ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಕರೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದೇಶದ ಅಭಿವೃದ್ಧಿ ಕುರಿತು ಪ್ರಧಾನಿ ಮೋದಿ ಅವರು ವ್ಯಕ್ತಪಡಿಸುವ ವಿಷಯ ಹಾಗೂ ವಿಚಾರಗಳನ್ನು ಕಾರ್ಯಕರ್ತರು ಜನಸಾಮಾನ್ಯರಿಗೆ ತಿಳಿಸಲು ಮುಂದಾಗಬೇಕು ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
ಪಟ್ಟಣದಲ್ಲಿ ಶನಿವಾರ ಬಿಜೆಪಿ ಮಂಡಲದಿಂದ ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ ೧೨೯ನೇ ಸಂಚಿಕೆಯ ಅಂಗವಾಗಿ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಧಾನಿ ಮೋದಿಯವರ ಈ ಕಾರ್ಯಕ್ರಮ ಸರ್ಕಾರದ ನೀತಿಗಳು, ಸಾಮಾಜಿಕ ವಿಷಯಗಳು ಮತ್ತು ಪ್ರೇರಣಾದಾಯಕ ಕಥೆಗಳನ್ನು ಹಂಚಿಕೊಳ್ಳುತ್ತದೆ. ಇದರಲ್ಲಿನ ವಿಷಯಗಳು ಕಾರ್ಯಕರ್ತರಿಗೆ ಸಹಕಾರಿಯಾಗಬಲ್ಲವು ಎಂದರು.
ಜೊತೆಗೆ ಮುಂದೆ ಬರಬಹುದಾದ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸಹಿತ ರಾಜ್ಯದ ವಿವಿಧ ಚುನಾವಣೆ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಕಾರ್ಯಕರ್ತರಾದ ಶರಣು ದಳವಾಯಿ, ಗುರುನಾಥ ಮುರುಡಿ, ಭೀಮನಗೌಡ ಲಚ್ಯಾಣ, ಸುಧಾಕರ ಅಡಕಿ, ಪ್ರಕಾಶ ದೊಡಮನಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಸಿ ನೆಟ್ಟು ನೀರುಣಿಸಲಾಯಿತು ಹಾಗೂ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಮಂಡಲ ಮಾಜಿಅಧ್ಯಕ್ಷ ಚಿದಾನಂದ ಹಚ್ಯಾಳ, ರಾವುತಪ್ಪ ಮೂಲಿಮನಿ, ಶ್ರೀಮಂತ ತಳವಾರ, ಸಂಗನಗೌಡ ಪಾಟೀಲ(ಸಾಸನೂರ), ಸೋಮಶೇಖರ ಹಿರೇಮಠ, ಮಹಾಂತೇಶ ಬಿರಾದಾರ, ಹುಸೇನ್ ಗೌಂಡಿ, ದಾವೂದ್ ಇನಾಮದಾರ, ಕಲ್ಮೇಶ ಬುದ್ನಿ, ಸಿದ್ರಾಮಯ್ಯ ಮಠ, ಮಂಜುನಾಥ ಬಡಿಗೇರ, ಸೋಮು ದೇವೂರ, ನಿಂಗನಗೌಡ ಬಿರಾದಾರ, ವಿನೋದ ಚವ್ಹಾಣ, ಮಲ್ಲನಗೌಡ ನಾಡಗೌಡ, ಭೀಮಸಿಂಗ ರಾಠೋಡ, ಕಿರಣ ನಾಯಿಕ ಇದ್ದರು.

