ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ನಾದ ಗ್ರಾಮದ ಜಮಖಂಡಿ ಸಕ್ಕರೆ ಕಾರ್ಖಾನೆ ಘಟಕ ೨ ಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿಯವರ ನೇತೃತ್ವದಲ್ಲಿ ಕಬ್ಬು ಪರಿಶೀಲನಾ ಸಮಿತಿ ಭೇಟಿ ನೀಡಿತು.
ಕಬ್ಬಿನ ತೂಕದ ಕುರಿತು ಪರಿಶೀಲನೆ ಮಾಡಿದರು. ಕಾರ್ಖಾನೆಯಲ್ಲಿ ಕಬ್ಬಿನ ತೂಕದ ಮಸೀನು, ಮತ್ತು ಇಳುವರಿ ಪರಿಸೀಲಿದರು.
ಕಾರ್ಖಾನೆ ಸಿಬ್ಬಂದಿಗೆ ರೈತರಿಗೆ ತೂಕದಲ್ಲಿ ಯಾವದೇ ರೀತಿಯ ವ್ಯತ್ಯಾಸ ಆಗದಂತೆ ತಿಳಿಸಿದರು. ಎಷ್ಟು ಕಬ್ಬು ನುರಿಸಿದ್ದಾರೆ. ಎಷ್ಟು ಕಬ್ಬಿಗೆ ಹಣ ನೀಡಿದ್ದಾರೆ ಎಂಬ ಕುರಿತು ಪರಿಶಿಲನೆ ಮಾಡಿದರು.
ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಪೋಲಿಸ ಇಲಾಖೆ ಪಿ.ಎಸ್.ಐ ರಾಜು ಮಮದಾಪುರ, ಅಬಕಾರಿ ನಿರೀಕ್ಷಕರು ರಾಹುಲ ನಾಯಕ, ಅಹಾರ ನಿರಿಕ್ಷಕರು ಪರಮಾನಂದ ಹೂಗಾರ, ರೈತ ಮುಖಂಡ ಸಿದ್ದು ತಳವಾರ, ವಿಠ್ಠಲ ಬಿರಾದಾರ, ಪಾಲ್ಗೊಂಡಿದ್ದರು.

