ ಧರೇಪ್ಪ ಅನಂತಪುರ, ದೇವರಹಿಪ್ಪರಗಿ ಅಧ್ಯಕ್ಷರಾದ ಈರಪ್ಪ ಕುಳೆಕುಮಟಗಿ, ಶಿವಾನಂದಯ್ಯ ಹಿರೇಮಠ, ಬಸವರಾಜ ತಾಳಿಕೋಟಿ, ಮಲ್ಲು ಶಿರಾಡೋಣ, ಮುಲ್ಲು ಅವಟಿ, ದಾದಾಪೀರ ಮುಲ್ಲಾ, ಅಭಿಷೇಕ ವಾಕಡೆ, ಶರಣು ಅವಟಿ, ಹುಸೇನ ಮುಲ್ಲಾ, ಕಲ್ಲಪ್ಪ ಹಜೇರಿ ಸೇರಿದಂತೆ ಅನೇಕರು ಇದ್ದರು.

