ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿ ಸುರಿದ ಮಳೆಯಿಂದಾಗಿ ಬೋರಿ ಹಳ್ಳ ತುಂಬಿ ಬಂದಿದ್ದು ತಾಲೂಕಿನ ಜೇವರ್ಗಿ ಬಿ ಗ್ರಾಮದ ಶಾಲೆಯ ಮೈದಾನಕ್ಕೆ ನೀರು ನುಗ್ಗಿದರ ಪರಿಣಾಮ ಶಾಲೆಗೆ ರಜೆ ಘೋಷಿಸಲಾಗಿದೆ
ಪ್ರತಿ ವರ್ಷ ಬೋರಿಹಳ್ಳ ತುಂಬಿ ಬಂದಾಗ ಹಾಗೂ ಜೋರಾಗಿ ಮಳೆ ಸುರಿದಾಗ ಶಾಲಾ ಆವರಣಕ್ಕೆ ನೀರು ನುಗ್ಗಿ ತೊಂದರೆ ಮಾಡುತ್ತದೆ ಇದು ಪ್ರತಿ ವರ್ಷದ ಸಮಸ್ಯೆಯಾಗಿ ಕಾಡುತ್ತಿದೆ
ಶಾಲೆಯ ಹಲವು ಗೋಡೆಗಳು ಬಿರುಕು ಬಿಟ್ಟಿದ್ದು ಸತತ ಮಳೆ ಬಂದಾಗ ಮೇಲ್ಚಾವಣಿ ಸೋರುವುದು ಇದರಿಂದ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಶಾಲೆಯನ್ನು ಬೆರಡೆ ಸ್ಥಳಾಂತರಿಸಿ ಪರ್ಯಾಯ
ವ್ಯವಸ್ಥೆ ಮಾಡಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷ ಶಿವರುದ್ರ ಜೋಗದೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈಗಾಗಲೇ ಜಾಸ್ತಿ ಮಳೆ ಬಂದ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಆದರೆ ಪದೇ ಪದೇ ಹೇಗಾಗುವುದರಿಂದ ಮಕ್ಕಳ ಅಭ್ಯಾಸದ ಮೇಲೆ ಪರಿಣಾಮವಾಗುತ್ತದೆ ಆದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.

