ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಾಗಲಕೋಟೆ ರಸ್ತೆಯ ಸಿದ್ದೇಶ್ವರ ಲೇಔಟ್ ಕೆ ಎಚ್ ಬಿ ಯಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಶ್ರೀ ಕೊರವಂಜಿ ದೇವಿ ಜಾತ್ರಾ ಮಹೋತ್ಸವ ಶನಿವಾರ ಆದ್ದೂರಿಯಿಂದ ನಡೆಯಿತು.
ನಗರದ ಮಧ್ಯ ಭಾಗದಲ್ಲಿರುವ ಸಿದ್ದೇಶ್ವರ ಲೇಔಟ್ ಆವರಣದಲ್ಲಿ ಕೊರವಂಜಿ ದೇವಿ ವಿಗ್ರಹವನ್ನು ದೇವಸ್ಥಾನದ ಪ್ರಧಾನ ಆರ್ಚಕರಿಂದ ಸ್ವಚ್ಫಗೊಳಿಸಿ ನಾನಾ ಬಗೆಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಾ ಮಂಗಳಾರತಿ ನೆರವೇರಿಸಲಾಯಿತು.
ನಂತರ ಭಕ್ತರಿಗೆ ದರ್ಶನ ಪಡೆದರು. ನೂರಾರು ಭಕ್ತರು ತಮ್ಮ ಮನೆಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಕೊಂಡು ಎಡೆ ಇಟ್ಟು ಕೊರವಂಜಿ ದೇವಿ ವಿಗ್ರಹ ಮುಂದೆ ಪೂಜೆ ಸಲ್ಲಿಸಿದರು.
51 ಮುತ್ತೈದೆ ಮಹಿಳೆಯರು ಕುಂಭ ಹೊತ್ತು ಸಿದ್ದೇಶ್ವರ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿ, ತಮಟೆ ಸೇರಿದಂತೆ ನಾನಾ ಕಲಾತಂಡಗಳಿಂದ ಮೆರವಣಿಗೆ ನಡೆಸಲಾಯಿತು.
ಬಳಿಕ ಮಹಿಳೆಯರು ತಮ್ಮ ಮನೆಗಳ ಮುಂಭಾಗದಲ್ಲಿ ಮೆರವಣಿಗೆ ಸಾಗುವ ದಾರಿಯೂದ್ದಕ್ಕೂ ಸರತಿ ಸಾಲಿನಲ್ಲಿ ನಿಂತು ಕೊರವಂಜಿ ದೇವಿಯ ದರ್ಶನ ಪಡೆದರು.ನಂತರ ದೇವಸ್ಥಾನದಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ದೇವಸ್ಥಾನದ ಆವರಣದಲ್ಲಿ ಎಲ್ಲಾ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಯಿತು
ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಸದಸ್ಯರಾದ
ಮಲ್ಲಿಕಾರ್ಜುನ್ ರತ್ನ ಶೆಟ್ಟಿ ಶರಣಗೌಡ ಬಿರಾದರ್ ಪ್ರದೀಪ್ ಕುಮಾರ್ ಕೋವಳ್ಳಿ ಸಾಯಬಗೌಡ ಪಾಟೀಲ್ ಸಾಸನೂರ್ ವೀರೇಶ್ ಸಜ್ಜನ ಅನ್ನಪೂರ್ಣ ಬಿರಾದರ್ ಶ್ರೀದೇವಿ ನಾಗರಾಜ್ ಸುನಿತಾ ಕೋವಳ್ಳಿ
ಜಯಶ್ರೀ ಸಾಸನೂರ್ ಲಕ್ಷ್ಮಿ ಕೋರಿ ಭಾಗ್ಯಶ್ರೀ ಅವಟಿ ಇತರರಿದ್ದರು