ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಚಟುವಟಿಕೆಗಳ ಮೂಲಕ ಸಂತಸದಾಯಕವಾಗಿ ಮಕ್ಕಳು ಕಲಿಯಲು ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಎಂ. ಗಳತಗಿ ಹೇಳಿದರು
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ವಾಲಿಕಾರ ವಸ್ತಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ, ಸಮೂಹ ಸಂಪನ್ಮೂಲ ಕೇಂದ್ರ ವತಿಯಿಂದ ಗುರುವಾರ ನಡೆದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸೃಜನಾತ್ಮಕತೆ ಮತ್ತು ವಿಮರ್ಶನಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ಕುಂಠಿತಗೊಂಡ ಕಲಿಕೆಯನ್ನು ಮರುಸ್ಥಾಪಿಸಲು ಸಮುದಾಯದಡಿಯಲ್ಲಿ ಕಲಿಕಾ ಹಬ್ಬ ಮಕ್ಕಳಿಗೆ ಸಹಕಾರಿಯಾಗಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ಬಸನಿಂಗ ನಿಡೋಣಿ, ಬಸವರಾಜ ಅತ್ತಾಲಟ್ಟಿ ಮಾತನಾಡಿದರು. ಗ್ರಾಮಸ್ಥರು ಮಕ್ಕಳು ಮಾಡಿದ ಸಂತಸದಾಯಕ ಚಟುವಟಿಕೆಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಕ್ಕಪ್ಪಾ ವಾಲಿಕಾರ, ಮುಖಂಡ ಸುರೇಶ ಪವಾರ, ಸಿದ್ದಪ್ಪ ಮುಚ್ಚಂಡಿ, ಮುಖ್ಯೋಪಾಧ್ಯಾಯನಿ ಗೀತಾ ದೊಡಮನಿ, ಶಂಕರ ಮಠ, ಶೇಖಸಾಬ ಮುಲ್ಲಾ, ಹಣಮಂತ ದಂಡಿನ, ದೇವಪ್ಪಾ ವಾಲಿಕಾರ, ಶ್ರೀಶೈಲ ವಾಲಿಕಾರ, ಸಚಿನ ಗದ್ಯಾಳ, ಪೈಗಂಬರ್ ಜತ್ತಿ, ರಮೇಶ ದೊಡಮನಿ, ಕುಮಾರ ಮಾಳಿ, ಶಂಕ್ರಪ್ಪ ವಾಲಿಕಾರ, ಕಾಶಿನಾಥ ವಾಲಿಕಾರ, ಸಾಬು ದಂಡಿನ, ರೇವಣಸಿದ್ದ ಕೋಟಿಮನಿ, ಮಲ್ಲಿಕಾರ್ಜುನ ಸನಾಳ, ಬಸವರಾಜ ಸೊರಡಿ, ಸುಭಾಸ ವಾಲಿಕಾರ, ಸಾಬು ಗಗನಮಾಲಿ, ಶಂಕರ ಖಂಡೇಕರ, ಗೋಪಾಲ ಹರಿಜನ, ಸಿ.ವೈ.ಲಂಗೋಟಿ, ಎಸ್.ಬಿ.ಸಾವಳಗಿ, ಸಂತೋಷ ಕುಲಕರ್ಣಿ, ಎಲ್ಲ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರು ಇದ್ದರು.

