ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಸರ್ವಧರ್ಮದ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ಅಭಿವೃದ್ದಿ ಪಥದತ್ತ ಸಾಗಿಸುತ್ತ ಉತ್ತಮ ಆಡಳಿತದೊಂದಿಗೆ ಹೆಜ್ಜೆ ಹಾಕುತ್ತಿರುವ ಕಾಂಗ್ರೇಸ್ ಪಕ್ಷದ ಸಾಧನೆ ಗುರುತಿಸಿ ಬಂಜಾರಾ ಸಮುದಾಯದ ಹಿರಿಯರು ಯುವಕರು ಬಿಜೆಪಿ ತೊರೆದು ನಮ್ಮ ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು,
ಗ್ರಾಮದಲ್ಲಿ ಹಮ್ಮಿಕೊಂಡ ಬಂಜಾರ ಸಮುದಾಯದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೂತನ ಕಾರ್ಯಕರ್ತರಿಗೆ ಶಾಲು ಹೊದಿಸಿ ಅವರು ಮಾತನಾಡಿದರು.
ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಜನರಿಗೆ ನಮ್ಮ ಪಕ್ಷ ನೀಡಿದ ಎಲ್ಲ ಭರವಸೆಗಳನ್ನು ಉಸಿ ಹೋಗದಂತೆ ಇಡೇರಿಸುತ್ತ ಬಂದಿದೆ, ಪಂಚ ಗ್ಯಾರಂಟಿ ಮದ್ಯದಲ್ಲಿ ನಮ್ಮ ಸರ್ಕಾರ ಎಲ್ಲ ಕ್ಷೇತ್ರದ ಅಭಿವೃದ್ದಿಗೂ ಕೂಡಾ ಅನುದಾನವನ್ನು ನೀಡುತ್ತಿದೆ, ಮುಂದೆ ಉಳಿದ ಅಧಿಕಾರದ ಅವಧಿಯಲ್ಲಿಯೂ ಉತ್ತಮ ಆಡಳಿತ ನೀಡಲಿದೆ ಎನ್ನುವ ಭರವಸೆ ಕೂಡಾ ಇದೆ. ನೂತನವಾಗಿ ಪಕ್ಷದಲ್ಲಿ ಸೇರ್ಪಡೆಗೊಂಡ ಕಾರ್ಯಕರ್ತರು ಪಕ್ಷದ ಸಿದ್ದಾಂತ ತಿಳಿದುಕೊಂಡು ಕೆಳ ಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದರೆ ಪಕ್ಷ ನಿಮ್ಮನ್ನು ಗುರುತಿಸಿ ತಕ್ಕ ಸ್ಥಾನಮಾನ ನೀಡುತ್ತದೆ ಎಂದರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಗಂಗಾರಾಮ ಮಹಾರಾಜ, ಆಲಮೇಲ ಪಟ್ಟಣ ಪಪಂ ಅಧ್ಯಕ್ಷ ಸಾಧಿಕ್ ಸುಂಬಡ, ಮಾಜಿ ಜಿ.ಪಂ.ಸದಸ್ಯ ಎನ್ ಆರ್ ತಿವಾರಿ, ಎಂ ಕೆ ಕಣ್ಣಿ, ಎನ್ ಎನ್ ಪಾಟೀಲ, ಪ್ರಕಾಶ ಅಡಗಲ್, ಮುತ್ತಪ್ಪ ಸಿಂಗೆ, ರವಿಕಾಂತ ನಡುವಿನಕೇರಿ, ರಜಾಕ ಬಾಗವಾನ, ಅಮ್ಮಣ್ಣ ಜಮಾದಾರ, ಸಲೀಮ ಕಣ್ಣಿ, ಮಲ್ಲು ಗೋಲಾ, ಶ್ರೀಮಂತ ಪವಾರ, ವಸಂತ ಈಳಗೇರ, ಶಿವಾನಂದ ಕೆರಿಗೊಂಡ, ಲೋಕಪ್ಪ ರಾಠೋಡ, ದಾದು ಜಾದಾವ, ಶ್ರೀಮಂತ ರಾಠೋಡ, ವಿನೋದ ರಾಠೋಡ, ಸಂಜು ರಾಠೋಡ, ಮೋಹನ ಪವಾರ, ಮನ್ನು ಚವ್ಹಾಣ, ಸೆರಿದಂತೆ ಅನೇಕ ಕಾರ್ಯಕರ್ತರು ಇದ್ದರು.
“ಮೋರಟಗಿ ಸುತ್ತಲಿನ ಗ್ರಾಮಗಳಲ್ಲಿ ಇಗಾಗಲೆ ಪ್ರತ್ತೇಕ ತಾಂಡಾಗಳಿವೆ ಮೋರಟಗಿ ಹೋಬಳಿ ಹಂತದಲ್ಲಿದ್ದರೂ ಭಂಜಾರಾ ಸಮುದಾಯದವರಿಗೆ ಪ್ರತ್ತೇಕ ತಾಂಡಾ ಇಲ್ಲ ಎಂದು ಮನವಿ ನೀಡಿದ್ದಾರೆ ಅವರಿಗೆ ಮೂಲಭೂತ ಸೌಕರ್ಯದೊಂದಿಗೆ ಶೀರ್ಘದಲ್ಲಿ ಪ್ರತ್ತೇಕ ತಾಂಡ ನಿರ್ಮಾಣದ ವ್ಯವಸ್ತೆ ಮಾಡುತ್ತೇನೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

