ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕು ಕಾನೂನು ಸೇವಾ ಸಮಿತಿ ಇಂಡಿ, ಜಿಲ್ಲಾ ಕಾನೂನು ಸೇವಾ ಸಮಿತಿ ವಿಜಯಪುರ ಮತ್ತು ಕಾನೂನು ಪ್ರಾಧಿಕಾರ ಇಂಡಿ ಇವರ ಸಹಯೋಗದಲ್ಲಿ ತಾಲೂಕಿನ ನ್ಯಾಯಾಲಯದಲ್ಲಿ ಜ ೨ ರಿಂದ ಮಿಡಿಯೇಷನ್ ಫಾರ್ ನೇಶನ್ ದೇಶಕ್ಕಾ ಮಧ್ಯಸ್ಥಿಕೆ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ದಿವಾನಿ ನ್ಯಾಯಾಧೀಶ ಕೊಟಪ್ಪ ಕಾಂಬಳೆ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವ್ಯಾಜ್ಯ ಪೂರ್ವ ಬ್ಯಾಂಕು, ಟ್ರಾಫಿಕ್ ಪ್ರಕರಣ, ಕ್ರಿಮಿನಲ್ ಸಾರ್ವಜನಿಕ ಉಪಯುಲಕ್ತತಾ ಪ್ರಕರಣ, ಚೆಕ್ ಬೌನ್ಸ, ಕೌಟುಂಬಿಕ ವ್ಯಾಜ್ಯ, ವಿಭಾಗದ ದಾವೆ, ಸಿವಿಲ್ ಪ್ರಕರಣ, ಮೋಟಾರು ವಾಹನ ಅಪಘಾತ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುದು ಎಂದರು.
ನ್ಯಾಯಾಲಯದಲ್ಲಿ ಜಾರಿ ಇರುವ ಪ್ರಕರಣ ರಾಜಿ ಆಗಬಹುದಾದ ಪ್ರಕರಣ ಆಯ್ಕೆ ಮಾಡಿ ಇಬ್ಬರಿಗೂ ಸಂಧಾನ ಪ್ರಕ್ರಿಯೆ ನಡೆಸಿ ಉಭಯ ಪಕ್ಷಗಳ ಅಹವಾಲು ಕೇಳಿ ಪಕ್ಷಿದಾರರಿಗೆ ಆಗುವ ಹಣಕಾಸಿನ ಹೊರೆ ತಪ್ಪಿಸಲು ಇಂಡಿಯಲ್ಲಿಯೇ ಕೋರ್ಟಿನ ಆವರಣದಲ್ಲಿ ಇರುವ ಮಧ್ಯಸ್ಥಿಕ ಕೇಂದ್ರಕ್ಕೆ ಕಳುಹಿಸಿ ಅವರ ಮೂಲಕ ಬಗೆ ಹರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಯಾವದೇ ರೀತಿಯ ತೊಂದರೆ ಬರುವದಿಲ್ಲ ಎಂದರು.
ಮಧ್ಯಸ್ಥಿಕೆ ಕೋರ್ಟು ಸುಮಾರು ೯೦ ದಿನಗಳ ಕಾಲ ನಡೆಯುತ್ತಿದ್ದು ಅಲ್ಲಿ ನಿಮ್ಮ ವ್ಯಾಜ್ಯ ಬಗೆಹರಿಸಿಕೊಳ್ಳಬಹುದು ಎಂದು ಕಾಂಬಳೆ ತಿಳಿಸಿದರು.
ದಿವಾನಿ ನ್ಯಾಯಾಧೀಶ ಸುನೀಲಕುಮಾರ ಇದ್ದರು.

