ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕಿನ ರೇವೂರ(ಬಿ) ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಾನಂದ ಮಲಕಾಜ ಹಾಗೂ ಉಪಾಧ್ಯಕ್ಷರಾಗಿ ಸಂಗೀತಾ ಉಡಗಿ ಆಯ್ಕೆಯಾಗಿದ್ದಾರೆ
ಚುನಾವಣೆ ನಡೆಯುವ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸ್ಥಾನಕ್ಕೆ ಈ ಇಬ್ಬರು ಮಾತ್ರ ನಾಮ ಪತ್ರ ಸಲ್ಲಿಸಿದ ಪ್ರಯುಕ್ತ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಪರಶುರಾಮ ಘೋಷಿಸಿದರು
ರೇವೂರ್ (ಬಿ), ಅಂಕಲಗಾ, ಸಿಧನೂರ, ಚಿಕ್ಕರೇವೂರ, ಕುಲಾಲಿ, ಅರ್ಜುಣಗಿ ಗ್ರಾಮಗಳ ರೈತರನ್ನೊಳಗೊಂಡ ಪತ್ತಿನ ಸಹಕಾರ ಸಂಘ ಇಲ್ಲಿ ಸೇವೆ ಸಲ್ಲಿಸುತ್ತಿದೆ.
ಈ ಸಂದರ್ಭದಲ್ಲಿ ಶ್ರೀಶೈಲ ಶಿವಶರಣಪ್ಪ ಪಾಟೀಲ, ಭೀಮರಾಯ ಮಹಾಂತಪ್ಪ ಪಾಟೀಲ, ಗುಂಡರಾಯ ಪಾಟೀಲ, ಸಿದ್ದಣ್ಣ ಮಲ್ಲಪ್ಪ ಸಾಗರ, ಶಿವಕುಮಾರ ಪಾಟೀಲ, ಮಲ್ಲಿಕಾರ್ಜುನ ಜಮಾದಾರ, ಗುರು ನಂದರ್ಗಿ, ಮಹೀಬುಬ್ ಪಟೇಲ್, ಶ್ರೀಮಂತ ಶರಣಪ್ಪ, ಅಶ್ವಿನಿ ರಾಜಕುಮಾರ ಕಲಶೆಟ್ಟಿ ಮತ್ತಿತರರು ಇದ್ದರು
ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಗುಲಾಲು ಹಂಚಿ ಸಂಭ್ರಮಿಸಿದರು.

