ಉಚ್ಚ ನ್ಯಾಯಾಲಯದ ನಿರ್ಣಯ ಸ್ವಾಗತಿಸಿದ ವಕೀಲರ ಸಂಘದ ತಾಲೂಕಾಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕು ಶಿಕ್ಷಣ ಕಾಶಿ ಎಂದೇ ಹೆಸರಾಗಿದೆ. ಮತ್ತು ಅನೇಕ ರಂಗಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಯೂ ಹೊಂದಿದೆ. ಇದೆಲ್ಲವನ್ನು ಪರಿಗಣಿಸಿದ ಉಚ್ಚ ನ್ಯಾಯಾಲಯವು ಸಿಂದಗಿ ತಾಲೂಕಿಗೆ ೬ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಅನುಮೋದನೆ ನೀಡಿದೆ ಎಂದು ವಕೀಲರ ಸಂಘದ ತಾಲೂಕಾಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ತಿಳಸಿದ್ದಾರೆ.
ಈ ಕುರಿತಾ ಪತ್ರಿಕಾ ಹೇಳಿಕೆ ನೀಡಿದ ಅವರು, ನಮ್ಮ ಮನವಿಯನ್ನು ಪರಿಗಣಿಸಿ ಸಿಂದಗಿ ತಾಲೂಕಿಗೆ ೬ನೇ ಜಿಲ್ಲಾ ನ್ಯಾಯಾಲಯದ ಅನುಮೋದನೆ ನೀಡಿದ ಹಾಗೂ ಸಹಕರಿಸಿದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವೈಬು ಬಕ್ರು, ಕಲಬುರಗಿ ಪೀಠ, ವಿಜಯಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಸಚೀನ ಎಸ್. ಮಗದೂಮ, ಈ ಹಿಂದಿನ ಆಡಳಿತಾತ್ಮಕ ನ್ಯಾಯವಾದಿ ಎಂ.ವ್ಹಾಯ್.ಅರುಣ, ವಿಜಯಪುರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಹರೀಶ್.ಎ, ಸಿಂದಗಿ ಹಿರಿಯ ಹೆಚ್ಚುವರಿ ನ್ಯಾಯಾಧೀಶ ನಾಗೇಶ ಮೋಗೆರ, ಕಾನೂನು ಸಚಿವ ಎಚ್.ಕೆ.ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ಸಿಂದಗಿ ಪ್ರಧಾನ ಹಿರಿಯಶ್ರೇಣಿ, ಸಿಂದಗಿ ನ್ಯಾಯಾಲಯ ಶಿರಸ್ತೇದಾರರಿಗೂ, ವಿಜಯಪುರ ನ್ಯಾಯಾಲಯದ ಸಿಬ್ಬಂದಿಗಳಿಗೂ ಸಿಂದಗಿ, ಆಲಮೇಲ ಮತ್ತು ದೇವರಹಿಪ್ಪರಗಿ ವಕೀಲರ ಸಂಘ ಹಾಗೂ ವಕೀಲರ ವತಿಯಿಂದ ಸಮಸ್ತ ತಾಲೂಕಿನ ಜನತೆಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

