Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಿಕೆಲ್ ಸೆಲ್ ಅನೀಮಿಯ ಜಾಗೃತಿ ನಿರ್ಮೂಲನಾ ಕಾರ್ಯಕ್ರಮ

ಸಚ್ಚಾರಿತ್ರ್ಯದ ಸನ್ಮಾರ್ಗವೇ ಶಿಕ್ಷಣ :ಡಾ.ಯಂಕನಗೌಡ

ಗುರು ರಾಘವೇಂದ್ರ ಸೇವಾ ಸಮಿತಿಯಿಂದ ದಾಸೋಹ ಸೇವೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕನ್ನೇರಿ ಶ್ರೀಗಳ ಸವಾಲನ್ನು ನಾವು ಎದೆಯುಬ್ಬಿಸಿ ಸ್ವೀಕರಿಸಿದ್ದೇವೆ!
(ರಾಜ್ಯ ) ಜಿಲ್ಲೆ

ಕನ್ನೇರಿ ಶ್ರೀಗಳ ಸವಾಲನ್ನು ನಾವು ಎದೆಯುಬ್ಬಿಸಿ ಸ್ವೀಕರಿಸಿದ್ದೇವೆ!

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಅಭಿಮತ
– ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ
ಕಲ್ಯಾಣ ಮಹಾಮನೆ ಮಹಾಮಠ
ಗುಣತೀರ್ಥವಾಡಿ-ಬಸವಕಲ್ಯಾಣ

ಉದಯರಶ್ಮಿ ದಿನಪತ್ರಿಕೆ

ಬಸವ ಸಂಸ್ಕೃತಿ ಅಭಿಯಾನದ ವಿರುದ್ಧವಾಗಿ ಬಬಲೇಶ್ವರದಲ್ಲಿ ಆಯೋಜಿಸಿದ್ದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಅಪ್ರಬುದ್ಧವಾಗಿ ಮಾತನಾಡಿ, ಬಸವಾದಿ ಪ್ರಮಥರ ಮೂಲ ಆಶಯಗಳನ್ನು ತಪ್ಪು ತಪ್ಪಾಗಿ ಅರ್ಥೈಸಿ ಜನಗಳಿಗೆ ಮೂರ್ಖರನ್ನಾಗಿಸುವ ಕನ್ನೇರಿ ಸ್ವಾಮಿಗಳ ಪ್ರತಿಯೊಂದು ಮಾತುಗಳಿಗೆ ಉತ್ತರಿಸಲು ಸವಾಲನ್ನು ಸ್ವೀಕರಿಸಲು ನಾವು ಸದಾ ಸನ್ನದ್ಧರಾಗಿದ್ದೇವೆ.
ಕನ್ನೇರಿ ಶ್ರೀಗಳಿಗೆ ವಚನಗಳಲ್ಲಿನ ತತ್ವಜ್ಞಾನ ಮತ್ತು ದಾರ್ಶನಿಕತೆಯ ಕೊರತೆ ಎದ್ದು ಕಾಣುತ್ತಿದೆ. ಅವರ ಪ್ರತಿಯೊಂದು ಮಾತುಗಳು ಪ್ರಚೋದನಾತ್ಮಕ ಮತ್ತು ದ್ವೇಷದಿಂದ ಕೂಡಿವೆ. ‘ಇಲಿಗೆ ಹೊಡೆಯಲು ಹೋಗಿ ಗಣಪನಿಗೆ ಪೆಟ್ಟು ಕೊಟ್ಟಂತೆ’ ಎಂಬಿ ಪಾಟೀಲ, ಭಾಲ್ಕಿ ಶ್ರೀ, ನಿಜಗುಣಾನಂದ ಸ್ವಾಮೀಜಿ ಮತ್ತು ಸಾಣೆಹಳ್ಳಿ ಶ್ರೀಗಳಿಗೆ ವೈಯುಕ್ತಿಕವಾಗಿ ಬೈಯಲು ಹೋಗಿ ಬಸವಣ್ಣನವರ ಜೀವನಕ್ಕೆ ಮತ್ತು ಅವರ ವಚನಗಳ ಅಂಕಿತದ ತಾತ್ವಿಕತೆಗೆ ದಕ್ಕೆಯನ್ನುಂಟು ಮಾಡುತ್ತಿರುವುದು ಅವರ ಅಜ್ಞಾನದ ಪರಮಾವಧಿಯಾಗಿದೆ.
