ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕರು ಹಂಸಲೇಖ ಅವರ ವಿಧ್ಯಾರ್ಥಿಯಾಗಿರುವ ಹಿನ್ನಲೆಯಲ್ಲಿ ಅವರ ಹಾದಿಯಲ್ಲಿ ಶಾಲೆ-ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ನಾಡಪ್ರೇಮ ಬಿಂಬಿಸುವ ನಾಡಗೀತೆಯನ್ನು ಹೇಗೆ ಹಾಡಬೇಕು ಎಂಬ ತರಬೇತಿ ನೀಡುವ ಕಾರ್ಯಕ್ಕೆ ಡಾ.ಪ್ರಕಾಶ ಅವರು ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಅನುಮತಿ ಪತ್ರ ಪಡೆದುಕೊಂಡು ತಮ್ಮ ಸ್ವಂತ ಖರ್ಚಿನಿಂದ ದಿನಕ್ಕೆ ೨-೩ ಶಾಲೆಗಳಿಗೆ ಹೋಗಿ ನಾಡಗೀತೆಯ ತರಬೇತಿ ನೀಡುತ್ತಿದ್ದಾರೆ ಎಂದು ಸಂಸ್ಥೆಯ ಮುಖ್ಯ ಸಂಚಾಲಕಿ ಕಾಂಚನಾ ನಾಗರಬೆಟ್ಟ ಹೇಳಿದರು.
ಸಿಂದಗಿ ಪಟ್ಟಣದ ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಜರುಗಿದ ನಾಡಗೀತೆ ಹಾಡುವ ತರಬೇತಿಗೆ ಚಾಲನೆ ನೀಡಿ ಮಾತನಾಡಿ ಅವರು, ನಾಡಗೀತೆಗೆ ನೂರರ ಸಂಭ್ರಮದ ಪ್ರಯುಕ್ತ ಸಿಂದಗಿ, ಆಲಮೇಲ, ದೇವರಹಿಪ್ಪರಗಿ ಮೂರು ತಾಲೂಕುಗಳು ಸೇರಿ ೬೪೦ ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ನಾಡಗೀತೆಯನ್ನು ಸುಶ್ರಾವ್ಯವಾಗಿ, ರಾಗಬದ್ಧವಾಗಿ ಹಾಗೂ ನಿಗದಿತ ಸಮಯಕ್ಕೆ ಪೂರ್ಣಗೊಳ್ಳುವ ತರಬೇತಿಯನ್ನು ನೀಡಲು ಯಾವುದೇ ಫಲಾಪೇಕ್ಷವಿಲ್ಲದೇ ಪಟ್ಟಣದ ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಡಾ.ಪ್ರಕಾಶ ಮೂಡಲಗಿ ಅವರು ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಪಟ್ಟಣದ ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಹಾಗೂ ಹಂಸಲೇಖ ಅವರ ವಿದ್ಯಾರ್ಥಿಯಾಗಿರುವ ಡಾ.ಪ್ರಕಾಶ ಮೂಡಲಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಮುಖ್ಯಗುರು ರಾಜು ಕಾಂಬಳೆ, ಕಾವ್ಯ ನಾಗರಬೆಟ್ಟ, ಸುಮಾ ವಸ್ತçದ, ಪ್ರಶಾಂತ ಬಂಕಲಗಿ, ಭಾಗ್ಯಶ್ರೀ ಪತ್ತಾರ, ಕಾವ್ಯ ಹಿರೇಮಠ, ಉಮಾ ಕೂಚಬಾಳ, ಹೀನಾ ಮುಲ್ಲಾ, ಶರಣಮ್ಮ ಬಿರಾದಾರ, ನಿಷಾ ಮುಲ್ಲಾ ಸೇರಿದಂತೆ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

