ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜ ಸಂಘಟನೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಶೃದ್ಧೆಯಿಂದ ಕಾರ್ಯ ನಿರ್ವಹಿಸಿ ನಿಸ್ವಾರ್ಥದಿಂದ ಸಮಾಜ ಕಟ್ಟುವ ಕಾಯಕ ಮಾಡಬೇಕೆಂದು ಮಕ್ಕಳ ಸಾಹಿತಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹ ಮ ಪೂಜಾರಿ ಹೇಳಿದರು.
ನಗರದಲ್ಲಿ ಹಮ್ಮಿಕೊಂಡ ವಿಜಯಪುರ ಜಿಲ್ಲಾ ಹೂಗಾರ, ಪೂಜಾರಿ, ಜೀರ ಹಾಗೂ ಗುರವ ಸಮಾಜ ಸೇವಾ ಸಂಘಕ್ಕೆ ನೂತನ ಪದಾಧಿಕಾರಿಗಳ
ಸದಸ್ಯರಿಗೆ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ನಮ್ಮ ಮಕ್ಕಳ ಶಿಕ್ಷಣ ಪ್ರಗತಿ ಕುರಿತು ಚಿಂತನೆ ಇರಬೇಕು. ನಮ್ಮ ಸಮುದಾಯ ಬೆಳೆಸಬೇಕು ಇತರೆ ಸಮಾಜವನ್ನು ಗೌರವಿಸಬೇಕು. ನೂತನ ಪದಾಧಿಕಾರಿಗಲು ಕ್ರೀಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕೋರಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಜ್ಯ ಪದಾಧಿಕಾರಿಗಳಾದ ಅರವಿಂದ ಹೂಗಾರ, ನಮ್ಮ ಸಮಾಜದ ಶ್ರೇಯೋಭಿವೃದ್ಧಿಗೆ ನೂತನ ಸಮಿತಿ ಶ್ರಮವಹಿಸಲಿ. ಪ್ರತಿಯೊಂದು ಚಟುವಟಿಕೆಗಳಲ್ಲಿ ಮುಂದೆ ಬರಬೇಕೆಂದು ಶುಭ ಹರಿಸಿದರು.
ಇದೇ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನವಾಗಿ ಹೂಗಾರ ಸಮಾಜದ ಅಧ್ಯಕ್ಷರಾಗಿ ಎಮ್ ಆರ್ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಗಿರಿಮಲ್ಲಪ್ಪ ಎಸ್ ಪೂಜಾರಿ, ಸಂಗಪ್ಪ ರಾಯಪ್ಪ ಹೂಗಾರ ಮತ್ತು ಕಾರ್ಯದರ್ಶಿಯಾಗಿ ಅಶೋಕ ಹೂಗಾರ ಮತ್ತು ದತ್ತಾತ್ರಾಯ ಪೂಜಾರಿ ಕೋಶ್ಯಾಧ್ಯಕ್ಷರಾಗಿ ಅಶೋಕ ಈರಪ್ಪಾ ಹೂಗಾರ ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದರಾಮ ಎಚ್.ಹೂಗಾರ, ಚಿದಾನಂದ ಹೂಗಾರ, ಮಹೇಶ ಗುರವ, ಕಿರಣಕುಮಾರ ಹೂಗಾರ, ಪುಂಡಲೀಕ ಹೂಗಾರ ಮತ್ತು ಸದಸ್ಯರಾಗಿ ಬೀಮಪ್ಪಾ ಶಿ. ಹೂಗಾರ, ಅರವಿಂದ ಭೋ ಹೂಗಾರ, ಬಸವರಾಜ ಎಲ್ ಹೂಗಾರ, ರಾಜಶೇಖರ ಹ ಹೂಗಾರ, ಶಿವಪುತ್ರ ಜೀರ, ಕಾಂತು ಹೂಗಾರ ಆಯ್ಕೆಯಾಗಿದ್ದಾರೆ. ಸಮಾರಂಭದಲ್ಲಿ ಶಂಕರ ಹೂಗಾರ, ಹಣಮಂತ್ರಾಯ ಹೂಗಾರ ಹರವಾಳ, ಡಾ।। ಗುರುನಾಥ ಹೂಗಾರ ನಿವೃತ್ತ ಡಿ ಡಿ ಪಿ ಆಯ್ ರವರು ಭಾಗವಹಿಸಿದರು, ಸಾಧಕರಿಗೆ ಸನ್ಮಾನ ಶ್ರೀಮತಿ ಸುಜಾತಾ ಪೂಜಾರಿ, ಕುಮಾರಿ ಸೌಮ್ಯಾ ಅಂಬಣ್ಣ ಪೂಜಾರಿ ಮತ್ತು ಡಾ| ವಿನಯ ಹೂಗಾರ ತಹಶೀಲ್ದಾರರು ತಾಳಿಕೋಟಿ ಇವರಿಗೆ ಸನ್ಮಾನಿಸಲಾಯಿತು. ಹೂಗಾರ ಸಮಾಜದ ಎಲ್ಲ ಸದಸ್ಯರು ಪದಾಧಿಕಾರಿಗಳೂ ಭಾಗವಹಿಸಿದ್ದರು.

