ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಕಲ ಜೀವರಾಶಿಗಳಲ್ಲಿ ಮಾನವನ ಜೀವನ ಅತ್ಶಂತ ಶ್ರೇಷ್ಠವಾಗಿದ್ದು, ಅದನ್ನು ಅರಿಯದೆ ಅನೇಕರು ತಮ್ಮ ಅಮೂಲ್ಶ ಬದುಕನ್ನು ಗೊತ್ತು ಗುರಿಯಿಲ್ಲದೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಶ್ರೇಷ್ಠ ಜೀವನ ಸಾರ್ಥಕಗೊಳ್ಳಲು ಅಂತರಂಗದ ಆಧ್ಶಾತ್ಮದ ಅರಿವು ಅಗತ್ಶವಾಗಿದೆ ಎಂದು ಯಡ್ರಾಮಿ ತಾಲೂಕಿನ ಸುಕ್ಷೇತ್ರ ಮಾಗಣಗೇರಿ ಬೃಹನ್ಮಠದ ಡಾ.ವಿಶ್ವರಾಧ್ಶ ಶಿವಾಚಾರ್ಯರು ಹೇಳಿದರು.
ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಗುರು ವೀರಘಂಟೈ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಆರೂಢ ಕೈಲಾಸ ಸಿದ್ಧಾರೂಢರ ಮಹಾ ಪುರಾಣದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಧಿವ್ಯ ಸಾನ್ನಿಧ್ಶ ವಹಿಸಿ ಮಾತನಾಡಿದ ಅವರು, ಮಠ, ಮಂದಿರಗಳು ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬರೂ ಜೀವನದಲ್ಲಿ ಭೌತಿಕಕ್ಕಿಂತ ಆಧ್ಶಾತ್ಮದ ಸಂಪತ್ತು ಹೆಚ್ಚಿಸಿಕೊಳ್ಳಬೇಕು. ಧರ್ಮ ಮಾರ್ಗದಲ್ಲಿ ಬದುಕು ಸಾಗಿಸಿದರೆ ಸುಖ ಶಾಂತಿ ದೊರೆಯಲಿದೆ ಎಂದರು.
ಈ ವೇಳೆ ಶ್ರೀಮಠದ ಒಡೆಯ ಗುರುಲಿಂಗಯ್ಶ ಗದ್ದಗಿಮಠ ಸ್ವಾಮೀಜಿ, ಗುರುಪಾದಯ್ಶ ಹಿರೇಮಠ ನೇತೃತ್ವ ವಹಿಸಿದ್ದರು. ಶರಣ ಸೋಮನಾಳದ ಕುಮಾರಶ್ರೀ ಪ್ರಶಸ್ತಿ ಪುರಸ್ಕೃತ ಮಹಾದೇವಯ್ಯ ಶಾಸ್ತ್ರೀಜಿ ಹಿರೇಮಠ ಪ್ರವಚನ ನೀಡಿದರು. ಅಯ್ಯಪ್ಪಯ್ಯ ಗದ್ದಗಿಮಠ, ಚನ್ನಾರಡ್ಡಿ ಮಾಲಿಪಾಟೀಲ, ಮಲ್ಲಿಕಾರ್ಜುನ ಮನಗೂಳಿ, ಮಲ್ಲೇಶಪ್ಪ ಅಮರಗೋಳ, ರೇವಣಸಿದ್ದಪ್ಪ ಕೋರವಾರ, ಎಸ್.ವೈ.ಅಮರಗೋಳ, ದೇವಿಂದ್ರಪ್ಪ ತೊನಶ್ಯಾಳ, ನಡಗೇರಪ್ಪ ತಳವಾರ, ಗುರುಸಿದ್ದಪ್ಪ ಮನಗೂಳಿ, ಕೆ.ಬಿ.ಮನಗೂಲಿ ಇದ್ದರು.
ಈ ವೇಳೆ ಪತ್ರಕರ್ತ ಮಲ್ಲು ಕೆಂಭಾವಿ ಅವರನ್ನು ಮಾಗಣಗೇರಿಯ ಡಾ.ವಿಶ್ವರಾಧ್ಶ ಶಿವಾಚಾರ್ಯರು ಆಶೀರ್ವದಿಸಿದರು. ಯಲಗೋಡದ ಅಶೋಕ ಹಿರೇಮಠ ಸಂಗೀತ ಸೇವೆಗೆ ನರಸಲಗಿಯ ಬಸವರಾಜ ಹೂಗಾರ ತಬಲಾ ಸಾಥ್ ನೀಡಿದರು. ಮಹಾ ಪುರಾಣದ ತೊಟ್ಟಿಲೋತ್ಸವದಲ್ಲಿ ಗ್ರಾಮಸ್ಥರು, ಶ್ರೀಮಠದ ಭಕ್ತರು ಇದ್ದರು.

