ವಿಮೆಯಲ್ಲಿ ರೈತರ ಜೀವನದ ಜೊತೆ ಚಲ್ಲಾಟ ಆಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂಗಮೇಶ ಸಗರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಫಸಲ್ ಭೀಮಾ ಯೋಜನೆಯಡಿ ಕೋರವಾರ ಗ್ರಾಮದಲ್ಲಿ ನಡೆದ ಮಧ್ಯವರ್ತಿಗಳಿಂದ ರೈತರಿಗೆ ಆಗಿರುವ ಮೋಸವನ್ನು ತನಿಖೆ ಮಾಡಿ ಶಾಮಿಲಾಗಿರುವ ಇಲಾಖೆ ಅಧಿಕಾರಿಗಳು, ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ಸಿ.ಎಸ್.ಸಿ ಸೇಂಟರ್ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಜೊತೆಗೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಲೆ ವಿಮೆಯಲ್ಲಿ ೬೦*೪೦ ಅನುಪಾತದಲ್ಲಿ ಸುಮಾರು ೫ ಕೋಟಿ ಭ್ರಷ್ಠಾಚಾರದ ರೂವಾರಿಗಳನ್ನು ಜೈಲಿಗೆ ಕಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸದರು
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ, ಕಳೆದ ವರ್ಷ ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ರೈತರಿಗೆ ಗೊತ್ತಾಗದಂತೆ ಅಧಿಕಾರಿಗಳ ಶಾಮಿಲಿನಿಂದಾಗಿ ೨೫ ಲಕ್ಷಕ್ಕೂ ಅಧಿಕ ಹಣವನ್ನು ಮಧ್ಯವರ್ತಿ ಶಿವರಾಜ ಅಮರಖೇಡ ಎಂಬ ವ್ಯಕ್ತಿಯಿಂದಾಗಿ ರೈತರಿಗೆ ಆಗಿರುವ ಅನ್ಯಾಯವನ್ನು ತಡೆದು ಅದರಲ್ಲಿ ಶಾಮಿಲಾಗಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಅವರಿಗ್ಗೆ ತಕ್ಕ ಪಾಠ ಕಲಿಸುವಂತೆ ಹೋರಾಟ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ವೇಳೆ ಸಮಿತಿ ರಚಿಸಿ ತನಿಖೆ ಮಾಡುವುದಾಗಿ ಹೇಳಿದ್ದರು.
ಇಲ್ಲಿಯವರೆಗೆ ತನಿಖೆ ಮಾಡಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಿಲ್ಲ, ಕೂಡಲೇ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ರೀತಿ ಜೈಲಿಗೆ ಕಳಿಸಬೇಕು ಹಾಗೆ ಇದು ಮತ್ತೆ ಮತ್ತೆ ಆಗಬಾರದು, ಫಸಲ್ ಭೀಮಾ ಯೋಜನೆ ರೈತರ ಅನುಕೂಲಕ್ಕಾಗಿ ರೈತ ಆತ್ಮಹತೈ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರ ಮಾಡಿರುವ ಅತ್ಯುತಮ ಯೋಜನೆ ಆಗಿದೆ, ಈ ರೀತಿ ಮೋಸ ಆದರೆ ಮುಂದೆ ರೈತರು ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಕಳೆದುಕೊಳ್ಳುತ್ತಾರೆ, ಕೂಡಲೇ ಕೋರವಾರದ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು
ಈ ವೇಳೆ ವಿಜಯಪುರ ಕಾರ್ಯಾಧ್ಯಕ್ಷರಾದ ಪ್ರಕಾಶ ತೇಲಿ ಅವರು ಮಾತನಾಡುತ್ತಾ, ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೫ ಕೋಟಿ ಕಡಲೆ ಸಂಬಂದಿಸಿದಂತೆ ೬೦ * ೪೦ ಅನುಪಾತದಲ್ಲಿ ರೈತರಿಗೆ ಹಾಕಿಸುವುದಾಗಿ ಹೇಳಿ ಜಿಲ್ಲೆಯಲ್ಲಿ ಬೇರೆಡೆಗೆ ಬರದ ಪರಿಹಾರ ಅಲ್ಲಿಗೆ ಹೇಗೆ ವಿಶೇಷವಾಗಿ ಬಂದಿರುವುದು ಎಂದು ಅನೇಕ ರೈತರಿಗೆ ಸಂಶಯವಾಗಿದೆ
ಗೋಲಗೇರಿ ವ್ಯಾಪ್ತಿಯ ಕ್ಷೇತ್ರದಲ್ಲಿ ಒಟ್ಟು ಕಡಲೆ ಬಿತ್ತನೆ ಎಷ್ಟು? ಜಿ.ಪಿ.ಎಸ್ ಮಾಡಿರುವವರ ಮಾಹಿತಿ, ಜಿ.ಪಿ.ಎಸ್ ಪೋಟೋ, ತೂಕದ ವಿಡಿಯೋ ವದಗಿಸಬೇಕು, ಹಾಗೂ ಇಲ್ಲಿ ಯಾವುದೇ ರೈತರಿಗೆ ಅನ್ಯಾಯ ಆಗಬಾರದು ಎಂಬುದು ನಮ್ಮ ಆಶಯವಾಗಿದೆ, ಮಧ್ಯವರ್ತಿಗಳಿಗೆ ದುಡ್ಡಿನ ಮಾಡುವ ವ್ಯಾಪಾರ ಇದಾಗಬಾರದು. ಇದರಿಂದ ರೈತರಿಗೆ ಅನ್ಯಾಯವಾಗತ್ತದೆ.
ಇದರಲ್ಲಿ ಶಾಮಿಲಾಗಿರುವ ಸರಕಾರದ ಅಧಿಕಾರಿಗಳು ಹಾಗೂ ವಿಮೆ ಅಧಿಕಾರಿಗಳು ಮಧ್ಯವರ್ತಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಗ್ರಹಿಸುತ್ತಿದ್ದೆವೆ ಎಂದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ವಿಜಯಪುರ ತಾಲೂಕಾ ಅಧ್ಯಕ್ಷರಾದ ಅನಮೇಶ ಜಮಖಂಡಿ, ಉಪಾಧ್ಯಕ್ಷರಾದ ಬಸಗೊಂಡಪ್ಪ ತೇಲಿ, ನಾಗಠಾಣ ಹೋಬಳಿ ಅಧ್ಯಕ್ಷರಾದ ರಾಮಸಿಂಗ ರಜಪೂತ, ಹಿರಿಯರಾದ ಸಂಗಪ್ಪ ಟಕ್ಕೆ, ನಜೀರ ನಂದರಗಿ ಖಾದರ ವಾಲಿಕರ, ಹಿರಿಯರಾದ ಬಸವರಾಜ ಮಸೂತಿ ಸೇರಿದಂತೆ ಇತರರು ಇದ್ದರು.