ಉದಯರಶ್ಮಿ ದಿನಪತ್ರಿಕೆ
ಇಂಡಿ: ಕುವೆಂಪು ಸಾಹಿತ್ಯವು ವಿಶ್ವಮಾನವ ಸಂದೇಶ ಪ್ರಕೃತಿ ಪ್ರೇಮ ವೈಚಾರಿಕತೆ ಸಾಮಾಜಿಕ ಸಮಾನತೆ ಶಿಕ್ಷಣದ ಮಹತ್ವ ಮತ್ತು ಮಾನವೀಯ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುತ್ತದೆ ಎಂದು ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ರಾಹೂರ ಹೇಳಿದರು.
ನಗರದ ಆಡಳಿತಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು ಜನ್ಮ ದಿನದಂದು ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ಮತ ಪಂಥಗಳ ಬೇದಬಾವಗಳನ್ನು ತಿರಸ್ಕರಿಸಿ ನವೋದಯ ಸಮಾನತೆ ಸಾರುವ ಮನುಷ್ಯಜಾತಿ ತಾನೊಂದು ವಲಂ ಎಂಬ ತತ್ವವನ್ನು ಎತ್ತಿಹಿಡಿದ ಕುವೆಂಪುರವರ ಸಾಹಿತ್ಯ ವು ಇಂದಿಗೂ ಪ್ರಸ್ತುತವಾಗಿದ್ದು ಯುವ ಪಿಳಿಗೆಗೆ ಮಾರ್ಗದರ್ಶನ ನೀಡುತ್ತಿದೆ ಎಂದರು.
ಸಂತೋಷ ಹೊಟಕರ ಮಾತನಾಡಿ, ಕುವೆಂಪು ಸಾಹಿತ್ಯ ಮಕ್ಕಳಿಗೆ ಜಾತಿ ಧರ್ಮದ ಕಟ್ಟು ಪಾಡುಗಳಿಲ್ಲದೆ ಮುಕ್ತ ಮನೋಭಾವ ಪ್ರಕೃತಿಯೊಂದಿಗೆ ಬೆರೆಯುವ ಸಹಜತೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಕಲಿಸುತ್ತದೆ. ಇದರಿಂದ ಮಕ್ಕಳು ಸ್ವತಂತ್ರ ಸಮತಾವಾದಿ ಪ್ರಜೆಗಳಾಗಿ ಬೆಳೆಯಲು ಸಾದ್ಯ ಎಂದರು.
ಆರ್.ಬಿ.ಮುಗಿ ಎಚ್.ಎಸ್ ಗುನ್ನಾಪುರ ಮಾತನಾಡಿದರು.
ಪ್ರಶಾಂತ ಕಾಳೆ, ಸಿ.ಸಿ ಕರಕಟ್ಟಿ ವೀಣಾ ಕೋಳುರಗಿ, ಭೂವನೇಶ್ವರಿ ಗುನ್ನಾಪುರ, ಸೌಜನ್ಯ ಚಾಂದಕವಟೆ, ಸೌಮ್ಯ ಪಾಟೀಲ , ಶಿವಾನಂದ ಹುಲಗೇರಿ ಮತ್ತಿತರಿದ್ದರು.

