ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಧರ್ಮಗಳಿಗೆ ಕೇಂದ್ರ ಸರಕಾರದಿಂದ ಸಂವಿಧಾನಾತ್ಮಕ ಮಾನ್ಯತೆ ದೊರಕದೇ ಇರುವ ಕಾರಣ ಸೆ.೨೨ರಂದು ಆರಂಭವಾಗುವ ಜಾತಿ ಗಣತಿಯಲ್ಲಿ ಕರ್ನಾಟಕದ ಅಖಂಡ ವೀರಶೈವ ಲಿಂಗಾಯತ ಸಮಾಜವು ಧರ್ಮದ ಕಾಲಂ ೮ರಲ್ಲಿ ಹಿಂದೂ, ಜಾತಿಯ ಕಾಲಂ ೯ರಲ್ಲಿ ವೀರಶೈವ ಲಿಂಗಾಯತ (ಎ-೧೫೨೪), ಉಪಜಾತಿ ಕಾಲಂ ೧೦ರಲ್ಲಿ ಅವರವರ ಉಪಪಂಗಡಗಳನ್ನು ನಮೂದಿಸಬೇಕೆಂದು ಬೆಂಗಳೂರು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಿಸುವುದರಿಂದ ನಾವೆಲ್ಲರೂ ಹಿಂದೂ ಸಮಾಜದ ಅವಿಭಾಜ್ಯ ಅಂಗ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯ ಸರಕಾರವೇ ಹೇಳಿದಂತೆ ಇದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಗಣತಿಯ ಹೊರತು ಜಾತಿ ಗಣತಿಯಲ್ಲವಾದರೂ ಜಾತಿ ಕಾಲಂ ಕಡ್ಡಾಯವಾಗಿ ನಮೂಧಿಸಲೆಬೇಕಾಗಿರುವುದರಿಂದ ಜಾತಿಯ ಜೊತೆ ಜನಸಂಖ್ಯೆಯ ಗಣತಿಯೂ ಆಗಿರುತ್ತದೆ. ಗಣತಿಯ ಸಂದರ್ಭದಲ್ಲಿ ಜನ ಸಾಮಾನ್ಯರು ತಮ್ಮ ಗಣತಿಯ ನಂತರ ಕಡ್ಡಾಯವಾಗಿ ಗಣತಿ ಪತ್ರದ ಭಾವಚಿತ್ರ ತೆಗೆದುಕೊಳ್ಳಬೇಕು. ಗಣತಿದಾರರು ಪೋಟೋ ತೆಗೆಯಲು ನಿರಾಕರಣೆ ಮಾಡುವಂತಿಲ್ಲ. ಹಾಗೊಂದು ವೇಳೆ ನಿರಾಕಕರಿಸಿದರೆ ತಹಶೀಲ್ದರಾರರಿಗೆ ದೂರು ಸಲ್ಲಿಸಬಹುದು.
ಹುಬ್ಬಳ್ಳಿ ಹಾಗೂ ದಾವಣಗೆರೆಯಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿ ವೀರಶೈವ ಲಿಂಗಾಯತ ಹಿಂದೆ ಇಂದು ಮತ್ತು ಮುಂದೆ ಎಂದೆಂದೂ ಒಂದೇ ಎಂಬ ಅಖಿಲ ಭಾರತ ವೀರಶೈವ ಮಹಾಸಭೆಯ ಘೋಷಣೆಯನ್ನು ಮುಕ್ತ ಕಂಠದಿAದ ಶ್ಲಾಘಿಸುತ್ತೇವೆ.
ಈ ಎರಡೂ ಸಮಾವೇಶಗಳ ನಿರ್ಣಯಗಳ ಆಧಾರದಲ್ಲಿ ಸಂಸ್ಥೆಯು ಕಾನೂನು ಪರಿಣಿತರ ಅಭಿಪ್ರಾಯದಂತೆ, ಹಿಂದೂ ಧರ್ಮದಲ್ಲಿ ಮಾತ್ರ ಲಭ್ಯವಿರುವ ಕಾನೂನಿನಂತೆ ಜಾತಿ-ಉಪಜಾತಿ ಆಧಾರಿತ ಮೀಸಲಾತಿ ಸೌಲಭ್ಯಗಳು ಈಗಾಗಲೇ ಹಲವು ವೀರಶೈವ ಲಿಂಗಾಯತ ಉಪ ಪಂಗಡಗಳಿಗೆ ಲಭಿಸುತ್ತಿದ್ದು, ಅವುಗಳಿಂದ ಯಾವ ಉಪ-ಪಂಗಡವೂ ವಂಚಿತವಾಗಬಾರದೆAದಲ್ಲಿ, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಕರ್ನಾಟಕ ರಾಜ್ಯದ ಅಖಂಡ ವೀರಶೈವ ಲಿಂಗಾಯತ ಸಮಾಜಕ್ಕೆ ಕರೆ ನೀಡುತ್ತದೆ ಎಂದರು.
ಈ ವೇಳೆ ಶ್ರೀಮಠ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಅಶೋಕ ವಾರದ, ಶ್ರೀಶೈಲ ನಂದಿಕೋಲ ಇದ್ದರು.