ಕನ್ನೇರಿ ಶ್ರೀಗಳ ಮಾತುಗಳ ರೂಪದಲ್ಲಿಯೇ ಸವಾಲಿನ ಪ್ರಶ್ನೆಗಳು ಉದ್ಭವಿಸುತ್ತಿವೆ ಇದಕ್ಕೆ ಉತ್ತರಿಸಿ..
1) ಬಸವಣ್ಣನವರ ಯಾವ ವಚನದಲ್ಲಿಯೂ ಲಿಂಗಾಯತ ಧರ್ಮದ ಪದ ಬಂದಿಲ್ಲ ಎಂದಿರುವಿರಿ ಈ ಪ್ರಶ್ನೆಗೆ ನಾವು ಉತ್ತರಿಸುತ್ತೇವೆ. ಹಿಂದೂ ಎಂಬ ಪದ ಭೌಗೋಳಿಕ ಪದವೇ ಹೊರತು ಅದು ಧರ್ಮದ ಪದವಲ್ಲ. ಮೊದಲು ಹಿಂದೂ ಧರ್ಮ ಎಂಬ ಪದ ಯಾವ ವೇದ, ಉಪನಿಷತ್, ಆಗಮ, ಶಾಸ್ತ್ರಗಳಲ್ಲಿ ಬಂದಿದೆ, ಆ ಪದವನ್ನು ಶರಣರ ಯಾವ ವಚನಗಳಲ್ಲಿ ಬಳಿಸಿರುವರು ಹೇಳಿ.
2) ಬಸವಣ್ಣನವರನ್ನು ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದಿರುವಿರಿ ಹಾಗಾದರೆ ನಿಮ್ಮ ಮಠ ಬಸವಾದಿ ಶರಣರ ಪರಂಪರೆಯ ಮಠವಾಗಿದ್ದರೂ ಅದರ ಒಂದಿಷ್ಟು ಜ್ಞಾನವಿಲ್ಲದೆ ವೈದಿಕರ ಗುಲಾಮರಾಗಿ ಸನಾತನ ಧರ್ಮ ಪ್ರಚಾರ ಮಾಡುತ್ತಿರುವುದು ನೀವೂ ಪೆಟೆಂಟ್ ಪಡೆದಂತೆ ಅಲ್ಲವೆ?
3) ವಿಭೂತಿ ಎದ್ದು ಕಾಣುವಂತೆ ಹಚ್ಚಿಕೊಳ್ಳುತ್ತಾರೆ ಅವರಂತೆ ನಾನು ಡ್ರಾಮಾ ಮಾಡುವುದಿಲ್ಲ ಎಂದಿರುವಿರಿ ಹಾಗಾದರೆ ಕುಂಕುಮವನ್ನು ಎದ್ದು ಕಾಣುವಂತೆ ಹಚ್ಚಿಕೊಂಡು ನಾನು ಸನಾತನಿ ಅನ್ನುತ್ತಿರುವುದು ಇದ್ಯಾವ ನಾಟಕ?
