ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಕ್ಕಳಲ್ಲಿನ ಕಲಿಕಾಭಿರುಚಿಯನ್ನು ದ್ವಿಗುಣಗೊಳಿಸುವಲ್ಲಿ ಕಲಿಕಾ ಹಬ್ಬವು ಬಹಳ ಸಹಕಾರಿ ಎಂದು ಹಿಟ್ಟಿನಹಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಎಸ್.ಬಡದಾಳ ಹೇಳಿದರು.
ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜರುಗಿದ ಎಫ್.ಎಲ್.ಎನ್.ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳು ಸೃಜನಾತ್ಮಕ ಚಿಂತನೆ ಹಾಗೂ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಕಲಿಯಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ತಾಲ್ಲೂಕು ಶಿಕ್ಷಕರ ಸಂಘದ ಕೋಶಾಧ್ಯಕ್ಷ ಎಸ್.ವಿ.ಕೋಟೀನ ಮಾತನಾಡಿ, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಎಸ್.ಡಿ.ಎಮ್.ಸಿ.ಅಧ್ಯಕ್ಷ ವಿಠ್ಠಲ.ದೇಗಿನಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾರದಾಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯತು.
ಮುಖ್ಯಶಿಕ್ಷಕ ಅಶೋಕ ತಳಕೇರಿ, ಕ್ಲಸ್ಟರಿನ ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಡಿ.ಸಿ. ಲಮಾಣಿ, ಮಹಾದೇವ ಹುಲ್ಲೂರ, ಶ್ರೀಶೈಲ ಕುದುರಿ, ಬಿ.ಬಿ.ಮಾದರ, ಅರ್ಜುನ ಕರ್ಜಗಿ, ಜಿ.ಬಿ.ಶಿವಣಗಿ, ಆಶಾ ರಾಠೋಡ, ದಯಾನಂದ ಪೊಲೇಶಿ, ರಮೇಶ ನಾಯಕ, ನಂದ್ಯಾಳ ಬಿ.ಬಿ. ಭರಮಣ್ಣ, ಸುನೀತಾ ಕೋರವಾರ, ಎಸ್.ಡಿ.ಬೇನೂರ, ಎಮ್.ಎಮ್.ಕಂಬಾರ, ಎ.ವಿ.ನಿಂಬರಗಿಮಠ, ಎಮ್.ಎಸ್.ಅವಟಿ, ಕೆ.ಬಿ.ಬಡಿಗೇರ, ವೆಂಕಣ್ಣ ಗಣಜಲಿ ಸೇರಿದಂತೆ ಕ್ಲಸ್ಟರಿನ ವಿವಿಧ ಶಾಲೆಗಳ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಇದ್ದರು.

