ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್ ಪೂರ್ವಭಾವಿಯಾಗಿ ಡಿಸೆಂಬರ್ 5 ರಂದು ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮರಗಳಿಗಾಗಿ ವೃಕ್ಷ ಕಿಡ್ಸ್ ರನ್, ವಾಕ್ ಮತ್ತು ಶ್ರವಣದೋಷ ಮಕ್ಕಳಿಗೆ ಸ್ಪರ್ಧೆ ಹಾಗೂ ಮಾಧ್ಯಮ ಮಿತ್ರರಿಗಾಗಿ ಹ್ಯಾಪಿ ರನ್ ಜರುಗಲಿದೆ.
ಬೆ. 8 ಗಂಟೆಗೆ ಮರಗಳಿಗಾಗಿ ಮಕ್ಕಳ ಓಟ, ವೃಕ್ಷ ಕಿಡ್ಸ್ ರನ್ ನಡೆಯಲಿದ್ದು, ನರ್ಸರಿ, ಎಲ್.ಕೆ.ಜಿ, ಯುಕೆಜಿ ಮತ್ತು ಒಂದನೇ ತರಗತಿ ಮಕ್ಕಳಿಗೆ 50 ಮೀ. ಓಟ ನಡೆಯಲಿದೆ. ಇದರಲ್ಲಿ ಪ್ರಥಮ ರೂ. 2500, ದ್ವಿತೀಯ ರೂ. 1500, ತೃತೀಯ ರೂ. 1000 ಮತ್ತು ಸಮಾಧಾನ ಬಹುಮಾನ ಇಬ್ಬರಿಗೆ ತಲಾ ರೂ. 500 ನೀಡಲಾಗುವುದು.
ಬೆ. 9 ಗಂಟೆಗೆ 2 ಮತ್ತು 3ನೇ ತರಗತಿ ಮಕ್ಕಳಿಗಾಗಿ 200 ಮೀ. ಓಟ ಆಯೋಜಿಸಲಾಗಿದ್ದು, ಈ ವಿಭಾಗದಲ್ಲಿ ಪ್ರಥಮ ರೂ. 5000, ದ್ವಿತೀಯ, ರೂ. 3000, ತೃತೀಯ ರೂ. 2000 ಹಾಗೂ ಎರಡು ಸಮಾಧಾನ ಬಹುಮಾನ ತಲಾ ರೂ.1000 ನೀಡಲಾಗುತ್ತಿದೆ.
ಬೆ.10 ಗಂಟೆಗೆ 4 ಮತ್ತು 5ನೇ ತರಗತಿ ಮಕ್ಕಳಿಗಾಗಿ 400 ಮೀ. ಓಟ, ಪ್ರಥಮ ರೂ.10000, ದ್ವಿತೀಯ ರೂ.7500, ತೃತೀಯ ರೂ.5000 ಹಾಗೂ ಇಬ್ಬರಿಗೆ ಸಮಾಧಾನ ಬಹುಮಾನ ರೂ. 2500 ನೀಡಲಾಗುವುದು.
ಬೆ.10.30 ಗಂಟೆಗೆ ವಾಕ್ ಮತ್ತು ಶ್ರವಣದೋಷ ಹೊಂದಿರುವ 6 ರಿಂದ 10 ನೇ ತರಗತಿ ಬಾಲಕ ಹಾಗೂ ಬಾಲಕಿಯರ ಎರಡು ವಿಭಾಗಗಳಲ್ಲಿ 800 ಮೀ. ಸ್ಪರ್ಧೆ ನಡೆಯಲಿದೆ. ಪ್ರಥಮ ರೂ.10000, ದ್ವಿತೀಯ ರೂ.5000, ತೃತೀಯ ರೂ.2500 ಹಾಗೂ ಸಮಾಧಾನಕರ ರೂ.1000 ಎರಡು ಬಹುಮಾನಗಳು ನೀಡಲಾಗುವುದು.
ಎಲ್ಲ ಸ್ಪರ್ಧಾಳುಗಳು ಶಾಲಾ ಸಮವಸ್ತ್ರ ಧರಿಸಿ, ಶಾಲಾ ಗುರುತಿನ ಚೀಟಿ ಹಾಗೂ ಆಧಾರ ನಕಲು ಪ್ರತಿಯೊಂದಿಗೆ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಂಡು ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು.
ನಂತರ ಬೆ. 11 ಗಂಟೆಗೆ ಮಾಧ್ಯಮ ಮಿತ್ರರಿಗಾಗಿ 800ಮೀ. ಹ್ಯಾಪಿ ರನ್ ಕೂಡ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಎಂ. ಪಿ. ಕುಪ್ಪಿ – 9379051886 ಅವರನ್ನು ಸಂಪರ್ಕಿಸಬಹುದು.