3) ಬಸವಣ್ಣನವರು ಕೊಟ್ಟ ಇಷ್ಟಲಿಂಗವನ್ನು ಕಲ್ಲು ದೇವರು ಎಂದಿದ್ದೀರಿ. ಇಷ್ಟಲಿಂಗ ದೇವನ ಚೈತನ್ಯದ ಕುರುಹು ಎಂಬ ಸಾಮಾನ್ಯ ಜ್ಞಾನವೂ ಗೊತ್ತಿಲ್ಲದ ನೀವು ಹೆಡ್ಡ, ದಡ್ಡನು ಎಂಬುದು ಅರ್ಥವಾಯಿತು. “ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ ಲಿಂಗದ ಮೇಲೆ ನಿಷ್ಟೆ ಇಲ್ಲದ ಭಕ್ತ ಇದ್ದಡೇನು ಶಿವ ಶಿವ ಹೋದಡೇನು” ಎನ್ನುವಂತೆ ಲಿಂಗದ ಮೇಲೆ ನಿಷ್ಟೆ ಮತ್ತು ದೀಕ್ಷೆ ಸಂದರ್ಭದಲ್ಲಿ ಗುರು ಹೇಳಿದ ಮಾತನ್ನು ಮರೆತ ನೀವು ಗುರು ದ್ರೋಹಿಯಾದ ಕಾರಣ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ನಿಮಗಿಲ್ಲ.
4) ವಚನಾಂಕಿತಗಳು ಸನಾತನ ಧರ್ಮದ ದೇವರು ಎಂದಿರುವಿರಿ. ವಚನಾಂಕಿತಗಳ ಸತ್ಯಾಸತ್ಯತೆ ಅರಿಯದ ನಿಮ್ಮಂತಹ ಭೂಪರು ಮುಂದೆ ಬರಬಹುದೆಂದು,
ಈ ವಚನಾಂಕಿತಗಳ ಸಮಸ್ಯೆ ಬರಬಾರದೆಂದು ಹರ್ಡೇಕರ್ ಮಂಜಪ್ಪನವರು(ಬಸವ ಬೋಧಾಮೃತ) ಮತ್ತು ಪೂಜ್ಯ ಶ್ರೀ ಮಾತೆ ಮಹಾದೇವಿಯವರು(ಲಿಂಗದೇವನ ಲೀಲಾ ವಿಶೇಷ) ಹಾಗೂ ಮನಗುಂಡಿಯ ಬಸವಾನಂದ ಸ್ವಾಮಿಗಳು(ವಚನ ಸಾಹಿತ್ಯದ ಅಂಕಿತಗಳ ರಹಸ್ಯ) ವಚನಗಳ ಅಂಕಿತದಲ್ಲಿ ಬರುವ ನಾಮಗಳೆಲ್ಲ ಲಿಂಗಾಯತ ಧರ್ಮದ ದೇವರು ಪರಶಿವ(ಲಿಂಗದೇವ)ನನ್ನು ಸೂಚಿಸುತ್ತವೆ ಎಂದು ಸಂಶೋಧಿಸಿದ್ದಾರೆ ಅಂಕಿತಗಳ ಸತ್ಯವನ್ನು ನಾವು ಅರಿತಿದ್ದೇವೆ ನಿಮಗೆ ತಿಳಿಸಲು ಸದಾ ಸಿದ್ಧ.
5) ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿ ಶ್ರೀಗಳು ಮೃದು ಸ್ವಭಾವದವರು ಬಸವಣ್ಣನವರ ನಡೆಯನ್ನು ಅನುಸರಿಸಿ, ನೀವು ಆಡಿದ ಅಸಂವಿದಾನಿಕ ಪದದ ಬಗ್ಗೆ ಪ್ರೀತಿಯಿಂದ ಆ ಮಾತನ್ನು ಇನ್ನು ಮುಂದೆ ಬಳಸಬೇಡಿ ಎಂದು ಕೇಳಿಕೊಂಡಿದ್ದಾರೆ ಅವರ ಮಾತುಗಳನ್ನು ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಒಳಗು ಮಾಡಿ ಜನಗಳಿಂದ ಚಪ್ಪಾಳೆ ಗಿಟ್ಟಿಸಿದ್ದೀರಿ ಗೌರವಾನ್ವಿತ ಪೂಜ್ಯರನ್ನು ಸಾರ್ವಜನಿಕವಾಗಿ ಅಪಮಾನಗೊಳಿಸುವುದು ಸರಿಯೇ?
