ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ರೈತರಿಗೆ ಹಾಗೂ ವ್ಯಾಪಾರಸ್ತರಿಗೆ ಸಮರ್ಪಕ ಸೇವೆಗಳನ್ನು ನೀಡುವ ಮೂಲಕ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವರ್ಷದಿಂದ ವರ್ಷಕ್ಕೆ ಲಾಭದಲ್ಲಿ ಪ್ರಗತಿ ಹೊಂದುತಿದ್ದು ಇದಕ್ಕೆ ಸದಸ್ಯರು ಹಾಗೂ ಸಿಬ್ಬಂದಿಗಳ ಸಹಕಾರವೇ ಕಾರಣವೆಂದು ಪಿಕೆಪಿಎಸ್ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ ಹೇಳಿದರು.
ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಪಿಕೆಪಿಎಸ್ ೮೫.೪೫ ಲಕ್ಷ ಲಾಭಗಳಿಸಿದ್ದು ಸಂಘದ ಸದಸ್ಯರಿಗೆ ಶೇ, ೧೫ ಲಾಭಾಂಶ ನೀಡಲಾಗುವುದು. ಸಹಕಾರಿ ಸಂಘಗಳ ಏಳಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಸಾಲ ತೆಗೆದುಕೊಳ್ಳುವುದಷ್ಟೆ ಅಲ್ಲ, ಠೇವಣಿ ಇಡುವ ಮೂಲಕ ಅಭಿವೃದ್ಧಿಗೆ, ಪ್ರಗತಿಗೆ ಸಂಘದ ಸದಸ್ಯರು ಆಲೋಚಿಸಬೇಕು. ಶೀಘ್ರದಲ್ಲಿಯೇ ಬಿಡಿಸಿಸಿ ಬ್ಯಾಂಕ್ ಶಾಖೆ ಗ್ರಾಮದಲ್ಲಿಯೇ ಆರಂಭವಾಗಲಿದ್ದು ಇದರಿಂದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಪರಪ್ಪಾ ಪಾಲಬಾಂವಿ, ಗುರಲಿಂಗಪ್ಪ ಪೂಜಾರಿ, ನಿಂಗಣ್ಣ ಪೂಜಾರಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚನ್ನಪ್ಪ ಬಿಳ್ಳೂರ ವಹಿಸಿದ್ದರು, ಉಪಾಧ್ಯಕ್ಷ ಪ್ರಭು ಗೋವಿಂದಗೋಳ, ಗ್ರಾಮದ ಪ್ರಮುಖರಾದ ಪುಂದಲಿಕಪ್ಪ ಪೂಜಾರಿ
ಅಣ್ಣಪ್ಪಗೌಡ ಪಾಟೀಲ, ಆರ್.ಎಂ.ಬಗನಾಳ, ಬಿ.ಎಸ್.ಪಾಟೀಲ, ಹಣಮಂತ ನೇಸೂರ, ರಾಮಪ್ಪ ಜಗದಾಳ, ಹಣಮಂತ ಕೋಳಿ, ವಿರುಪಾಕ್ಷ ಕುದರಿ, ಸಿದ್ರಾಮಪ್ಪ ಮುನ್ನೋಳಿ, ಶ್ರೀಮತಿ ಅಣ್ಣಪೂರ್ಣ ಮುಗಳಖೋಡ, ಶ್ರೀಮತಿ ಯಮನವ್ವ ನಾವಿ, ಅಶೋಕ ದಡೂತಿ, ಭೀರಪ್ಪ ಹಳಮನಿ, ದುಂಡಪ್ಪ ಪಾಟೀಲ, ಶಂಕರಗೌಡ ಪಾಟೀಲ, ಜಿ.ಎಲ್.ಬಳಗಾರ, ಪಿ.ಡಿ.ನೇಸೂರ, ರಾಚಯ್ಯ ಮಠಪತಿ ಇನ್ನಿತರರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಸಂಘದ ಪ್ರಗತಿಗೆ ಶೃಮಿಸಿದ ಸಿಬ್ಬಂದಿಗಳ ಪರವಾರಿ ಮುಖ್ಯಕಾರ್ಯನಿರ್ವಾಹಕ ಎಂ.ವಿ.ವಜ್ಜರಮಟ್ಟಿಯವರನ್ನು ಹಾಗೂ ಚಿಮ್ಮಡ ಹಾಗೂ ಯರಗಟ್ಟಿ ಗ್ರಾಮಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯೂಸಿಯಲ್ಲಿ ಸಾಧನೆ ಮಾಡಿದ ೨೦ಕ್ಕೂ ಹೆಚ್ಚು ವಿದ್ಯಾರ್ಥಿ/ನಿಯರನ್ನು ಸನ್ಮಾನಿಸಿ ಸಹಾಯಧನ ನೀಡಿ ಗೌರವಿಸಲಾಯಿತು ಮುಖ್ಯಕಾರ್ಯನಿರ್ವಾಹಕ ಎಂ.ವಿ.ವಜ್ಜರಮಟ್ಟಿ ವಾರ್ಷಿಕ ವರದಿ ವಾಚಿಸಿದರು.
ಪಿಕೆಪಿಎಸ್‌ನ ಮಲ್ಲಯ್ಯ ಮಠಪತಿ ಸ್ವಾಗತಿಸಿ ನಿರೂಪಿಸಿದರು. ಮಹಾಲಿಂಗ ಹಳ್ಳೂರ ವಂದಿಸಿದರು.

