ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ಸದ್ಭಾವನಾ ಪಾದಯಾತ್ರೆ ಹಾಗೂ ಒಂದು ದಿನದ ಪ್ರವಚನ ಕಾರ್ಯಕ್ರಮ ನ. ೨೬ಬುಧವಾರದಂದು ಜರುಗಲಿದೆ ಎಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ.
ಸದ್ಭಾವನಾ ಪಾದಯಾತ್ರೆಯು ಬೆಳಿಗ್ಗೆ ೬ ಘಂಟೆಗೆ ಗ್ರಾಮದ ದುರ್ಗಾದೇವಿ ದೇವಸ್ಥಾನದಿಂದ ನೇತಾಜಿ ವೃತ್ತದ ಮಾರ್ಗವಾಗಿ ಭಜಂತ್ರಿ ಓಣಿ, ಕರಿಸಿದ್ದೇಶ್ವರ ದೇವಸ್ಥಾನ, ಯಲ್ಲಮ್ಮನ ಗುಡಿ, ಅಲ್ಲಿಂದ ಕನಕದಾಸ ವೃತ್ತದಿಂದ ಚನ್ನಮ್ಮ ವೃತ್ತ, ವಿರಕ್ತಮಠ, ದಾಸಿಮಯ್ಯ ವೃತ್ತದ ಮಾರ್ಗದಿಂದ ಬಸ್ ನಿಲ್ದಾನದ ವರೆಗೆ ಮಾದಯಾತ್ರೆ ಜರುಗಲಿದೆ ಅಲ್ಲಿಂದ ಸ್ಥಳಿಯ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಬೆಳಿಗ್ಗೆ ೭ ಘಂ.ಗೆ ಗವಿಸಿದ್ದೇಶ್ವರ ಶ್ರೀಗಳಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ, ಗ್ರಾಮಸ್ಥರು ಅಂದು ಬೆಳಿಗ್ಗೆ ಬೇಗನೆ ಕಸಗುಡಿಸಿ ಮನೆ ಹಾಗೂ ಬೀದಿಗಳಲ್ಲಿ ರಂಗೋಲಿಯನ್ನಿಟ್ಟು ಗ್ರಾಮವನ್ನು ವಿಶೇಷವಾಗಿ ಸಿಂಗರಿಸಿ ಶ್ರೀಗಳನ್ನು ಸ್ವಾಗತಿಸಬೇಕು ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನ ಕೇಳಿ ಪುನೀತರಾಗಬೇಕೆಂದು ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನ ಸೇವಾ ಸಮೀತಿಯ ಪ್ರಮುಖರು ತಿಳಿಸಿದ್ದಾರೆ.

