ಉದಯರಶ್ಮಿ ದಿನಪತ್ರಿಕೆ
ಚಡಚಣ: ಗ್ರಾಮಗಳಲ್ಲಿ, ಬಸ್‌ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ದಾರಿಹೋಕರಲ್ಲಿ ಕಳ್ಳತನ ಸೇರಿದಂತೆ ವಿವಿಧ ಅಪರಾಧಗಳು ನಡೆಯುತ್ತಿರುವುದನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಅಪರಾಧ ವಿಭಾಗದ ಪಿಎಸ್‌ಐ ನಡಿವಿನಕೇರಿ ಅವರು ಅಪರಾಧ ತಡೆ ಮಾಸಾಚರಣೆ ಸಂದರ್ಭದಲ್ಲಿ ಹೇಳಿದರು.
ಝಳಕಿ ಗ್ರಾಮದಲ್ಲಿ ಶನಿವಾರ ಬಸ್ ನಿಲ್ದಾಣ, ಚಡಚಣ ರಸ್ತೆ, ಇಂಡಿ ರಸ್ತೆ ಸೇರಿದಂತೆ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧ ತಡೆ ಮಾಸಾಚರಣೆ ಹಮ್ಮಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಯಾವುದೇ ಸಮಯದಲ್ಲಿ ಅಪರಾಧ ಅಥವಾ ಅನಾಹುತ ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಅಥವಾ ತಕ್ಷಣವೇ 112 ಗೆ ಕರೆ ಮಾಡಬೇಕು. ಸುತ್ತಮುತ್ತ ನಡೆಯುವ ಅಪರಾಧಗಳಿಗೆ ಕಡಿವಾಣ ಹಾಕಲು ಜನರ ಸಹಕಾರ ಅಗತ್ಯವಾಗಿದೆ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಹುಲ ಗಿರಾಣಿವಡ್ಡರ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಲ್ಲದೇ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷ ಪ್ರಕಾಶಗೌಡ ಬಿರಾದಾರ, ಚಂದುಗೌಡ ಪಾಟೀಲ, ಉಮೇಶ್ ತಳವಾರ, ಮಂಜುನಾಥ ಕಾಪಸೆ, ಭೀರಪ್ಪ ತಳವಾರ, ರಾಜು ಬಿಲ್ಕಾರ, ಲಕ್ಷ್ಮಣ ಬಂಗಾರತಳ, ಹರೀಶ ಶೆಟ್ಟಿ, ಸಂಜು ಕಾಸರ, ವಿಠ್ಠಲ ಕಾಗರ, ದರ್ಶನ ಬಂಗಾರತಳ ಸೇರಿದಂತೆ ಹಲವರು ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೆ ಕಾರಣರಾದರು.