6) ತಮ್ಮ ಮಾತಿನ ಸವಾಲುಗಳು ನಮ್ಮನ್ನು ವಿಚಲಿತ ಮಾಡಲು ಸಾಧ್ಯವಿಲ್ಲ. ಮಾತೆ ಮಹಾದೇವಿ ಶಿಷ್ಯರು ಇನ್ನೂ ಜೀವಂತವಾಗಿದ್ದೇವೆ. ನಮ್ಮ ಗುರುಗಳು ಮಾತೆ ಮಹಾದೇವಿಯವರಿದ್ದಾಗ ಬಾಲ ಮುಚ್ಚಿಕೊಂಡು ಮಠದಲ್ಲಿ ಬಿಲ ಸೇರಿಕೊಂಡಿದ್ದೀರಿ. ಈಗ ಲಿಂಗಾಯತ ಮಠಾಧೀಶರ ಸಾತ್ವಿಕತೆಯ ನಿಲುವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವಿರಿ. ಅವರು ನಮ್ಮ ಗುರುಗಳಂತೆ ಮೈ ಕೊಡವಿ ನಿಂತರೆ ನಿಮ್ಮ ಪರಿಸ್ಥಿತಿ ನೆನೆಯಲು ಸಾಧ್ಯವಿಲ್ಲ ಆ ಕಾಲ ಬಂದಿದೆ.
7) ಬಸವ ತತ್ವ ಮಠಗಳೆಲ್ಲ ಹಿಂದೂ ಸನಾತನದ್ದವು ಮತ್ತು ಜನಗಳು ಕಟ್ಟಿದ್ದು ಹಿಂದೂ ಸನಾತನದ ಹೆಸರಿನ ಮೇಲೆ ಬದುಕುತ್ತಿವೆ ಎಂದು ಹೇಳಿರುವಿರಿ, ಐತಿಹಾಸಿಕ- ಜ್ಞಾನವಿಲ್ಲದ ಈ ಮಾತು ನಿಮ್ಮ ದಡ್ಡತನಕ್ಕೆ ಕನ್ನಡಿಯಾಗಿದೆ. ಮುರುಘಾ ಮಠ, ಷಣ್ಮುಖ ಸ್ವಾಮಿ ಮಠ, ಚಿತ್ತರಗಿ ಮಠ, ಅಥಣಿ ಗಚ್ಚಿನ ಮಠ, ಗದಗ ಡಂಬಳ ಮಠ, ಮೂರು ಸಾವಿರ ಮಠ, ಭಾಲ್ಕಿ ಮಠ, ಬಸವ ಧರ್ಮ ಪೀಠ, ಹುಲಸೂರು ಮಠ, ಕಿತ್ತೂರು ಮಠ, ಹರಿಹರ ಮಠ, ಸಾಣೆಹಳ್ಳಿ ಮಠ ಮತ್ತು ನೀವಿರುವ ಕಾಡಸಿದ್ದೇಶ್ವರ ಮಠ ಇನ್ನಿತರ ಸಾವಿರಾರು ಮಠಗಳು ಬಸವ ಧರ್ಮ ಪ್ರಚಾರದ ದೃಷ್ಟಿಕೋನಕ್ಕಾಗಿಯೇ ಹುಟ್ಟಿಕೊಂಡಿವೆ. ಲಿಂಗಾಯತ ರಾಜ, ರಾಣಿಯರು, ಉದ್ಯೋಗ ಪತಿಗಳು, ಲಿಂಗಾಯತ ಕಾಯಕ ಜೀವಿಗಳು ಶ್ರಮವಹಿಸಿ, ಬೆವರು ಸುರಿಸಿ ಲಿಂಗಾಯತ ಧರ್ಮ ಬೆಳೆಸಲು ಮಠವನ್ನು ಕಟ್ಟಿದ್ದಾರೆ. ಇಂತಹ ಮಠಗಳಿಗೆ ಸನಾತನ ಧರ್ಮದ ನಿಮ್ಮಂತಹ ವೇಷಧಾರಿಗಳು ಬಂದು ಸೇರಿದ್ದೀರಿ. ಲಿಂಗಾಯತರು ತಮ್ಮ ಧರ್ಮದ ನಿಷ್ಟೆ ಗೊತ್ತಾದರೆ ನಿಮಗೇ ಅನ್ನ ಸಿಗಲಿಕ್ಕಿಲ್ಲ ಎಂಬ ಎಚ್ಚರಿಕೆ ನಿಮಗಿರಲಿ.
