ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಬೀರಪ್ಪ ನಗರದ ದುರ್ಗಾ ಪರಮೇಶ್ವರಿ ಮಿತ್ರ ಮಂಡಳಿ, ಭುವನೇಶ್ವರಿ ತರುಣ ಮಂಡಳಿ ಕುಂಬಾರ ಓಣಿ, ಶ್ರೀ ಅಂಬಾ ಭವಾನಿ ನವ ತರುಣ ಮಂಡಳಿ ಚವಡಿ ಓಣಿ ಇವರಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಂಬಾಭವಾನಿ ದೇವಿ ಭವ್ಯ ಮೆರವಣೆಗೆ ನಡೆಯಿತು.
ಭಕ್ತಾದಿಗಳು ತಮ್ಮ ಮನೆಯ ಮುಂದೆ ಮೆರವಣೆಗೆ ಬಂದಾಗ ದೇವಿ ವಾಹನಕ್ಕೆ ನೀರು ಹಾಕಿಪೂಜೆ ಮಾಡುವದು ಸಾಮಾನ್ಯವಾಗಿತ್ತು.
ದೇವಿಯನ್ನು ಟ್ರ್ಯಾಕ್ಟರಗಳಲ್ಲಿ ಸಿಂಗರಿಸಿ ಡೊಳ್ಳು ಕುಣಿತ, ಬಾಂಜೋ ಸೇರಿದಂತೆ ಬಾಜಾ ಬಜಂತ್ರಿಯೊಂದಿಗೆ ಆಕರ್ಷಕ ಮೆರವಣೆಗೆ ನಡೆಯಿತು.ಮಹಿಳೆಯರು ಆರತಿ ಹಿಡಿದು ಪಾಲ್ಗೊಂಡಿದ್ದರು.
ತುಳಜಾಪುರ ತಾಯಿಗೆ ಉಧೋ ಉಧೋ , ಅಂಬಾಭವಾನಿ ಉಧೋ ಉಧೋ ಜೈ ಭವಾನಿ ಜೈ ಶಿವಾಜಿ ಘೋಷಣೆಗಳು ಮೊಳಗಿದವು.
ಮೆರವಣೆಗೆ ನಂತರ ಅನ್ನ ಸಂತರ್ಪಣೆ ನಡೆಯಿತು.
ಇದಕ್ಕೂ ಮೊದಲು ಬೆಳಿಗ್ಗೆ ತುಳಜಾಪುರದಿಂದ ತಂದ ದೀಪವನ್ನು ಮೆರವಣಿಗೆ ಮೂಲಕ ತಂದು ದೀಪ ಹಚ್ಚಲಾಯಿತು.

