ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದ ಅಂಚೆ ಕಚೇರಿಯಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಕಳೆದ ಕೆಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದು, ಇದರಿಂದಾಗಿ ರೈಲ್ವೆ ಪ್ರಯಾಣಿಕರು ಅನಗತ್ಯ ತೊಂದರೆ ಎದುರಿಸುತ್ತಿದ್ದಾರೆ ಆದ್ದರಿಂದ ಸರಾಫ್ ಬಜಾರ್‌ನ ವ್ಯಾಪಾರಸ್ಥರಿಂದ ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ತೆರೆಯಲು ವ್ಯಾಪಾರಸ್ಥರಿಂದ ಪೋಸ್ಟ್ ಮಾಸ್ಟರ್ ಎಸ್.ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಮೇಶ್ ಕೊಠಾರಿ, ರಮೇಶ್ ಮೆಹ್ರಾ, ಮುಖೇಶ್ ಜೈನ್, ಸಂದೀಪ್ ವರ್ಮಾ, ಬಾಲ್ ಕಿಸಾನ್ ವರ್ಮಾ, ದಾಮೋದರ್ ವರ್ಮಾ, ಸುರೇಶ್ ವರ್ಮಾ, ವಿಮಲ್ ಓಸ್ವಾಲ್, ಕಿರಣ್ ಓಸ್ವಾಲ್, ರಾಜೇಶ್ ಓಸ್ವಾಲ್, ನರೇಂದ್ರ ಭಂಡಾರಿ, ಮಂದರ್ ಓಸ್ವಾಲ್, ಪಿಂಟು ಓಸ್ವಾಲ್, ದರ್ಶನ್ ಓಸ್ವಾಲ್, ರಾಜೇಶ್ ಜೈನ್, ರಾಮದೇವ್ ವರ್ಮಾ, ಗೌರವ್ ವರ್ಮಾ ಇತರರು ಇದ್ದರು.