8) ಬಸವ ಸಂಸ್ಕೃತಿ ಅಭಿಯಾನದ ಲೆಕ್ಕ ಕೇಳುವ ನೀವು ಬಬಲೇಶ್ವರದಲ್ಲಿ ನಡೆದ ಕಾರ್ಯಕ್ರಮ ಯಾವ ದುಡ್ಡಿನಿಂದ ಆಯೋಜಿಸಿರುವಿರಿ ಎಂಬುದು ಲೆಕ್ಕ ಕೊಡಬೇಕು.
9) ಸೂ..ಮಕ್ಕಳು, ಮೆ..ಮೆ..ಹೊಡೆಯಬೇಕು ಎನ್ನುವ ಆಕ್ಷೇಪಾರ್ಹ ಮಾತುಗಳು ಬಿಜಾಪೂರು ಭಾಗದ ಪ್ರಾದೇಶಿಕತೆ ಎಂದು ಇಡೀ ದೇಶದಲ್ಲಿ ಬಿಜಾಪೂರು ಜನಗಳ ಮಾನ ಹರಾಜು ಹಾಕಿದ ಭೂಪ ನೀನು. ಮಾತಿನ ಡೈಲಾಗಗಳನ್ನು ಹೇಳಿ ಧರ್ಮ ಧರ್ಮಗಳಲ್ಲಿ ದ್ವೇಷವನ್ನು ಬಿತ್ತುತ್ತಿರುವ ನಿನಗೆ ಸುಪ್ರೀಮ್ ಕೋರ್ಟ್ ಛೀ ಮಾರಿ ಹಾಕಿದ್ದರೂ ನಿನ್ನ ವರಸೆ ಬಿಡುತ್ತಿಲ್ಲವೆಂದರೆ ನೀನು ಮಾನಸಿಕ ಹುಚ್ಚನೆ ಸರಿ. ನಿಮ್ಮ ಈ ನಡೆಯನ್ನು ಒಪ್ಪಿಕೊಳ್ಳುವ ರಾಜಕಾರಣಿಗಳು, ಮಠಾಧೀಶರು ಅಪ್ರಬುದ್ಧರೆ ಸರಿ.
