ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಅಬಕಾರಿ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ಬಿಎಲ್‌ಡಿಇ ಕಾಲೇಜಿನ ದರ್ಬಾರ್ ಹಾಲ್‌ನಲ್ಲಿ ಬೆಂಗಳೂರು ರಾಜೀವ್ ಗಾಂಧಿ ಯೂನಿವರ್ಸಿಟಿ ಹೆಲ್ತ್ ಸೈನ್ಸ್, ಬಿಎಲ್‌ಡಿಇ ನರ್ಸಿಂಗ್ ಕಾಲೇಜು ಆಶ್ರಯದಲ್ಲಿ ನಡೆದ ಪುರುಷರ ಇಂಟರ್ ಜೋನ್, ಮಹಿಳೆಯರ ಸಿಂಗಲ್ ಜೋನ್ ಕಬಡ್ಡಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಬಡ್ಡಿ ಮತ್ತು ಸೈಕ್ಲಿಂಗ್ ಕ್ರೀಡಾಪಟಗಳಿಗೆ ಜಮಖಂಡಿ ಕೊಡುಗೆ ಬಹಳಷ್ಟು ಇದೆ, ಕ್ರೀಡೆಗಳಲ್ಲಿ ಸೋಲು ಗೆಲುವು ಇದ್ದೆ ಇರುತ್ತದೆ ಸೋತವರು ನಾಳಿಯ ಗೆಲುವುವಿಗೆ ಮೆಟ್ಟಿಲು ಮಾಡಿಕೊಳ್ಳಬೇಕು, ಗೆದ್ದವರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯ ಮಟ್ಟದಲ್ಲಿ ಬೆಳೆಯಬೇಕು ಎಂದರು.
ನನ್ನ ರಾಜಕೀಯ ಗುರುಗಳು ನನ್ನನ್ನು 27 ವಯಸ್ಸನಲ್ಲಿ ಎಂಎಲ್‌ಎ ಸ್ಥಾನಕ್ಕೆ ನಿಲ್ಲಿಸಿದರು, ನನ್ನ ಗುರುಗಳು ಎಂಪಿ ಸ್ಥಾನಕ್ಕೆ ನಿಂತರು ಆದರೆ ಕಬಡ್ಡಿ ಕ್ರೀಡಾಪಟುವಾಗಿದ್ದ ನನಗೆ ನನ್ನ ಗೆಳೆಯರು ನನ್ನ ಗುರುಗಳಿಂತ ಹೆಚ್ಚಿಗೆ ಮತ ನೀಡಿದ್ದರು ಇದಕ್ಕೆ ಗುರುಗಳು ಕೂಡಾ ಅಚ್ಚರಿ ವ್ಯಕ್ತಪಡಿಸಿದ್ದರು ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಜಮಖಂಡಿ ಕ್ರೀಡೆಗಳಿಗೆ ತನ್ನದೆ ಛಾಪುಮೂಡಿಸಿದೆ, ದೇಶಕ್ಕೆ ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಪಟುಗಳನ್ನು ನೀಡಿದೆ, ಪ್ರೋ ಕಬಡ್ಡಿ ಕ್ರೀಡಾಕೂಟದಿಂದ ಇಂದು ಯುವ ಜನತೆ ಕಬಡ್ಡಿಗೆ ಹೆಚ್ಚಿನ ಒಲವು ತೊರುತಿದ್ದಾರೆ, ಜಮಖಂಡಿ ಸಿದ್ದು ನ್ಯಾಮಗೌಡ ಅಕಾಡೆಮಿಯಿಂದ 3ಜನ ಪ್ರೋ ಕಬಡ್ಡಿಗೆ ಆಯ್ಕೆಯಾಗಿದ್ದು ಹೆಮ್ಮೆಯ ಮೂಡಿಸಿದೆ, ಕ್ರೀಡಾಪಟುಗಳು ತಮ್ಮ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ.ವೀರಭದ್ರಪ್ಪ ಜಿ.ಎಂ., ವಿ.ನಾಥನಿಲ್, ಐ.ಎಸ್.ನ್ಯಾಮಗೌಡ, ಧರ್ಮೇಂದ್ರ ಇತರರು ಇದ್ದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿ ವಂದಿಸಿದರು.

