ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಿಸಿ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ರಾಷ್ಟ್ರೀಯ ಪೋಷಣ ಅಭಿಯಾನದ ಉದ್ದೇಶವನ್ನು ಅರಿತು, ಅಪೌಷ್ಠಿಕತೆ ಯ ಜಾಗೃತಿ ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸಬೇಕು ಎಂದು ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರಾವದಗಿ ಹೇಳಿದರು.
ಸಮೀಪದ ಗೋನಾಳ ಗ್ರಾಮದಲ್ಲಿ ವಂದಾಲ ವಲಯದ ಜರುಗಿದ ರಾಷ್ಟ್ರೀಯ ಪೋಷಣ ಅಭಿಯಾನ, ಗರ್ಭಿಣಿಯರಿಗೆ ಸೀಮಂತ ಕಾರ್ಯ, ಬೇಟಿ ಪಢಾವೋ, ಬೇಟಿ ಬಚಾವೋ ಹಾಗೂ ಮಾತೃವಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವನಬಾಗೇವಾಡಿ ಸಿಡಿಪಿಓ ಶಿಲ್ಪಾ ಹಿರೇಮಠ ಮಾತನಾಡಿ, ಮಹಿಳೆಯರು ತಮ್ಮ ಜತೆಗೆ ಮಕ್ಕಳನ್ನು ಆರೋಗ್ಯವಂತರನ್ನಾಗಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು. ಮಹಿಳೆಯರು ಪೋಷಣಾ ಅಭಿಯಾನದಡಿ ದೊರೆಯುವ ಹಲವು ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿರೇಶ ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಮಕ್ಕಳು “ಹಳ್ಳಿಯ ಮನೆ’ ಎಂಬ ವಿಶೇಷ ಪ್ರದರ್ಶನ ಜರುಗಿತು. ಪೌಷ್ಠಿಕ ಆಹಾರಗಳ ಪ್ರದರ್ಶನ, ಗರ್ಭೀಣಿಯರ ಸೀಮಂತ ಕಾರ್ಯಕ್ರಮ ಜರುಗಿತು. ಹೆಣ್ಣು ಮಗುವಿನ ಹುಟ್ಟುಹಬ್ಬ ಆಚರಿಸಿ “ಬೇಟಿ ಪಡಾವೋ, ಬೇಟಿ ಬಚಾವೋ” ಬಗ್ಗೆ ತಿಳಿಸಲಾಯಿತು.
ಈರಮ್ಮ ಹಳ್ಳದ, ಸವಿತಾ ನಾಗರಾಳ, ಡಿ.ಎನ್
ಕಾಗಲ್, ಪಿಡಿಓ ಮಲ್ಲಿಕಾರ್ಜುನ ಹಾವರಗಿ ಸೇರಿದಂತೆ ಇತರರು ಇದ್ದರು.