ಮತ್ತೊಮ್ಮೆ ನಿಮ್ಮ ಎಲ್ಲಾ ಸವಾಲುಗಳನ್ನು ಸ್ವೀಕರಿಸುತ್ತೇವೆ ಮತ್ತು ನೀವು ಕರೆದಲ್ಲಿ ನಿಮಗೆ ನಮ್ಮ ಧರ್ಮವನ್ನು ಅರ್ಥೈಸಲು ಸಿದ್ಧರಿದ್ದೇವೆ. ನಾವೆಂದೂ ಸನಾತಿನಿಗಳಲ್ಲಿ ಬಸವ ಧರ್ಮಿಯರು, ಲಿಂಗವಂತ ಧರ್ಮಿಯರು. ಬಸವ ಧರ್ಮಕ್ಕೆ ಧಕ್ಕೆ ಬಂದಾಗ ನಮ್ಮತನವನ್ನು ಮೆರೆದು ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹಗಲಿರುಳು ಹೋರಾಡುತ್ತೇವೆ. ನಾವು ಸುಮ್ಮನೇ ಕೂಡುವವರಲ್ಲ, ನಿಮ್ಮನ್ನೂ ಸುಮ್ಮನೇ ಕೂಡಲು ಬಿಡುವುದಿಲ್ಲ. ಮೂರು ಪರ್ಸೆಂಟ್ ಇರುವ ಸನಾತನಿಗಳಿಂದ ಆಳಿಸಿಕೊಳ್ಳುವವರಲ್ಲ, ಮುಕ್ಕೋಟಿ ಜನರನ್ನು ಸದ್ಧರ್ಮದಿಂದ ಮುನ್ನೆಡಿಸುವ ಸ್ವತಂತ್ರ ಧೀರ ಲಿಂಗಾಯತ ಧರ್ಮಿಯರು ನಾವು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಿಕೆಲ್ ಸೆಲ್ ಅನೀಮಿಯ ಜಾಗೃತಿ ನಿರ್ಮೂಲನಾ ಕಾರ್ಯಕ್ರಮ

ಸಚ್ಚಾರಿತ್ರ್ಯದ ಸನ್ಮಾರ್ಗವೇ ಶಿಕ್ಷಣ :ಡಾ.ಯಂಕನಗೌಡ

ಗುರು ರಾಘವೇಂದ್ರ ಸೇವಾ ಸಮಿತಿಯಿಂದ ದಾಸೋಹ ಸೇವೆ

ಕ್ರಿಯಾಶೀಲ ಸಮೀತಿಯಿಂದ ವಿದ್ಯಾಲಯದ ಪ್ರಗತಿ ಸಾಧ್ಯ :ಬಟಕುರ್ಕಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಿಕೆಲ್ ಸೆಲ್ ಅನೀಮಿಯ ಜಾಗೃತಿ ನಿರ್ಮೂಲನಾ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಸಚ್ಚಾರಿತ್ರ್ಯದ ಸನ್ಮಾರ್ಗವೇ ಶಿಕ್ಷಣ :ಡಾ.ಯಂಕನಗೌಡ
    In (ರಾಜ್ಯ ) ಜಿಲ್ಲೆ
  • ಗುರು ರಾಘವೇಂದ್ರ ಸೇವಾ ಸಮಿತಿಯಿಂದ ದಾಸೋಹ ಸೇವೆ
    In (ರಾಜ್ಯ ) ಜಿಲ್ಲೆ
  • ಕ್ರಿಯಾಶೀಲ ಸಮೀತಿಯಿಂದ ವಿದ್ಯಾಲಯದ ಪ್ರಗತಿ ಸಾಧ್ಯ :ಬಟಕುರ್ಕಿ
    In (ರಾಜ್ಯ ) ಜಿಲ್ಲೆ
  • ಜ.29 ರಂದು ಬ್ರಹತ್ ಹಿಂದೂ ಸಮಾಜೋತ್ಸವ ಸಮಾವೇಶ
    In (ರಾಜ್ಯ ) ಜಿಲ್ಲೆ
  • ಭಾನುವಾರ ಅಮವಾಸ್ಯೆ: ದೇವಸ್ಥಾನಕ್ಕೆ ಹೆಚ್ಚಿದ ಭಕ್ತರು
    In (ರಾಜ್ಯ ) ಜಿಲ್ಲೆ
  • ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಿತಿ ರಚನೆ
    In (ರಾಜ್ಯ ) ಜಿಲ್ಲೆ
  • ಹಾಡುಹಗಲೇ ಬೀಗ ಮುರಿದು ಮನೆ ದೋಚಿದ ಖದೀಮರು
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಸಂಸ್ಕಾರಯುತ ಮನೋಭಾವ ಬೆಳೆಸಿ :ಶಹಾಪುರ
    In (ರಾಜ್ಯ ) ಜಿಲ್ಲೆ
  • ಬಸವ ತತ್ವದಂತೆ ಬದುಕು ನಡೆಸಿದ ಡಾ.ಭೀಮಣ್ಣ ಖಂಡ್ರೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.