ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ತಿಕೋಟಾ ಹಾಗೂ ಬಬಲೇಶ್ವರ ಪಟ್ಟಣ ಪಂಚಾಯತಿಗಳ ಪುನರ್ ವಿಂಗಡಣೆ ಮಾಡಿ, ಉಪವಿಭಾಗಾಧಿಕಾರಿಗಳು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಸದರಿ ಅಧಿಸೂಚನೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಪಟ್ಟಣ ಪಂಚಾಯತಿಗಳ ಪುನರ್ ವಿಂಗಡೆ ಮಾಡಿ ಹೊರಡಿಸಿದ ಅಧಿಸೂಚನೆಗೆ ಏನಾದರೂ ಆಕ್ಷೇಪಣೆಗಳು ಅಥವಾ ಸಲಹೆಗಳಿದ್ದಲ್ಲಿ ಲಿಖಿತ ರೂಪದಲ್ಲಿ ಉಪವಿಭಾಗಾಧಿಕಾರಿಗಳು ವಿಜಯಪುರ ಇವರಿಗೆ ೦೪-೧೦-೨೦೨೫ರೊಳಗಾಗಿ ಸಲ್ಲಿಸಬಹುದಾಗಿದೆ. ನಿಗದಿತ ಅವಧಿ ಮೀರಿ ಬಂದ ಯಾವುದೇ ಸಲಹೆ ಹಾಗೂ ಆಕ್ಷೇಪಣೆಗಳನ್ನು ಪುರಸ್ಕರಿಸಲಾಗುವುದಿಲ್ಲ, ಎಲ್ಲ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
